/newsfirstlive-kannada/media/post_attachments/wp-content/uploads/2024/07/Arjun-Truck-Driver-Shirur-Ankola-1.jpg)
ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್​ಗಾಗಿ ನಿರಂತರ ಶೋಧ ನಡೆಯುತ್ತಿದೆ. ನದಿಯಿಂದ 20 ಮಿಟರ್​ ದೂರದಲ್ಲಿ ಲಾರಿ ಮಾದರಿಯ ಮೆಟಲ್​ ಪತ್ತೆಯಾಗಿದೆ. ಹೀಗಾಗಿ ತಂತ್ರಜ್ಞಾನ ಬಳಸಿಕೊಂಡು, ಮುಳುಗು ತಜ್ಞರನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಅರ್ಜುನ್​ ಹುಡುಕಾಟದಲ್ಲಿ ಉಳಿದ ಇಬ್ಬರನ್ನು ಮರೆತಂತಿದೆ.
ಈಗಾಗಲೇ ಏಳು ಜನರ ಮೃತದೇಹ ಸಿಕ್ಕಿದೆ. ಅರ್ಜುನ್​ಗಾಗಿ ನಿರಂತರ ಶೋಧ ನಡೆಯುತ್ತಿದೆ. ಆದರೆ ನಾಪತ್ತೆಯಾದ ಜಗನ್ನಾಥ್​, ಲೊಕೇಶ್​​ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಯಾರೂ ಸಹ ಮಾತನಾಡದೇ ಇರೋದು ಅವರ ಕುಟುಂಬಕ್ಕೆ ಬಹಳ ನೋವನ್ನು ತರಿಸಿದೆ.
ಇದನ್ನೂ ಓದಿ: ಶಿರೂರು: ಲಾರಿ ಚಾಲಕ ಅರ್ಜುನ್​ ಹುಡುಕಲು ‘ಈಶ್ವರ’ನ ಮೊರೆ.. ಸಮುದ್ರದ ಆಳಕ್ಕೆ ಹೋಗಿ ಶವ ತರೋ ಸಾಹಸಿ ಈತ
ಜುಲೈ 16ರಂದು ನಡೆದ ಈ ಪ್ರಕರಣದಲ್ಲಿ ಜಗನ್ನಾಥ್​ ನಾಯ್ಕ ಎಂಬವವರು ನಾಪತ್ತೆಯಾಗಿದ್ದಾರೆ. ಇದುವರೆಗೂ ಅವರಿಗಾಗಿ ಶೋಧ ನಡೆದಿಲ್ಲ. ಈ ಕುರಿತಾಗಿ ಜಗನ್ನಾಥ್​ ಮಗಳು ಪಲ್ಲವಿ ನ್ಯೂಸ್​​ಫಸ್ಟ್​ ಬಳಿ ಬೇಸರ ತೋಡಿಕೊಂಡಿದ್ದಾರೆ.
ಅಪ್ಪನ ಮೂಳೆಯನ್ನಾದರೂ ತಂದು ಕೊಡಿ
ನಮ್ಮ ತಂದೆ ಕಾಣೆಯಾಗಿ 12 ದಿನ ಆಯ್ತು. ಏನು ಸುದ್ದಿ ಇಲ್ಲ. ಅವರನ್ನು ಹುಡುಕಿಕೊಡಿ. ನಾವು ನೋಡಬೇಕು ಅವರನ್ನು. ಯಾವ ಸ್ಥಿತಿಯಲ್ಲಿದ್ದಾರೆ ಎಂದು ನೋಡಬೇಕು. ಕಾರ್ಯಚರಣೆ ಬಗ್ಗೆ ಏನು ಗೊತ್ತಾಗುತ್ತಿಲ್ಲ. ಬರೀ ಅರ್ಜುನ್​, ಲಾರಿ ಬಗ್ಗೆ ಹೇಳ್ತಾ ಇದ್ದಾರೆ. ನಮ್ಮ ಅಪ್ಪನ ಬಗ್ಗೆ ಏನು ಮಾತಾಡ್ತಾ ಇಲ್ಲ. ಜನಪ್ರತಿನಿಧಿಗಳು ಹುಡುಕಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಮ್ಮ ಸರಿಯಾಗಿ ಊಟ ಮಾಡ್ತಾ ಇಲ್ಲ. ಮಾವ, ಅತ್ತೆ ಅವರ ನೆನಪಿನಲ್ಲೇ ಉಳಿದಿದ್ದಾರೆ. ಅವರ ಮೂಳೆ ಸಿಕ್ಕರೂ ಸಾಕು ಹುಡುಕಿಕೊಡಿ ಎಂದು ಮಗಳು ಪಲ್ಲವಿ ನ್ಯೂಸ್​ ಫಸ್ಟ್​ ಜೊತೆಗೆ ಕೋರಿಕೊಂಡಿದ್ದಾರೆ.
[caption id="attachment_77116" align="alignnone" width="800"]
ಪಲ್ಲವಿ (ನಾಪತ್ತೆಯಾಗಿರುವ ಜಗನ್ನಾಥ್​ ಅವರ ಮಗಳು)[/caption]
ಹೋರಾಟ ನಿಲ್ಲಲ್ಲ
ಗಂಗಾವಳಿ ನೀರಿ ಅಷ್ಟು ವೇಗವಾಗಿ ಹರಿಯುವ ನೀರಲ್ಲ. ಇದಕ್ಕೆ ಕಾರ್ಯ ಚಟುವಟಿಕೆ ಮಾಡದವರು ಬಹಳ ವಿಫಲ ಅಂತ ಕರೆಯಬೇಕಾಗುತ್ತದೆ. ಇಲ್ಲಿ ಕೇವಲ ಬೋಟಲ್ಲಿ ಓಡಾಡುವುದು ಅಷ್ಟೇ. ಅವರು ಯಾವುದೇ ಎಕ್ಸ್​ಪೀರಿಯನ್ಸ್​ ಹ್ಯಾಂಡ್ಸ್​ ಅಲ್ಲ. ನಮಗೆ ಜಗನ್ನಾಥ್​ ದೇಹ ಬೇಕು. ಆತನ ಅಂತ್ಯ ಸಂಸ್ಕಾರ ಆಗಬೇಕು. ಅಲ್ಲಿವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಜಗನ್ನಾಥ್​ ಸಂಬಂಧಿ ನ್ಯೂಸ್​​ಫಸ್ಟ್​ಗೆ ಹೇಳಿದ್ದಾರೆ.
[caption id="attachment_77127" align="alignnone" width="800"]
ಜಗನ್ನಾಥ್​ ಸಂಬಂಧಿ[/caption]
ಲೊಕೇಶ್​ ಎಂಬಾತ ಕೂಡ ಶಿರೂರು ಗುಡ್ಡ ಪ್ರಕರಣದಲ್ಲಿ ನಾಪತ್ತೆಯಾಗಿದ್ದಾರೆ. ಬಸ್​ ಚಾಲಕನೋರ್ವ ಲೊಕೇಶ್​ ಶಿರೂರು ಬಳಿಯ ಹೋಟೆಲ್​ನಲ್ಲಿ ಕಾಣಿಸಿದ್ದ ಎಂದು ಹೇಳಿದ್ದರು. ಅದರಿಂದ ಲೋಕೇಶ್​ ಗುಡ್ಡ ಕುಸಿತ ಪ್ರಕರಣದ ಬಳಿಕ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಆತನ ಹುಡುಕಾಟಕ್ಕೆ ಬಗ್ಗೆಯೂ ಯಾವುದೇ ಸುಳಿವಿಲ್ಲ. ಸದ್ಯ ಅದೇ ಊರಿನ ಇಬ್ಬರು ಕಣ್ಮರೆಯಾಗಿದ್ದು, ಅವರ ಬಗ್ಗೆ ಯಾರೂ ಮಾತನಾಡದೇ ಇರುವುದು ವಿಪರ್ಯಾಸವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us