/newsfirstlive-kannada/media/post_attachments/wp-content/uploads/2024/07/Shirur-1.jpg)
ಆಧುನಿಕ ತಂತ್ರಜ್ಞಾನಗಳ ಮೂಲಕ ಎದುರಾಗುವ ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಅಪಘಾತ ನಡೆದರೂ ಸಹ ಕೆಲವೊಮ್ಮೆ ನೂತನ ತಂತ್ರಜ್ಞಾನಗಳ ಮೂಲಕ ಚಾಲಕ, ಸವಾರರನ್ನು ಬದುಕಿಸಬಹುದಾಗಿದೆ. ಆದರೆ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್​ನನ್ನು​​ ಪತ್ತೆಹಚ್ಚಲು ಇನ್ನೂ ಸಹ ಕಾರ್ಯ ಮುಂದುವರೆದಿದೆ. ಮಳೆ ಹಾಗೂ ರಭಸವಾಗಿ ಹರಿಯುವ ನದಿ ನೀರಿನಿಂದಾಗಿ ಅರ್ಜುನ್​ನನ್ನು​ ಪತ್ತೆ ಹಚ್ಚುವುದು ಸಾಹಸದ ಕೆಲಸವಾಗಿದೆ.
ಸಾಮಾನ್ಯವಾಗಿ ಪ್ರತಿಯೊಂದು ಟ್ರಕ್​ಗಳಲ್ಲಿ ಜಿಪಿಎಸ್​​ ನ್ಯಾವಿಗೇಷನ್​ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಇದಲ್ಲದೇ ನಾಪತ್ತೆಯಾದ ಟ್ರಕ್​ ಅನ್ನು ರಾಡಾರ್​ ಡಿಟೆಕ್ಟರ್​, ಉಪಗ್ರಹ ರೇಡಿಯೋ, ಮೊಬೈಲ್​ ಅಪ್ಲಿಕೇಶನ್​ ಮೂಲಕ ಹುಡುಕಬಹುದಾಗಿದೆ.
ರಾಡಾರ್​ ಡಿಟೆಕ್ಟರ್​ ಟ್ರಕ್​ಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ರಾಡಾರ್​ ಡಿಟೆಕ್ಟರ್ ರೇಡಿಯೋ ತರಂಗಗಳ ಮೂಲಕ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಅಂದಹಾಗೆಯೇ ಇದು ಡಿಜಿಟಲ್​​ ಸಿಗ್ನಲ್​ ಪ್ರೊಸೆಸಿಂಗ್​ ಆಗಿದ್ದು, ಟ್ರಕ್​ ಚಾಲಕನಿಗೆ ಇದು ತುರ್ತು ಸಮಯದಲ್ಲಿ ಮಾಹಿತಿಯನ್ನು ರವಾನಿಸುತ್ತದೆ. ಇದರಲ್ಲಿ ಸೂಪರ್​ಹೆಟೆರೊಡೈನ್​​ ರಿಸೀವರ್​ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಟ್ರಕ್​ಗಳಲ್ಲಿ ವೇಗದ ಅರಿವನ್ನು ಕಾಪಾಡಲು, ಸುರಕ್ಷಿತವಾದ ಚಾಲನೆ ಮಾಡಲು ರಾಡಾರ್​ ಡಿಟೆಕ್ಟರ್ ಸಹಾಯಕವಾಗಿದೆ.
ಇದನ್ನೂ ಓದಿ: ತನ್ನ ಒಡವೆ ಮಾರಿ KRS ಡ್ಯಾಂ ನಿರ್ಮಿಸಿದ ತಾಯಿ.. ಇಂದು ರಾಜ್ಯದ ಜನರ ದಾಹ ತೀರಿಸುತ್ತಿರೋದು ಆಕೆ ಮಾಡಿದ ತ್ಯಾಗದಿಂದ!
ಶಿರೂರು ಲಾರಿ ಚಾಲಕ ಅರ್ಜುನ್​ ನಾಪತ್ತೆ ಕೇಸ್​ನಲ್ಲಿ ಲಾರಿಯಲ್ಲಿ ಜಿಪಿಎಸ್​​ ಗರಿಷ್ಠ 19 ನಿಮಿಷಗಳವರೆಗೆ ಕೆಲಸ ಮಾಡಿದೆ. ಆ ಬಳಿಕ ಕೆಲಸವನ್ನು ನಿಲ್ಲಿಸಿದೆ. ಜುಲೈ 16ರಂದು ಗುಡ್ಡ ಕುಸಿತದ ವೇಳೆ ಬೆಳಗ್ಗೆ 8.49ಕ್ಕೆ ಕೊನೆಯದಾಗಿ ಜಿಪಿಎಸ್​ ಕೆಲಸ ನಿಲ್ಲಿಸಿದೆ. ಬಳಿಕ ಲಾರಿ ಆಫ್​ಲೈನ್​ನಲ್ಲಿ ಕಾಣಿಸಿದೆ.
ಮೊಬೈಲ್​ ಟವರ್ ಸಿಗ್ನಲ್,​ ಲೊಕೇಶನ್​ ಮತ್ತು ಕರೆಯ ಮೂಲಕ ಸ್ಥಳವನ್ನು ಪತ್ತೆ ಹಚ್ಚಬಹುದಾಗಿದೆ. ನಾಪತ್ತೆಯಾದ ಅರ್ಜುನ್​ ವಿಚಾರದಲ್ಲೂ ಜುಲೈ 16ರಂದು ಶುಕ್ರವಾರ ಗುಡ್ಡ ಕುಸಿದ ಜಾಗದಲ್ಲಿ ಮೊಬೈಲ್​ ರಿಂಗಣಿಸಿದೆ. ಆ ಬಳಿಕ ಸಿಗ್ನಲ್​​ ಆಫ್​ ಆಗಿದೆ. ಅರ್ಜುನ್​ ಪೋಷಕರು ಮಗನ ಫೋನ್​ ರಿಂಗಣಿಸಿದೆ ಎಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಅದರಂತೆಯೇ ಶಿರೂರಿನಲ್ಲಿ ಕಾರ್ಯಗಳು ಚುರುಕಿನಿಂದ ಆರಂಭವಾದವು.
ಐಬಾಡ್​​ ಡ್ರೋನ್​
ಸದ್ಯ ಅರ್ಜುನನ್ನು ಹುಡುಕಾಡಲು ಐಬಾಡ್​ ಹೆಸರಿನ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್​ ಸ್ಥಳದಲ್ಲಿದೆ. ಇದರಲ್ಲಿ ರೆಡಾರ್​ ಮತ್ತು ಜಿಪಿಆರ್​ ಟೆಕ್ನಾಲಜಿ ಇದೆ. ಸಿವಿಲ್​ ಇಂಜಿನಿಯರಿಂಗ್​ ಕೆಲಸಗಳಲ್ಲಿ ಈ ಜಿಪಿಆರ್​ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಅಡಿಪಾಯದಲ್ಲಿ ಹಾಕಿದ್ದ ಕಾಂಕ್ರೀಟ್​ಗಳಲ್ಲಿ ಒಡಕು ಕಾಣಿಸಿಕೊಂಡಾಗ ಅಥವಾ ಪೈಪ್​ಲೈನ್​ಗಳಲ್ಲಿ ಒಡಕು ಕಾಣಿಸಿಕೊಂಡಾಗ ಈ ಜಿಪಿಆರ್​​ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಇದಲ್ಲದೇ, ಸೆರಡಾರ್​ ತಂತ್ರಜ್ಞಾನವಿದೆ. ಆದರೆ ಇದು 2 ಮೀಟರ್​ ಮತ್ತು 3 ಮೀಟರ್​ನಷ್ಟು ಮಾತ್ರ ಕಾರ್ಯ ನಿರ್ವಹಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us