newsfirstkannada.com

ಶಿಲ್ಪಾ ಶೆಟ್ಟಿ ಗಂಡ ಹಿಂಗ್ಯಾಕಾದ್ರು.. ಜೈಲಿನಿಂದ ರಿಲೀಸ್​​​ ಆದ್ಮೇಲೆ ಮುಖ ಮುಚ್ಕೊಂಡೇ ತಿರುಗೋದ್ಯಾಕೆ..?

Share :

Published September 22, 2023 at 10:14pm

    ಮಾಸ್ಕ್‌ ಅಲ್ಲ ಕೆಲವೊಮ್ಮೆ ಪಿಪಿಇ ಕಿಟ್‌ ಥರಾ ಬಟ್ಟೆನೂ ಹಾಕಿದ್ದಾರೆ!

    ಇವರು ಹಾಕೋ ಡಿಸೈನ್ ಡಿಸೈನ್ ಮಾಸ್ಕ್ ಯಾರು ಹಾಕಿಲ್ಲ! ಯಾಕಿಂಗೆ?

    ಕಳೆದ ವರ್ಷದಿಂದ ರಾಜ್ ಕುಂದ್ರಾ ಅವರು ಎಲ್ಲಿಯೂ ಮುಖ ತೋರಿಸಿಲ್ಲ!

ಕೊರೊನಾ ಬಂದಾಗ ಜನ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ ಅಂತ ಇಡೀ ಜಗತ್ತಿಗೆ ಗೊತ್ತಿದೆ. ಮಾಸ್ಕ್ ಇಲ್ಲದೇ ಒಂದು ಹೆಜ್ಜೆನೂ ಮನೆಯಿಂದ ಆಚೆ ಇಡೋಕೆ ಆಗುತ್ತಿರಲಿಲ್ಲ. ಸುಮಾರು ಎರಡು ವರ್ಷ ಮಾಸ್ಕ್​ ಭಾಗ್ಯದಿಂದ ಜನ ಹೈರಾಣಾಗಿದ್ದರು. ಅದ್ಯಾವಾಗ ಈ ಮಾಸ್ಕ್​ ಸಂಸ್ಕೃತಿ ಹೋಗುತ್ತೆ ಎಂದು ತಲೆಚಚ್ಚಿಕೊಳ್ಳುತ್ತಿದ್ದರು. ಆದ್ರೆ ಇಲ್ಲೊಬ್ಬ ಸ್ಟಾರ್​ ಕೋವಿಡ್​ ಹೋದರು ಮಾಸ್ಕ್​ ಹಾಕೋದನ್ನ ಬಿಡಲಿಲ್ಲ. ಬರೀ ಮಾಸ್ಕ್​ ಮಾತ್ರವಲ್ಲ ಒಂದೊಂದು ಸಲ ಪಿಪಿಇ ಕಿಟ್​ ಹಾಕ್ಕೊಂಡೇ ಓಡಾಡ್ತಾ ಇದ್ದಾರೆ. ಬಾಲಿವುಡ್​ ಬ್ಯೂಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ನಡೆದ ಗಣೇಶ ಸಂಭ್ರಮದಲ್ಲಿ. ಶಿಲ್ಪಾ ಶೆಟ್ಟಿ ಮನೆಯಲ್ಲಿ ಯಾವ ಹಬ್ಬ ಮಾಡ್ತಾರೋ ಇಲ್ವೋ ಗಣೇಶ ಹಬ್ಬವನ್ನು ಮಾತ್ರ ತುಂಬಾ ಗ್ರ್ಯಾಂಡ್​ ಆಗಿ ಸೆಲೆಬ್ರೆಟ್ ಮಾಡ್ತಾರೆ. ವರ್ಷದಿಂದ ವರ್ಷಕ್ಕೆ ಸೆಲಬ್ರೇಷನ್​ ಒಂದು ಲೆವೆಲ್​ ಜಾಸ್ತಿನೇ ಇರುತ್ತೆ ಬಿಡಿ.

View this post on Instagram

A post shared by Manav Manglani (@manav.manglani)

ಅರೇ ಅದ್ಯಾಕೆ ರಾಜ್ ಕುಂದ್ರಾ ಹಿಂಗೆ ಮುಖ ಮುಚ್ಕೊಂಡು ಇದ್ದಾರೆ. ಏನಾಯ್ತು ಅಂತ ಕೇಳಿದ್ರೆ ಅದಕ್ಕೊಂದು ದೊಡ್ಡ ಹಿಸ್ಟರಿನೇ ಇದೆ. ಕಳೆದ ಒಂದು ವರ್ಷದಿಂದ ರಾಜ್ ಕುಂದ್ರಾ ಸಾರ್ವಜನಿಕವಾಗಿ ಎಲ್ಲಿಯೂ ಮುಖ ತೋರಿಸಿಲ್ಲ. ಎಲ್ಲೇ ಹೊರಗೆ ಬಂದ್ರು ಅಲ್ಲೊಂದು ವಿಚಿತ್ರ ಮಾಸ್ಕ್​ ಧರಿಸಿ ಬರ್ತಾರೆ. ಅದು ಯಾವುದೇ ಸ್ಟೇಜ್ ಇರಲಿ, ಯಾವುದೇ ಫಂಕ್ಷನ್ ಆಗಿರಲಿ. ಕುಂದ್ರಾ ಗೆಟಪ್, ವಿಶೇಷವಾಗಿ ಅವರು ಧರಿಸೋ ಮಾಸ್ಕ್​​ ತುಂಬಾನೇ ಸ್ಪೆಷಲ್ ಹಾಗೂ ಗಮನ ಸೆಳೆಯುತ್ತೆ.

ರಾಜ್ ಕುಂದ್ರಾ ಹೀಗೆ ಮಾಸ್ಕ್​ ಧರಿಸೋಕೆ ಶುರು ಮಾಡಿದಾಗ ಬಹಳಷ್ಟು ಜನ ಅಪಹಾಸ್ಯ ಮಾಡಿದ್ದರು. ಆದರೆ ಇದೀಗ ಹೆಂಗಾಗಿದೆ ಅಂದ್ರೆ ಇದನ್ನ ತುಂಬಾ ಫನ್ ಆಗಿ ತಗೋತಿದ್ದಾರೆ. ಕುಂದ್ರಾ ಎಷ್ಟು ವೆರೈಟಿ ಮಾಸ್ಕ್​ ಹಾಕಿರ್ತಾರೆ ಅಂತ ಕ್ಯೂರಿಯಸ್​ ಆಗಿ ನೋಡ್ತಾರೆ. ಅಷ್ಟರ ಮಟ್ಟಿಗೆ ಈಗ ರಾಜ್ ಕುಂದ್ರಾ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಅಷ್ಟಕ್ಕೂ ರಾಜ್ ಕುಂದ್ರಾ ಈ ಮಾಸ್ಕ್​ ಅಭಿಯಾನ ಯಾಕೆ ಶುರು ಮಾಡಿದ್ದಾರೆ ಎಂಬ ಪ್ರಶ್ನೆ ಎದುರಾಗಿದೆ. ಅದು ಜುಲೈ 2022. ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್​ ಆಗ್ತಾರೆ. ತಿಂಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸ್ತಾರೆ.

ಇದನ್ನು ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​​.. ಮತ್ತೆ ಸೀರಿಯಲ್​ಗೆ ಕಮ್​ಬ್ಯಾಕ್​ ಮಾಡಿದ ಕನ್ನಡತಿ ಖ್ಯಾತಿಯ ಅಮ್ಮಮ್ಮ!

ಆ ಮೇಲೆ ಜಾಮೀನು ಪಡೆದು ಹೊರಗೆ ಬರುವ ರಾಜ್ ಕುಂದ್ರಾ ಅವತ್ತಿಂದ ಇವತ್ತಿನವರೆಗೂ ಒಂದೇ ಒಂದು ಸಲನೂ ತಮ್ಮ ಮುಖವನ್ನ ಕ್ಯಾಮೆರಾಗೆ ತೋರಿಸಿಲ್ಲ. ಒಳ್ಳೆ ಸೀಕ್ರೆಟ್​ ಮನುಷ್ಯ ಓಡಾಡೋ ಥರಾ ಎಲ್ಲೇ ಹೋದರು ಮುಖಕ್ಕೊಂದು ಶೀಲ್ಡ್​ ಹಾಕ್ಕೊಂಡು ಹೋಗ್ತಾ ಇದ್ದಾರೆ. ಬಾಲಿವುಡ್​ನ ಪ್ರಭಾವಿ, ಸ್ಟಾರ್​ ನಟಿಯ ಪತಿ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿದ್ರು ಅಂದ್ರೆ ಅದೆಂಥಾ ಅವಮಾನ ಅಲ್ವಾ? ಇಡೀ ದೇಶವೇ ಛೀ ಥೂ ಅನ್ನೋಥರಾ ಅವಮಾನ ಎದುರಿಸಿದ ಕುಂದ್ರಾ ಇಂಥಹದೊಂದು ನಿರ್ಧಾರ ತೆಗೆದುಕೊಂಡಿರೋದರಲ್ಲಿ ಅಚ್ಚರಿ ಏನೂ ಇಲ್ಲ. ಆದ್ರೆ ಎಷ್ಟು ದಿನ ಅಂತ ಹಿಂಗೇ ಓಡಾಡ್ತಾರೆ ಅನ್ನೋದು ಕಾಡ್ತಿದೆ. ಕುಂದ್ರಾ ಅವರ ಈ ಪ್ರೊಟೆಸ್ಟ್​​ ಮೀಡಿಯಾಗಳ ಮೇಲೆ ಅಂತೆ. ಅಶ್ಲೀಲ ವಿಡಿಯೋ ನಿರ್ಮಾಣದ ಕೇಸ್​ನಲ್ಲಿ ಕುಂದ್ರಾ ಅರೆಸ್ಟ್​ ಆದಾಗ ಮಾಧ್ಯಮಗಳು ತುಂಬಾ ಅಗ್ರೆಸ್ಸಿವ್ ಆಗಿ ಕವರೇಜ್ ಮಾಡಿದ್ರು. ವಿವಿಧ ಆಯಾಮಗಳಲ್ಲಿ ಸುದ್ದಿ ಪ್ರಸಾರ ಮಾಡಿದರು.

ಈ ಸುದ್ದಿಗಳಿಂದ ಶಿಲ್ಪಾ ಶೆಟ್ಟಿ ಮತ್ತು ಅವರ ಫ್ಯಾಮಿಲಿ ತುಂಬಾನೇ ಆಘಾತ ಎದುರಿಸಿತ್ತಂತೆ. ಇದರಿಂದ ತುಂಬಾ ನೊಂದುಕೊಂಡಿರುವ ರಾಜ್ ಕುಂದ್ರಾ ಮಾಧ್ಯಮಗಳ ಮೇಲೆ ಇಂಥಹದೊಂದು ಪ್ರತಿಭಟನೆ ಮಾಡ್ತಿದ್ದಾರೆ. ಕ್ಯಾಮೆರಾ ಇರೋ ಕಡೆ ಕುಂದ್ರಾ ಮಾಸ್ಕ್​ ಇಲ್ಲದೇ ಬರೋದೇ ಇಲ್ಲ. ಆದರೆ ಶಿಲ್ಪಾ ಶೆಟ್ಟಿ ಈ ಬಗ್ಗೆ ಎಲ್ಲಿಯೂ ಮಾತಾಡಿಲ್ಲ ಮತ್ತು ವಿರೋಧಿಸಿಲ್ಲ. ಗಂಡನ ಈ ಪ್ರೊಟೆಸ್ಟ್​ಗೆ ಸಪೋರ್ಟ್ ಮಾಡ್ತಿದ್ದಾರೆ. ಪ್ರತಿಯೊಬ್ಬ ಮನುಷ್ಯನಿಗೂ ಕೋಪ ಬರುತ್ತೆ. ಆ ಕೋಪನ ಒಬ್ಬೊಬ್ಬರು ಒಂದೊಂಥರಾ ತೋರಿಸ್ತಾರೆ. ರಾಜ್ ಕುಂದ್ರಾ ತಮ್ಮ ಆಕ್ರೋಶ ಅಥವಾ ತಮ್ಮ ಸಹಾಯಕತೆಯನ್ನ ಈ ರೀತಿ ವಿಚಿತ್ರವಾಗಿ ಪ್ರದರ್ಶಿಸ್ತಿದ್ದಾರೆ ಅಷ್ಟೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಲ್ಪಾ ಶೆಟ್ಟಿ ಗಂಡ ಹಿಂಗ್ಯಾಕಾದ್ರು.. ಜೈಲಿನಿಂದ ರಿಲೀಸ್​​​ ಆದ್ಮೇಲೆ ಮುಖ ಮುಚ್ಕೊಂಡೇ ತಿರುಗೋದ್ಯಾಕೆ..?

https://newsfirstlive.com/wp-content/uploads/2023/09/shilpa-3.jpg

Load More