ಶಿರೂರು: 14 ದಿನವಾದರೂ ಅರ್ಜುನ್​ ಸುಳಿವಿಲ್ಲ.. ಜಿಲ್ಲಾಡಳಿತದ ಮುಂದಿನ ನಡೆಯೇನು?

author-image
AS Harshith
Updated On
ಶಿರೂರು ಗುಡ್ಡ ಕುಸಿತ; ಕಾರ್ಯಾಚರಣೆ ಸ್ಥಗಿತಕ್ಕೆ ಮುಂದಾದ ಜಿಲ್ಲಾಡಳಿತ; ಕಾರಣವೇನು?
Advertisment
  • ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣ
  • 14 ದಿನಗಳು ಕಳೆದರೂ ಮೂವರ ಸುಳಿವು ಇನ್ನೂ ಸಿಕ್ಕಿಲ್ಲ
  • ಕೇರಳ ಶಾಸಕರಿಂದ ಅರ್ಜುನ್ ಹುಡುಕಿಕೊಡಿ ಎಂದು ಪಟ್ಟು

ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 14 ದಿನ ಕಳೆದಿವೆ. ಆದರೂ ನಾಪತ್ತೆಯಾದ ಮೂವರ ಸುಳಿವು ಇನ್ನೂ ಸಿಕ್ಕಿಲ್ಲ. ಸದ್ಯ ಕಾರ್ಯಾಚರಣೆ ಸ್ಥಗಿತ ಮಾಡಿದರು ಶೋಧ ಕಾರ್ಯ ಮುಂದುವರಿಸುವ ಸಾಧ್ಯತೆಗಳಿವೆ.

ಗಂಗಾವಳಿ ನದಿಯಲ್ಲಿ ನಾಪತ್ತೆಯಾದ ಮೂರು ದೇಹಗಳಿಗೆ ಶೋಧ ಕಾರ್ಯ ನಡೆಸಲಿದ್ದಾರೆ. ನದಿಗೆ ಬಿದ್ದಿರುವ ಲಾರಿ ಮೇಲಕ್ಕೆ ಎತ್ತುವ ಕಾರ್ಯ ಮಾತ್ರ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ. ನೀರಿನ‌ ಹರಿವು ಕಡಿಮೆಯಾದ ನಂತರ ಕಾರ್ಯಾಚರಣೆ ಮುಂದುವರೆಯಲಿದೆ.

publive-image

ಜಿಲ್ಲಾಡಳಿತವು ತ್ರಿಶೂರ್​ನಿಂದ ಆಗಮಿಸುವ ತಜ್ಞರ ಜೊತೆ ಚರ್ಚೆ ನಡೆಸಿ ಕಾರ್ಯಾಚರಣೆ ಮಾಡುತ್ತೇವೆ ಎಂದು ಹೇಳಿದೆ. ಇಲ್ಲದಿದ್ದರೆ ಮಳೆ ಮುಗಿದ ನಂತರ ನೀರಿನ ಹರಿವು ಕಡಿಮೆಯಾದ ನಂತರವೇ ಕಾರ್ಯಾಚರಣೆ ಮಾಡಲಿದ್ದೇವೆ ಎಂದು ತಿಳಿಸಿದೆ.

ಇದನ್ನೂ ಓದಿ: ಅಪ್ಪು ಹೇಳಿದ ಕೊನೆ ಮಾತು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

ಕೇರಳ ಶಾಸಕರು ನಮಗೆ ಲಾರಿ ಹಾಗೂ ಅರ್ಜುನ್ ಹುಡುಕಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಕಾರ್ಯಾಚರಣೆ ಸ್ಥಗಿತ ಮಾಡಿದರು ಬಂದ್ ಮಾಡದೇ ಪ್ರಯತ್ನ ನಡೆಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

publive-image

ಶಿರೂರು ರಸ್ತೆ ಸಂಚಾರಕ್ಕೆ ಸಿದ್ಧತೆ

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆಗೆಯಲಾಗಿದೆ. ಸಂಚಾರಕ್ಕೆ ಅನುವು ಮಾಡಿಕೊಡಲು ಸಿದ್ಧತೆ ನಡೆಸಲಾಗುತ್ತಿದೆ.

ಇದನ್ನೂ ಓದಿ: IAS ಆಗಬೇಕು ಎಂದು ಕನಸು ಕಂಡಿದ್ದ ಮೂವರು ದುರಂತ ಸಾವು; ಇದಕ್ಕೆ ಹೊಣೆ ಯಾರು?

publive-image

13 ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 66ಬಂದ್ ಆಗಿದೆ. ಗೋವಾ ಮಂಗಳೂರು ನಡುವಿನ ಪ್ರಮುಖ ಹೆದ್ದಾರಿ ಇದಾಗಿದೆ. ಜಿಲ್ಲಾಡಳಿತವು ಜಿ.ಎಸ್.ಐ ವರದಿಗಾಗಿ ಮತ್ತು ಗುಡ್ಡದ ಸುರಕ್ಷತೆಯ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಜಿಲ್ಲಾಡಳಿತ ಒಂದೆರಡು ದಿನದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲು ಸಿದ್ದತೆ ಮಾಡಿಕೊಂಡಿದೆ.

ಹೆದ್ದಾರಿ ಮೇಲೆ ಜುಲೈ 16 ರಂದು ಗುಡ್ಡ ಕುಸಿದಿತ್ತು. ವಾಹನ ಸವಾರರು ಸಂಚಾರ ಬಂದ್‌ ಆಗಿ ಸಾಕಷ್ಟು ಸಮಸ್ಯೆ ಅನುಭವಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment