Advertisment

ಶಿರೂರು ಗುಡ್ಡ ಕುಸಿತ ಪ್ರಕರಣ: ನಾಪತ್ತೆಯಾದ ಮಗನನ್ನು ಹುಡುಕಿಕೊಡುವಂತೆ ಠಾಣೆ ಮೆಟ್ಟಿಲೇರಿದ ತಾಯಿ

author-image
AS Harshith
Updated On
ಶಿರೂರು ಗುಡ್ಡ ಕುಸಿತ ಪ್ರಕರಣ: ನಾಪತ್ತೆಯಾದ ಮಗನನ್ನು ಹುಡುಕಿಕೊಡುವಂತೆ ಠಾಣೆ ಮೆಟ್ಟಿಲೇರಿದ ತಾಯಿ
Advertisment
  • ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣ
  • ದಿನಕ್ಕೊಬ್ಬರಂತೆ ನಾಪತ್ತೆಯಾದವರ ಹೆಸರುಗಳು ಕೇಳಿಬರುತ್ತಿವೆ
  • ನಾಪತ್ತೆಯಾದ ಮಗನಿಗಾಗಿ ಪೊಲೀಸ್​​​ ಠಾಣೆ ಮೆಟ್ಟಿಲೇರಿದ ತಾಯಿ

ಕಾರವಾರ: ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ವಿಚಾರವಾಗಿ ದಿನದಿಂದ ದಿನಕ್ಕೆ ಒಬ್ಬೊಬ್ಬರಂತೆ ನಾಪತ್ತೆಯಾದವರ ಹೆಸರುಗಳು ಕೇಳಿಬರುತ್ತಿವೆ. ಅದರಂತೆಯೇ ಇದೀಗ ಗೋಕರ್ಣ ಬಳಿಯ ಗಂಗೆಕೊಳ್ಳದ ಯುವಕ ಓರ್ವ ನಾಪತ್ತೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

Advertisment

ಗಂಗೆಕೊಳ್ಳದ ಲೊಕೇಶ್ ಎಂಬ ಯುವಕ ನಾಪತ್ತೆಯಾಗಿದ್ದು, ನಾಪತ್ತೆ ಆದ ಮಗನನ್ನು ಹುಡುಕಿಕೊಡುವಂತೆ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳೆದ ಐದು ದಿನಗಳಿಂದ ಮಗ ಮನೆಗೆ ಬಂದಿಲ್ಲ ಎಂದು ದೂರು ನೀಡಿದ್ದಾರೆ.

ಇದನ್ನೂ ಓದಿ: ಪತಿಯ ವಿಮೆ ಹಣಕ್ಕಾಗಿ ಮಹಿಳೆಯ ಬರ್ಬರ ಕೊಲೆ; ರಕ್ತದ ಮಡುವಿನಲ್ಲಿ ಬಿದ್ದಿರುವ ಮೃತದೇಹ

ಗುಡ್ಡ ಕುಸಿತದ ದಿನ ಆ ಹೊಟೇಲ್​ನಲ್ಲೇ ಲೊಕೇಶ್ ಇದ್ದ ಎಂಬ ಮಾಹಿತಿ ಲಭಿಸಿದೆ. ಅದೇ ಹೊಟೇಲ್​ನಲ್ಲಿ ಇದ್ದಿದ್ದನ್ನ ಕೆಎಸ್ಆರ್​​​ಟಿಸಿ ಚಾಲಕರೊಬ್ಬರು ನೋಡಿದ್ದಾರೆ. ಆದರೆ ಬಸ್ ಪಾಸ್ ಆಗಿ ಕೆಲವೇ ನಿಮಿಷಗಳಲ್ಲಿ ಈ ದುರಂತ ಸಂಭವಿಸಿದೆ.

Advertisment

publive-image

ಇದನ್ನೂ ಓದಿ: ಟ್ರಾನ್ಸ್​ಫಾರ್ಮರ್ ಹಿಡಿದು ಹೆಸ್ಕಾಂ ನೌಕರ ಆತ್ಮಹ*.. ವಿದ್ಯುತ್ ಪ್ರವಹಿಸಿ ಸುಟ್ಟು ಕರಕಲಾದ ಲೈನ್​ಮೆನ್

ಲೊಕೇಶ್ ನಾಯ್ಕ್ ನಾಪತ್ತೆ ಇನ್ನಷ್ಟು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ. ಮಗ ನಾಪತ್ತೆ ಆಗಿದ್ದಾನೆಂದು ತಾಯಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment