ಶಿರೂರು: ನಾಪತ್ತೆಯಾದ ಅರ್ಜುನ್​ ಹುಡುಕಲು ಬಂದ ಐಬಾಡ್​.. ನೀರು, ಮಣ್ಣು, ಹಿಮದಲ್ಲಿದ್ರು ಹುಡುಕುತ್ತೆ ಈ ಡ್ರೋನ್​

author-image
AS Harshith
Updated On
ಶಿರೂರು ಗುಡ್ಡ ಕುಸಿತ;​ 29 ದಿನಗಳ ಬಳಿಕ ಅರ್ಜುನ್​ಗಾಗಿ  ಮತ್ತೆ ಹುಡುಕಾಟಕ್ಕಿಳಿದ ಈಶ್ವರ್​ ಮಲ್ಪೆ
Advertisment
  • ಶಿರೂರು ಭೂಕುಸಿತದಲ್ಲಿ ಅರ್ಜುನ್​ ನಾಪತ್ತೆಯಾಗಿ ಇಂದಿಗೆ 11 ದಿನ
  • ಚಾಲಕನ ಪತ್ತೆಗಾಗಿ ಬಂತು ಅತ್ಯಾಧುನಿಕ ತಂತ್ರಜ್ಞಾನದ ಐಬಾಡ್ ಡ್ರೋನ್​
  • 2.4 ಕಿ.ಮೀ ದೂರದಿಂದ ವಸ್ತುಗಳನ್ನು ವೀಕ್ಷಿಸುವ ಸಾಮರ್ಥ್ಯ ಈ ಡ್ರೋನ್​ಗಿದೆ

ಶಿರೂರು ಭೂಕುಸಿತ ಸಂಭವಿಸಿ ಇಂದಿಗೆ 11 ದಿನ. ಮೂರು ಮೃತದೇಹಗಳಿಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿ ನಾಪತ್ತೆಯಾದ ಲಾರಿ ಮತ್ತು ಚಾಲಕ ಅರ್ಜನ್​ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಭೂಕುಸಿತದ ವೇಳೆ ಲಾರಿ ದಡದಿಂದ 40 ಮೀಟರ್​ ದೂರದ ನೀರಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. 15 ಅಡಿ ಅಳದ ನೀರಿನಲ್ಲಿ ಲಾರಿ ಇದೆ ಎಂದು ತಿಳಿದುಬಂದಿದೆ. ಅರ್ಜುನ್​ ಪತ್ತೆಗಾಗಿ ಐಬಾಡ್​ ಎಂಬ ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಡ್ರೋನ್​ ಕಾರ್ಯನಿರ್ವಹಿಸುತ್ತಿದೆ. ಇದರ ಸಾಮರ್ಥ್ಯ ಮತ್ತು ವಿಶೇಷತೆ ಹೀಗಿದೆ..

publive-image

Ibod ಡ್ರೋನ್​.. ಏನಿದರ ವಿಶೇಷತೆ?

ಐಬಾಡ್ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಿಶೇಷ ಡ್ರೋನ್​. ಇದರ ವಿಶೇಷತೆ ಏನೆಂದರೆ ಆಳವಾದ ಜಾಗದಲ್ಲಿ ವಸ್ತುವನ್ನು ಗುರುತಿಸುವ ಮತ್ತು ಹುಡುಕಬಹುದಾದ ವ್ಯವಸ್ಥೆಯನ್ನು ಹೊಂದಿದೆ. ಪತ್ತೆಯಾದ ವಸ್ತುವಿನ ಗಾತ್ರ, ದಿಕ್ಕು ಸೇರಿ ಕೆಲವು ಸಂಗತಿಯನ್ನು ಗುರುತಿಸುವ ಸಾಮರ್ಥ್ಯ ಐಬಾಡ್ ಡ್ರೋನ್​ಗಿದೆ.

ಇದನ್ನೂ ಓದಿ: ಸೇಲ್ಸ್​ಮ್ಯಾನ್​, ಪೇಂಟರ್​, ಲಾರಿ ಡ್ರೈವರ್​.. ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್​ಗಾಗಿ ಕಾಯುತ್ತಿದೆ ಕುಟುಂಬ

publive-image

ನೀರು, ಹಿಮ, ಮಣ್ಣಿನಲ್ಲಿದ್ದವರನ್ನು ಹುಡುಕುತ್ತೆ

ಐಬಾಡ್ ಡ್ರೋನ್​ನ ಮತ್ತೊಂದು ವಿಶೇಷವೆಂದರೆ ಅದರಲ್ಲಿ ಸ್ಕ್ಯಾನರ್​ ತಂತ್ರಜ್ಞಾನವಿದ್ದು, ನೀರಿನ ಅಡಿಯಲ್ಲೂ ಸಹ ಅದು ಕೆಲಸ ಮಾಡುತ್ತದೆ. ನೀರು, ಹಿಮ, ಪರ್ವತ, ಮಣ್ಣಿನಡಿಯಲ್ಲಿ ಸಾಧನಗಳನ್ನು ಹುಡುಕಲು ಇದು ಯೋಗ್ಯವಾಗಿದೆ.

ಇದನ್ನೂ ಓದಿ: ಶಿರೂರು ಗುಡ್ಡಕ್ಕೆ ಬಂದ ಪೋಕ್​ಲೈನ್: ಏನಿದರ ಸಾಮರ್ಥ್ಯ? ಇಲ್ಲಿದೆ ಮಾಹಿತಿ

publive-image

ಕೇರಳ ಮೂಲದ ಲಾರಿ ಡ್ರೈವರ್​ ಅರ್ಜುನ್​ಗಾಗಿ ಐಬಾಡ್ ಡ್ರೋನ್​ ಬಳಸಲಾಗುತ್ತಿದೆ. ಐಬಾಡ್ ಕ್ವಿಕ್​ ಪೇ ಎಂಬ ಖಾಸಗಿ ಕಂಪನಿ ಸದ್ಯ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ.

2.4 ಕಿ.ಮೀ ದೂರದಿಂದ ವೀಕ್ಷಿಸಬಹುದಾಗಿದೆ

ಐಬಾಡ್ ಡ್ರೋನ್​ ಮೂಲಕ 2.4 ಕಿ.ಮೀ ದೂರದಿಂದ ವಸ್ತುಗಳನ್ನು ವೀಕ್ಷಿಸಬಹುದಾಗಿದೆ. ಇದರಲ್ಲಿ ರೇಡಿಯೋ ಆವರ್ತನ ಮತ್ತು ಆರ್ಟಿಫಿಶಿಯಲ್​ ಇಂಟಲಿಜನ್ಸ್​​ ಸಂಯೋಜಿಸುವ ತಂತ್ರಜ್ಞಾನವಿದೆ.

publive-image

ಹಿಮದಲ್ಲಿ ಹುದುಗಿದ್ದರೂ ಪತ್ತೆಹಚ್ಚುತ್ತೆ

ಇದಲ್ಲದೆ, ಐಬಾಡ್ ಡ್ರೋನ್ ಮಣ್ಣಿನ ಅಡಿಯಲ್ಲಿ 20 ಮೀಟರ್​​ ಆಳದವರೆಗೂ ಹುದುಗಿರುವ ವಸ್ತುಗಳನ್ನು ಪತ್ತೆ ಮಾಡುತ್ತದೆ. 70 ಮೀಟರ್​ ಆಳದವರೆಗೆ ನೀರಿನಲ್ಲಿ ಮತ್ತು ಹಿಮದಲ್ಲಿ ಹುದುಗಿರುವ ವಸ್ತುವನ್ನು ಪತ್ತೆ ಮಾಡುವ ಸಾಮರ್ಥ್ಯ ಕ್ವಿಕ್​ ಪೇ ಕಂಪನಿಯ ಐಬಾಡ್ ಡ್ರೋನ್​ಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment