/newsfirstlive-kannada/media/post_attachments/wp-content/uploads/2024/07/Shirur-12.jpg)
ಅಂದು ಎಂದಿನಂತೆ ಜಿಟಿಜಿಟಿ ಮಳೆ, ರಭಸವಾಗಿ ಹರಿಯುತ್ತಿರುವ ತೊರೆ. ಬೆಳಗ್ಗೆ ಎದ್ದು ದೈನಂದಿನ ದಿನಚರಿಯ ಬಗ್ಗೆ ಯೋಚಿಸಿ ಮುಂದಿನ ಕಾರ್ಯದ ಬಗ್ಗೆ ಕಾಲಿಡುವ ಸಮಯ. ಆದರೆ ಅದೇನಾಯ್ತೋ ಗೊತ್ತಿಲ್ಲ. ಹೂವಾ ಗೌಡ ಕಣ್ಣಲ್ಲಿ ಗಂಗಾವಳಿ ನದಿ ರೌದ್ರ ನರ್ತನ ತೋರಿದಂತೆ ಕಂಡಳು. ನದಿ ಆಚೆಗಿದ್ದ ದೂರದ ಗುಡ್ಡ ಕುಸಿದು ಗಂಗಾವಳಿ ನದಿಯನ್ನು ತೊಯ್ದಿತ್ತು. ರಭಸವಾಗಿ ಮಣ್ಣು ಕುಸಿದ ಕಾರಣಕ್ಕೆ ಮಣ್ಣೆಲ್ಲ ನೀರನ್ನು ಆವರಿಸಿತ್ತು. ತನ್ನ ಜಾಗ ಆಕ್ರಮಿಸಿದ ಕಾರಣಕ್ಕೆ ನದಿಯ ವರ್ತನೆ ಬದಲಾಗಿತ್ತು. ಪರಿಣಾಮ ನದಿಯ ಆಚೆಗಿನ ತಟದಲ್ಲಿದ್ದ ಉಳುವರೆಯ ಆರು ಮನೆಗಳು ನೀರಿನ ರಭಸಕ್ಕೆ ಕೊಚ್ಚಿ ಹೋದವು.
/newsfirstlive-kannada/media/post_attachments/wp-content/uploads/2024/07/Shirur-4.jpg)
ನದಿಯ ನೀರಿನ ರಭಸದ ಹೊಡೆತಕ್ಕೆ ಆರು ಮನೆಗಳು ಸೇರಿ ಅಲ್ಲಿದ್ದ ನಾಲ್ಕು ಮಕ್ಕಳು ಗಂಗಾವಳಿ ನದಿ ನೀರಿನ ಪಾಲಾಗುತ್ತಿರುವುದು ಉಳುವರೆಯ ಹೂವಾ ಗೌಡರ ಕಣ್ಣಿಗೆ ಬಿತ್ತು. ಕಣ್ಣಾರೆ ಕಂಡ ಮಕ್ಕಳ ಜೀವ ಉಳಿಸಲು ಹೂವಾ ಗೌಡ ಒಂದು ಸೆಕೆಂಡ್​ ಕೂಡ ಯೋಚಿಸಲಿಲ್ಲ. ಜೀವದ ಹಂಗು ತೊರೆದು ಮಕ್ಕಳನ್ನು ಉಳಿಸಿಕೊಳ್ಳುವುದೇ ಅವರ ಯೋಚನೆಯಾಗಿತ್ತು.
[caption id="attachment_76668" align="alignnone" width="800"]
ನಾಪತ್ತೆಯಾದ ಕೇರಳದ ಲಾರಿ ಚಾಲಕ ಅರ್ಜುನ್[/caption]
ಸುಮಾರು 200 ಅಡಿ ದೂರದಲ್ಲಿ ಮಕ್ಕಳು ತೇಲಿ ಹೋಗುತ್ತಿದ್ದಾರೆ. ಇನ್ನೇನು ಕೊಂಚ ದೂರ ತಲುಪಿದರೆ ನಾಪತ್ತೆಯಾಗುವ ಸನ್ನಿವೇಶ. ಅಷ್ಟರಲ್ಲಿ ಕೈಗೆ ಸಿಕ್ಕ ಕಲ್ಲೊಂದನ್ನು ಹಿಡಿದು ಮಕ್ಕಳು ನದಿ ನೀರಿನಲ್ಲಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದನ್ನು ಕಂಡ ಹೂವಾ ಗೌಡ ಕಿಂಚಿತ್ತು ಯೋಚಿಸಲಿಲ್ಲ. ದೈವಬಲವೋ, ಆತ್ಮಸೈರ್ಯವೋ ನದಿಗೆ ಹಾರಿದವರು ಮಕ್ಕಳನ್ನು ಜೀವಂತವಾಗಿ ದಡಕ್ಕೆ ತಂಡು ಬಿಟ್ಟಿದ್ದಾರೆ.
ಇದನ್ನೂ ಓದಿ: ಶಿರೂರು: 14 ದಿನವಾದರೂ ಅರ್ಜುನ್​ ಸುಳಿವಿಲ್ಲ.. ಜಿಲ್ಲಾಡಳಿತದ ಮುಂದಿನ ನಡೆಯೇನು?
/newsfirstlive-kannada/media/post_attachments/wp-content/uploads/2024/07/Shirur-8.jpg)
ಶಿರೂರು ಗುಡ್ಡ ಕುಸಿತದಲ್ಲಿ 7 ಜನರು ಸಾವನ್ನಪ್ಪಿದ್ದು, 3 ಜನರು ನಾಪತ್ತೆಯಾಗಿದ್ದಾರೆ. ಈ 10 ಜನರ ನಡುವೆ ಜೀವದ ಹಂಗು ತೊರೆದು ಬದುಕಿ ಬಾಳಬೇಕಾಗಿದ್ದ 4 ಮಕ್ಕಳಿಗೆ ಉಳುವರೆಯ ಹೂವಾ ಗೌಡ ಮರು ಜೀವಕೊಟ್ಟಿದ್ದಾರೆ. ಸದ್ಯ ದುರ್ಘಟನೆಯ ಬೇಸರ ನಡುವಲ್ಲಿ ಊರಿನ ಜನರು ಹೂವಾ ಗೌಡರ ಬಗ್ಗೆ ಮಾತನಾಡುತ್ತಿದ್ದಾರೆ, ಕೊಂಡಾಡುತ್ತಿದ್ದಾರೆ. ಅವರ ಸಾಹಸವನ್ನು ಜಿಲ್ಲಾಡಳಿತ ಗಮನಿಸಬೇಕಿದೆ. ಶೌರ್ಯ ಪ್ರಶಸ್ತಿ ನೀಡಬೇಕಿದೆ. ಸರ್ಕಾರ ಅವರನ್ನು ಗುರುತಿಸಬೇಕಿದೆ ಎಂದು ಒತ್ತಾಯಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us