/newsfirstlive-kannada/media/post_attachments/wp-content/uploads/2024/07/SHIRURU_GUDDA_DOGS.jpg)
ಉತ್ತರ ಕನ್ನಡ: ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಘಟನೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಯುತ್ತಿದ್ದು 13 ದಿನಗಳು ಕಳೆಯುತ್ತಿವೆ. ಆದರೆ ಹೋಟೆಲ್ ಮಾಲೀಕನಿಗಾಗಿ ಅಲ್ಲಿನ ಶ್ವಾನಗಳು ಈವರೆಗೂ ಕಾಯುತ್ತಿವೆ. ಇಷ್ಟು ದಿನಗಳು ಕಳೆದರೂ ನಾಯಿಗಳು ಮಾತ್ರ ತಮ್ಮ ಮಾಲೀಕ ಬರಬಹುದೆನ್ನುವ ಭರವಸೆಯಲ್ಲಿವೆ.
ಇದನ್ನೂ ಓದಿ:‘ಎಲ್ಲಿ ಪಿನ್ ಇಟ್ರೆ ಏನಾಗುತ್ತೆಂದು ಗೊತ್ತು.. ಬೆಂಗಳೂರನ್ನೇ ಶಿವಾ ಅನಿಸಿಬಿಡ್ತೀನಿ..’ ಆತಂಕ ಹುಟ್ಟಿಸಿದ ಯುವಕ
ಹೊಟೇಲ್ ಮಾಲೀಕ ಮೃತ ಲಕ್ಷ್ಮಣ್ ನಾಯ್ಕ ಕುಟುಂಬದವರು ಸಾಕಿದ್ದ ಶ್ವಾನಗಳು ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲೇ ಇದುವರೆಗೂ ಕಾಯುತ್ತಿವೆ. ಹದಿಮೂರು ದಿನಗಳಿಂದ ಮಾಲೀಕನ ಬರುವಿಕೆಗೆ ಕಾಯುತ್ತಿರುವ ಶ್ವಾನಗಳನ್ನು ನೋಡಿದರೆ ಎಂತವರಿಗೂ ಮನ ಕಲುಕುವಂತಿದೆ. ಇನ್ನೊಂದು ಸಂಗತಿ ಏಂದರೆ ಪ್ರತಿ ದಿನ ಕಾರ್ಯಾಚರಣೆ ನಡೆಯುವ ಸ್ಥಳವನ್ನು ಬಿಟ್ಟು ನಾಯಿಗಳು ಯಾವ ಕಡೆಯು ಕದಲುತ್ತಿಲ್ಲ. ಕಾರ್ಯಾಚರಣೆಯನ್ನೇ ಗಮನಿಸಿಕೊಂಡು ಕುಳಿತುಕೊಳ್ಳುತ್ತಿವೆ.
ಇದನ್ನೂ ಓದಿ: KRS ಡ್ಯಾಂನ ಒಳ ಹರಿವು, ಹೊರ ಹರಿವು ಹೇಗಿದೆ.. ಎಷ್ಟು ಟಿಎಂಸಿ ನೀರು ಸಂಗ್ರಹ ಆಗಿದೆ ಗೊತ್ತಾ?
ಶ್ವಾನಗಳನ್ನು ಕಂಡು ಮರುಗಿದ ರಕ್ಷಣಾ ಸಿಬ್ಬಂದಿ ಅವುಗಳಿಗೆ ಊಟ ಹಾಕಿದರು ನಾಯಿಗಳು ಊಟ ತಿನ್ನದೇ ಮಾಲಿಕನಿಗಾಗಿ ಕಾಯುತ್ತಿವೆ. ಹೀಗಾಗಿ ಶ್ವಾನಗಳ ಪ್ರೀತಿ ಕಂಡು ಸಿಬ್ಬಂದಿಗೆ ಬೇಸರವಾಗಿದೆ. ಹೀಗಾಗಬಾರದಿತ್ತು ಎಂದುಕೊಳ್ಳುತ್ತಿದ್ದಾರೆ. ಜುಲೈ 16 ರಂದು ಶಿರೂರಿನ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದಿತ್ತು. ಈ ಭಯಾನಕ ಘಟನೆಯಲ್ಲಿ 11 ಜನರು ನಾಪತ್ತೆಯಾಗಿದ್ದರು. ಇದರಲ್ಲಿ 8 ಜನರ ಮೃತದೇಹ ಪತ್ತೆಯಾಗಿದ್ದು ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ