/newsfirstlive-kannada/media/post_attachments/wp-content/uploads/2025/02/SHILPA-SHETTY-1.jpg)
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಮ್ಮ ಇದೇ ಮಂಗಳೂರಿನವರೇ. ಶಿಲ್ಪಾಶೆಟ್ಟಿ ಆಗಾಗ ತಮ್ಮ ಊರಿಗೆ ಬಂದು ಹೋಗುತ್ತಲೇ ಇರುತ್ತಾರೆ. ನಿಡ್ಡೋಡಿಯಲ್ಲಿರುವ ತಮ್ಮ ಕುಟುಂಬದವರ ಮನೆಗೆ ಭೇಟಿ ಕೊಟ್ಟು ಮಾತುಕತೆ ನಡೆಸಿ ಹೋಗುತ್ತಾರೆ. ನಿನ್ನೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಎಂದಿನಂತೆ ನಿಡ್ಡೋಡಿಯಲ್ಲಿರುವ ಕುಟುಂಬದ ಮನೆಗೆ ಭೇಟಿ ನೀಡಲು ಬಂದಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಇದನ್ನೂ ಓದಿ:ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ PUC ಪರೀಕ್ಷೆ.. ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ ಏನು?
ಕುಟುಂಬ ಸಮೇತರಾಗಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಿಲ್ಪಾಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ಬಾರಿ ನಿಡ್ಡೋಡಿಗೆ ಬಂದಾಗಲೆಲ್ಲಾ ಶಿಲ್ಪಾ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡುತ್ತಾರೆ.
ಎಂದಿನಂತೆ ನಿನ್ನೆಯೂ ಕೂಡ ದೇವಸ್ಥಾನಕ್ಕೆ ತಮ್ಮ ತಾಯಿ ಮತ್ತು ತಂಗಿ ಸಮಿತಾ ಶೆಟ್ಟಿಯೊಂದಿಗೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಸದಾನಂದ ಆಸ್ರಣ್ಣ ಇವರು ಉಪಸ್ಥಿತರಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ