/newsfirstlive-kannada/media/post_attachments/wp-content/uploads/2024/07/Pallavi-naik-1.jpg)
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಜಗನ್ನಾಥ್​ ಇನ್ನೂ ಪತ್ತೆಯಾಗಿಲ್ಲ. ಅತ್ತ ಕಾಣೆಯಾದ ತಂದೆಯ ಮೂಳೆಯನ್ನಾದರು ಹುಡುಕಿ ಕೊಡಿ ಎಂದು ಜಗನ್ನಾಥ್ ಮಗಳು ಪಲ್ಲವಿ ನಾಯ್ಕ ಕೋರಿಕೊಂಡಿದ್ದಾಳೆ.
ನ್ಯೂಸ್ ಫಸ್ಟ್ ಜೊತೆಗೆ ಮಾತನಾಡಿದ ಪಲ್ಲವಿ ನಾಯ್ಕ, 12 ದಿನ ಆಗಿದೆ ಇನ್ನೂ ತಂದೆಯ ದೇಹ ಸಿಕ್ಕಿಲ್ಲ. ತಾಯಿ ಊಟ ತಿಂಡಿ ಬಿಟ್ಟಿದ್ದಾರೆ. ಎಲ್ಲರೂ ಕಣ್ಣೀರಲ್ಲಿ ಕಾಲ ಕಳೆಯುತ್ತಿದ್ದೇವೆ ಎಂದು ತಂದೆಯನ್ನು ನೆನೆದು ಮಗಳು ಬೇಸರ ತೋಡಿಕೊಂಡಿದ್ದಾರೆ.
ತಂದೆ ಮುಖ ನಾವು ನೋಡಬೇಕು. ಅವರನ್ನ ಒಮ್ಮೆ ನೋಡಿದರೆ ಸಾಕು. ಅವರ ದೇಹ ಸಿಕ್ಕರೂ ಪರವಾಗಿಲ್ಲ. ಅವರು ಇನ್ನೂ ಬದುಕಿ ಬರುವ ವಿಶ್ವಾಸವಿದೆ. ಎಲ್ಲಾದರು ಅಡಗಿ ಕುಳಿತಿದ್ದರೆ ಬದುಕಿ ಬರಬಹುದು ಎನ್ನುವ ನಿರೀಕ್ಷೆ ಇದೆ ಎಂದು ಪಲ್ಲವಿ ನಾಯ್ಕ ಹೇಳಿದ್ದಾರೆ.
ಇದನ್ನೂ ಓದಿ: ಶಿರೂರು: ಲಾರಿ ಚಾಲಕ ಅರ್ಜುನ್​ ಹುಡುಕಲು ‘ಈಶ್ವರ’ನ ಮೊರೆ.. ಸಮುದ್ರದ ಆಳಕ್ಕೆ ಹೋಗಿ ಶವ ತರೋ ಸಾಹಸಿ ಈತ
ಜುಲೈ 16ರಂದು ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ಈಗಾಗಲೇ 7 ಮೃತದೇಹ ಸಿಕ್ಕಿದೆ. ಇನ್ನುಳಿದ ಮೂರು ಮೃತದೇಹಗಳಿಗೆ ಹುಡುಕಾಟ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us