Advertisment

ಶಿರೂರು ಗುಡ್ಡ ಕುಸಿತ ಪ್ರಕರಣ: 7 ದಿನವಾದ್ರೂ ಸಿಗದ ಮೃತದೇಹ; ಮಿಲಿಟರಿ ತಂಡ ಆಗಮನ

author-image
AS Harshith
Updated On
ಶಿರೂರು ಗುಡ್ಡ ಕುಸಿತ ಪ್ರಕರಣ: 7 ದಿನವಾದ್ರೂ ಸಿಗದ ಮೃತದೇಹ; ಮಿಲಿಟರಿ ತಂಡ ಆಗಮನ
Advertisment
  • ಶಿರೂರು ಗುಡ್ಡ ಕುಸಿತ ಪ್ರಕರಣ ಇಂದಿಗೆ 7 ದಿನ
  • ನಾಪತ್ತೆಯಾದ 3 ದೇಹಗಳಿಗಾಗಿ ಮುಂದುವರೆದ ಶೋಧ
  • ಸಣ್ಣಿ ಗೌಡ, ಅರ್ಜುನ್, ಜಗನ್ನಾಥ್ ದೇಹಗಳಿಗಾಗಿ ಹುಡುಕಾಟ

ಅಂಕೋಲಾ: ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಮೂರು ದೇಹಗಳಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ. ಸಣ್ಣಿ ಗೌಡ, ಅರ್ಜುನ್ ಹಾಗೂ ಜಗನ್ನಾಥ್ ದೇಹಗಳಿಗಾಗಿ ಹುಡುಕಾಟ ನಡೆಯುತ್ತಿದೆ.

Advertisment

ಇದನ್ನೂ ಓದಿ: ದೇವಸ್ಥಾನದ ಪೂಜಾರಿಯನ್ನು ಚಾಕುವಿನಿಂದ ಇರಿದು ಕೊಲೆ.. ಚುಚ್ಚಿ ಚ್ಚುಚ್ಚಿ ಸಾಯಿಸಿದ ದುಷ್ಕರ್ಮಿಗಳು

publive-image

ಜುಲೈ 16ರಂದು ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿತ್ತು. ರಸ್ತೆ ಪಕ್ಕ ಇದ್ದ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜಗನ್ನಾಥ್ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದರು. ಅತ್ತ ಮಣ್ಣು ಕುಸಿದಾಗ ಗಂಗಾವಳಿ ನದಿಗೆ ಬಿದ್ದು ಉಳುವರೆ ಗ್ರಾಮಕ್ಕೆ ನೀರು ನುಗ್ಗಿದಾಗ ಸಣ್ಣಿ ಗೌಡ ಕೂಡ ನಾಪತ್ತೆಯಾಗಿದ್ದಾರೆ. ಇತ್ತ ಕೇರಳ ಮೂಲಕ ಟಿಂಬರ್ ಲಾರಿ ಚಾಲಕ ಅರ್ಜುನ್ ಕೂಡ ಕಣ್ಮರೆಯಾಗಿದ್ದು, ಲಾರಿಯೊಳಗೆ ಬದುಕಿದ್ದಾನೆ ಎಂದು ಹುಡುಕಾಟ ನಡೆಯುತ್ತಿದೆ.

publive-image

ಇದನ್ನೂ ಓದಿ: ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. ಭಯಾನಕ ಘಟನೆ!

Advertisment

ಸದ್ಯ ಸ್ಥಳಕ್ಕೆ ಮಿಲಿಟಿರಿ ತಂಡ ಆಗಮಿಸಿದೆ. 40 ಜನರ ಮಿಲಿಟಿರಿ ತಂಡ ಸ್ಥಳದಲ್ಲಿ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದ್ದಾರೆ. ಅತ್ತ ರಕ್ಷಣಾ ಸಿಬ್ಬಂದಿ ಲಾರಿ ಮಣ್ಣಿನ ಅಡಿ ಇದೆಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ನದಿಗೆ ಲಾರಿ ಬಿದ್ದಿರುವ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment