Advertisment

ಅರ್ಜುನ, ಜಗನ್ನಾಥ್, ಲೋಕೇಶ್ ಇನ್ನೂ ಪತ್ತೆ ಇಲ್ಲ.. ಈಶ್ವರ್ ಮಲ್ಪೆ ತಂಡ ಇವತ್ತು ಏನ್ಮಾಡುತ್ತೆ..?

author-image
Ganesh
Updated On
ಅರ್ಜುನ, ಜಗನ್ನಾಥ್, ಲೋಕೇಶ್ ಇನ್ನೂ ಪತ್ತೆ ಇಲ್ಲ.. ಈಶ್ವರ್ ಮಲ್ಪೆ ತಂಡ ಇವತ್ತು ಏನ್ಮಾಡುತ್ತೆ..?
Advertisment
  • ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರೂ ಸಿಕ್ಕಿಲ್ಲ
  • ಇಂದು ಕೊನೆಯ ದಿನದ ಕಾರ್ಯಾಚರಣೆ ಎಂದ ಅಧಿಕಾರಿ
  • ಲಾರಿ ಇದೆ ಎನ್ನಲಾಗಿರುವ ಸ್ಥಳ ಟಾರ್ಗೆಟ್ ಮಾಡಿ ಶೋಧ

ಉತ್ತರ ಕನ್ನಡ: ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆ ಆಗಿರುವ ಅರ್ಜುನ, ಜಗನ್ನಾಥ್ ನಾಯ್ಕ, ಲೋಕೇಶ್​​ಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ನಿನ್ನೆ ಎರಡು ಪೋಕ್‌ಲೈನ್‌ಗಳು ಹುಡುಕಾಟ ನಡೆಸಿದ್ರೂ ಮೇಲೆತ್ತುವಲ್ಲಿ ವಿಫಲವಾಗಿವೆ.

Advertisment

ಗೋಕಾಕ್‌ನಿಂದ ಬಂದಿದ್ದ ಪೋಕ್‌ ಲೈನ್‌ ವಾಪಸ್ ತೆರಳಿವೆ. ಅಲ್ಲದೇ ಗಂಗಾವಳಿ ನದಿಯಲ್ಲಿ ನೀರಿನ ವೇಗ ಹೆಚ್ಚಾಗಿದ್ದು, ನೌಕಾದಳದ ಮುಳುಗು ತಜ್ಞರು ನೀರಿಗೆ ಇಳಿಯಲು ಹಿಂದೇಟು ಹಾಕಿದ್ದಾರೆ. ಬಳಿಕ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಎಂಟ್ರಿ ಕೊಟ್ಟಿದ್ದಾರೆ. ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದಾಗ ಸುಮಾರು 5 ಮೀಟರ್ ಆಳ, 20 ಮೀಟರ್ ದೂರದಲ್ಲಿ ಲಾರಿ ಮಾದರಿಯ ಮೆಟಲ್ ಇರೋದು ತಿಳಿದುಬಂದಿದೆ. ಹೀಗಾಗಿ ಇಂದು ಕೊನೆಯ ಬಾರಿಗೆ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಶಿರೂರು ಮಾದರಿಯಲ್ಲೇ ಮತ್ತೊಂದು ಗುಡ್ಡ ಕುಸಿತ.. ತಾಯಿ, ಮಗಳು ಮಣ್ಣಿನಡಿ ಸಿಲುಕಿ ಸಾವು

publive-image

ಇಂದು 13ನೇ ದಿನದ ಇಂದಿನ ಕಾರ್ಯಾಚರಣೆಯಲ್ಲಿ ಮಲ್ಪೆಯ ಮುಳುಗುತಜ್ಞ ಈಶ್ವರ ತಂಡ ಪ್ರಮುಖ ಶೋಧಕಾರ್ಯ ನಡೆಸಲಿದೆ. ಈಗಾಗಲೇ ಸ್ಕ್ಯಾನಿಂಗ್‌ನಲ್ಲಿ ಗುರುತಿಸಿದ್ದ 4 ಸ್ಥಳಗಳ ಪೈಕಿ ಮೂರರಲ್ಲಿ ಶೋಧ ಪೂರ್ಣಗೊಂಡಿದೆ. ಇಂದು ಲಾರಿ ಇದೆ ಎನ್ನಲಾದ ಸ್ಥಳದಲ್ಲಿ ಶೋಧ ನಡೆಸಲಿದೆ.

Advertisment

ಮತ್ತೊಂದು ಕಡೆ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಹಿನ್ನಲೆ ಶೋಧಕಾರ್ಯಕ್ಕೆ ಅಡ್ಡಿಯಾಗಿದೆ. ಸೇನೆ, ನೌಕಾಪಡೆ, NDRF, SDRF ತಂಡದೊಂದಿಗೆ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಲಿದೆ. ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಬಂಡೆಗಲ್ಲು, ಮರದ ತುಂಡುಗಳು ಸಂಗ್ರಹವಾಗಿದೆ. ಬಂಡೆಗಲ್ಲುಗಳಿಂದಾಗಿ ಡೈವಿಂಗ್ ಮಾಡಲು ತೊಂದರೆ ಆಗ್ತಿದೆ. ಇಂದು ಲಾರಿ ಇರುವ ಸ್ಥಳ ತಲುಪಲು ತಂಡ ಪ್ರಯತ್ನಿಸಲಿದೆ.

ಇದನ್ನೂ ಓದಿ:12 ದಿನ ಕಳೆದರೂ ಪತ್ತೆ ಆಗಲೇ ಇಲ್ಲ.. ಪ್ರಯತ್ನ ಕೈಬಿಡುವ ಮಾತಾಡಿದ ಅಧಿಕಾರಿಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment