/newsfirstlive-kannada/media/post_attachments/wp-content/uploads/2024/07/Shirur-5.jpg)
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಅವಂತಿಕಾ, ಅರ್ಜುನ್ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ.
ಮಳೆಯಿಂದಾಗಿ ಜುಲೈ 16ರಂದು ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಲಕ್ಷ್ಮಣ್ ಕುಟುಂಬ ಈ ಗುಡ್ಡ ಕುಸಿತದಲ್ಲಿ ಸಿಲುಕಿ ಸಾವನ್ನಪ್ಪಿದ್ದರು.
ಗುಡ್ಡ ಕುಸಿತದ ಸ್ಥಳದಲ್ಲಿ ರಸ್ತೆ ಬದಿಯಲ್ಲಿದ್ದ ಅಂಗಡಿ ಕೊಚ್ಚಿಹೋಗಿತ್ತು. ಒಂದೇ ಕುಟುಂಬದ ಐವರು ಇದರಿಂದಾಗಿ ಮೃತಪಟ್ಟಿದ್ದರು. ಲಕ್ಷ್ಮಣ್ ಮಕ್ಕಳಾದ ಅವಂತಿಕಾ, ಅರ್ಜುನ್ ಕೂಡ ಗುಡ್ಡ ಕುಸಿತದಲ್ಲಿ ಮೃತಪಟ್ಟಿದ್ದರು.
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಅವಂತಿಕಾ, ಅರ್ಜುನ್ ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದೆ#Ankola#Shirur#ShirurLandslide#VideoViral#Hillslidepic.twitter.com/2fom267DBX
— Harshith Achrappady (@HAchrappady)
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮೃತಪಟ್ಟ ಅವಂತಿಕಾ, ಅರ್ಜುನ್ ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದೆ#Ankola#Shirur#ShirurLandslide#VideoViral#Hillslidepic.twitter.com/2fom267DBX
— Harshith Achrappady (@HAchrappady) July 25, 2024
">July 25, 2024
ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಲಾರಿ ನದಿಯಲ್ಲಿ ಪತ್ತೆ.. ಇಂದು ಸ್ಥಳಕ್ಕೆ ಆಗಮಿಸಲಿದ್ದಾರೆ ದೆಹಲಿ ತಜ್ಞರ ತಂಡ
ಆದರೀಗ ಮಕ್ಕಳು ನೃತ್ಯ ಮಾಡುತ್ತಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ