20 ಮೀಟರ್ ದೂರದಲ್ಲಿ ಲಾರಿ ಮಾದರಿಯ ಮೆಟಲ್ ಪತ್ತೆ​ .. ಟ್ರಕ್​ ಮೇಲಕ್ಕೆತ್ತಲು ನದಿ ಆಳದಲ್ಲಿ ಮುಳುಗು ತಜ್ಞರ ಕಾರ್ಯಾಚರಣೆ

author-image
AS Harshith
Updated On
ಶಿರೂರು: 14 ದಿನವಾದರೂ ಅರ್ಜುನ್​ ಸುಳಿವಿಲ್ಲ.. ಜಿಲ್ಲಾಡಳಿತದ ಮುಂದಿನ ನಡೆಯೇನು?
Advertisment
  • ಜುಲೈ 16ರಂದು ನಡೆದ ಶಿರೂರು ಗುಡ್ಡ ಕುಸಿತ ಪ್ರಕರಣ
  • ಇಂದಿಗೆ 12 ದಿನ.. ನಾಪತ್ತೆಯಾದ ಕೇರಳದ ಅರ್ಜುನ್​ಗಾಗಿ ಶೋಧ
  • ಅರ್ಜುನ್​ನನ್ನು ನೀರಿನಾಳದಲ್ಲಿ ಹುಡುಕಲು ಬಂದ ಮುಳುಗು ತಜ್ಞರ ತಂಡ

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಚಾಲಕ ಅರ್ಜುನ್​ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನದಿಯಲ್ಲಿ ನಾಪತ್ತೆಯಾದ ಲಾರಿ ಹುಡುಕಾಟಕ್ಕಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದಾರೆ.

ನದಿಯಲ್ಲಿ ಸುಮಾರು 5 ಮೀಟರ್ ಆಳ, ದಡದಿಂದ 20 ಮೀಟರ್ ದೂರದಲ್ಲಿ ಲಾರಿ ಮಾದರಿಯ ಮೆಟಲ್ ಪತ್ತೆಯಾಗಿದ್ದು, ಲಾರಿ ಮೇಲಕ್ಕೆ ಎತ್ತಲು ನದಿಯೊಳಗೆ ಹೋಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

publive-image

ಹೋಟೆಲ್​ ಅವಶೇಷಗಳು ಪತ್ತೆ

ಶಿರೂರು ಗುಡ್ಡ ಕುಸಿತದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಬಿದ್ದಿತ್ತು. ರಸ್ತೆಗೆ ಬಿದ್ದ ಮಣ್ಣನ್ನು ಭಾಗಶಃ ತೆಗೆಯಲಾಗಿದೆ. ಆದರೆ ಈ ವೇಳೆ ಲಕ್ಷಣ್​ ನಾಯ್ಕ್​ ಅವರಿಗೆ ಸೇರಿದ್ದ ಹೋಟೆಲ್​ನ ಅವಶೇಷಗಳು ಪತ್ತೆಯಾಗಿವೆ. ಬಕೆಟ್​, ಕೆಲ ಪಾತ್ರೆಗಳು ಮಣ್ಣಿನಡಿಯಲ್ಲಿ ಸಿಲುಕಿವೆ.

publive-image

ಶಿರೂರು ಗುಡ್ಡ ಕುಸಿತವಾಗಿ ಇಂದಿಗೆ 12 ದಿನ

ಜುಲೈ 16ರಂದು ಬೆಳಗ್ಗಿನ ಜಾವ 8.30ರ ಸುಮಾರಿಗೆ ಇದ್ದಕ್ಕಿದ್ದಂತೆಯೇ ಗುಡ್ಡ ಕುಸಿದಿದೆ. ಈ ವೇಳೆ ಅಲ್ಲೇ ಇದ್ದ ಲಕ್ಷ್ಮಣ್ ನಾಯ್ಕರವರ ಹೋಟೆಲ್​ ಮೇಲೆ ಮಣ್ಣು ಬಿದ್ದಿದೆ. ಒಂದೇ ಕುಟುಂಬದ ಐವರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ ಮತ್ತಿಬ್ಬರ ಮೃತದೇಹವು ಕಾರ್ಯಚರಣೆ ವೇಳೆ ಸಿಕ್ಕಿದೆ. ಸದ್ಯ ಕೇರಳ ಮೂಲದ ಲಾರಿ ಚಾಲಕ ಅರ್ಜುನ್​ ಮತ್ತು ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment