newsfirstkannada.com

ಫಕೀರ ಸಿದ್ಧರಾಮ ಸ್ವಾಮೀಜಿಗಳ ಅದ್ಧೂರಿ ಅಮೃತ ಮಹೋತ್ಸವ.. ಹೇಗಿತ್ತು ಭಾವೈಕ್ಯತೆಯ ರಥಯಾತ್ರೆ?

Share :

Published February 2, 2024 at 7:44am

    ಸಿದ್ದರಾಮೇಶ್ವರ ಶ್ರೀಗಳಿಗೆ 75 ವರ್ಷ ಹಿನ್ನೆಲೆ ಅಮೃತ ಮಹೋತ್ಸವ

    ದ್ವೇಷ ಬಿಡು, ಪ್ರೀತಿ ಮಾಡು ಎಂಬ ಸಂದೇಶ ಸಮಾಜಕ್ಕೆ ರವಾನೆ

    ಇತಿಹಾಸ ಪುಟದಲ್ಲಿ ದಾಖಲಾದ ಬೃಹತ್ ತೂಕದ ತುಲಾಭಾರ

ಶಿರಹಟ್ಟಿ ಫಕ್ಕೀರೇಶ್ವರ ಸಿದ್ದರಾಮೇಶ್ವರ ಶ್ರೀಗಳಿಗೆ 75 ವರ್ಷ ಹಿನ್ನಲೆ ಹುಬ್ಬಳ್ಳಿಯಲ್ಲಿ ಅಮೃತ ಮಹೋತ್ಸವ ಹಾಗೂ ಭಾವೈಕ್ಯತೆ ರಥಯಾತ್ರೆ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನಡೆಯಿತು. ದಾರಿಯುದ್ಧಕ್ಕೂ ಆನೆ, ಕುದುರೆ, ಒಂಟೆಗಳ ಬೃಹತ್ ಮೆರವಣಿಗೆ. ಫಕೀರ ಸಿದ್ಧರಾಮ ಸ್ವಾಮೀಜಿಗಳ ತುಲಾಭಾರದ ವೈಭವ ಸಡಗರ, ಸಂಭ್ರಮದಿಂದ ನಡೆಯಿತು.

ಆನೆ, ಅಂಬಾರಿ ಜತೆ 5,555 ನಾಣ್ಯ ಬಳಸಿ ಸ್ವಾಮೀಜಿಗಳ ತುಲಾಭಾರ

ಶಿರಹಟ್ಟಿ ಫಕ್ಕೀರೇಶ್ವರ ಸಿದ್ದರಾಮೇಶ್ವರ ಶ್ರೀಗಳಿಗೆ 75 ವರ್ಷ ಹಿನ್ನಲೆ ಹುಬ್ಬಳ್ಳಿಯಲ್ಲಿ ಅಮೃತ ಮಹೋತ್ಸವ ಹಾಗೂ ಭಾವೈಕ್ಯತೆ ರಥಯಾತ್ರೆ ಅದ್ದೂರಿಯಾಗಿ ಜರುಗಿತು. 21 ದಿನಗಳ ಕಾಲ ಹುಬ್ಬಳ್ಳಿಯ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿದ ಭಾವೈಕ್ಯತಾ ರಥ ಹಾಗೂ ಫಕೀರೇಶ್ವರರ ಬೆಳ್ಳಿ ಮೂರ್ತಿಯ ಆನೆಯಂಬಾರಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಚನ್ನಮ್ಮ ವೃತ್ತದಲ್ಲಿ ಕ್ರೇನ್ ಮೂಲಕ ಅಂಬಾರಿ ಮೇಲೆ ಪುಷ್ಪವೃಷ್ಟಿ ಸುರಿಸಲಾಯ್ತು. ಮೂರು ಸಾವಿರ ಮಠದಿಂದ ನಡೆದ ಮೆರವಣಿಯಲ್ಲಿ 5 ಆನೆ, 5 ಒಂಟೆ, 5 ಕುದುರೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ತುಲಾ ಭಾರಕ್ಕೆ 10 ರೂ. ಮುಖ ಬೆಲೆಯ 5,555 ಕೆಜಿ ನಾಣ್ಯ

ಶಿರಹಟ್ಟಿಯ ಭಾವೈಕ್ಯತಾ ಸಂಸ್ಥಾನದ ಹಿರಿಯ ಪೀಠಾಧಿಪತಿ ಜ. ಫಕೀರ ಸಿದ್ಧರಾಮ ಸ್ವಾಮೀಜಿ ಅಮೃತ ಮಹೋತ್ಸವದ ನೆಹರು ಮೈದಾನದಲ್ಲಿ ತುಲಾಭಾರ ಆಯೋಜನೆ ಮಾಡಲಾಗಿತ್ತು. ಭವ್ಯ ತುಲಾಭಾರದ ಮೂಲಕ ದ್ವೇಷ ಬಿಡು, ಪ್ರೀತಿ ಮಾಡು ಎಂಬ ಸಂದೇಶ ಸಮಾಜಕ್ಕೆ ಸಾರಲಾಯ್ತು. ಏಕಕಾಲಕ್ಕೆ ಶ್ರೀಗಳನ್ನು ಹೊತ್ತ ಅಂಬಾರಿ, ಆನೆ ಸಹಿತ ಅಂದಾಜು 5.5 ಟನ್ ತೂಕದ ತುಲಾಭಾರ ನಡೆಯಿತು. ತುಲಾ ಭಾರಕ್ಕೆ 10 ರೂ. ಮುಖ ಬೆಲೆಯ 5,555 ಕೆಜಿ ನಾಣ್ಯ ಬಳಸಲಾಯಿತು. ತುಲಭಾರದ ಜೊತೆಗೆ ಶಿರಹಟ್ಟಿ ಫಕ್ಕೀರೇಶ್ವರ ಮಠದ ಚಂಪಿಕಾ ಆನೆಯ ಷಷ್ಠ್ಯಬ್ಧಿ ಕಾರ್ಯಕ್ರಮವನ್ನು ಸಹ ನೆರವೇರಿಸಲಾಯಿತು.

ಹುಬ್ಬಳ್ಳಿಯಲ್ಲಿ ನಡೆದ ಮಹೋತ್ಸವದಲ್ಲಿ ಶಿರಹಟ್ಟಿಯ ಫಕೀರ ಸಿದ್ದರಾಮ ಮಹಾಸ್ವಾಮಿಗಳು, ಮೂರುಸಾವಿರ ಮಠದ ಗುರುಸಿದ್ದ ರಾಜಯೋಗಿದ್ರ ಮಹಾಸ್ವಾಮಿಗಳು ಹಾಗೂ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಸೇರಿ ಹಲವು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದು, ಭಾವೈಕ್ಯತಾ ಸಂಭ್ರಮಕ್ಕೆ ಮೆರಗು ತಂದಿತ್ತು. ಅದೇನೆ ಇರಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಇಷ್ಟೊಂದು ಬೃಹತ್ ತೂಕದ ತುಲಾಭಾರ ನಡೆದಿದ್ದು ಇತಿಹಾಸ ಪುಟದಲ್ಲಿ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಕೀರ ಸಿದ್ಧರಾಮ ಸ್ವಾಮೀಜಿಗಳ ಅದ್ಧೂರಿ ಅಮೃತ ಮಹೋತ್ಸವ.. ಹೇಗಿತ್ತು ಭಾವೈಕ್ಯತೆಯ ರಥಯಾತ್ರೆ?

https://newsfirstlive.com/wp-content/uploads/2024/02/Hbl_Siddarama_Swamiji.jpg

Load More