/newsfirstlive-kannada/media/post_attachments/wp-content/uploads/2024/11/SMG-WIFE.jpg)
ಶಿವಮೊಗ್ಗ: ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿ ಪ್ರಕರಣವೊಂದು ದಾಖಲಾಗಿದೆ.
ಏನಿದು ಆರೋಪ ಪ್ರಕರಣ..?
ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ಗ್ರಾಮದಲ್ಲಿ ಮನೋಜ್ ಹಾಗೂ ಗೌರಮ್ಮ ಎಂಬ ದಂಪತಿ ಇದ್ದರು. ಪತ್ನಿ ಗೌರಮ್ಮ ಫೋನ್ ಬಳಕೆ ಸ್ವಲ್ಪ ಹೆಚ್ಚಾಗಿ ಮಾಡುತ್ತಿದ್ದಳಂತೆ. ಮೊನ್ನೆಯ ದಿನ ಪತಿ ಮನೋಜ್ ಊಟ ಬಡಿಸುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಕ್ಯಾರೇ ಎನ್ನದ ಗೌರಮ್ಮ ಫೋನ್​ನಲ್ಲಿ ಬ್ಯುಸಿ ಆಗಿದ್ದಳು.
ಇದನ್ನೂ ಓದಿ: ಪತ್ನಿಯಿದ್ದೂ ಗೆಳತಿಯ ಜೊತೆ ಲವ್ವಿ-ಡವ್ವಿ ಆಟ; ಮನೆಗೆ ಬಂದು ತಲುಪಿತ್ತು ದಂಡ ಹಾಗೂ ಗಂಡನ ಕಳ್ಳಾಟ!
ಕೋಪಿಸಿಕೊಂಡ ಮನೋಜ್ ಹಲ್ಲೆಗೆ ಮುಂದಾಗಿದ್ದಾನೆ. ನಂತರ ಟವೆಲ್​​ನಿಂದ ಆಕೆಯ ಕುತ್ತಿಗೆ ಬಿಗಿದು ಉಸಿರು ನಿಲ್ಲಿಸಿದ್ದಾನೆ. ವಿಷಯ ತಿಳಿದ ಗ್ರಾಮಾಂತರ ಪೊಲೀಸರು ಅಲ್ಲಿಗೆ ದೌಡಾಯಿಸಿ, ಆರೋಪಿ ಮನೋಜ್​​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us