Advertisment

ಶಿರೂರು ಪ್ರಕರಣ: 12 ದಿನವಾದ್ರು ಪತ್ತೆಯಾಗದ ಅರ್ಜುನ್​.. ಕೆಲಸ ಮುಗಿಸಿ ವಾಪಾಸ್​​ ಹೋದ ಪೋಕ್ಲೈನ್

author-image
AS Harshith
Updated On
ಶಿರೂರು ಗುಡ್ಡಕ್ಕೆ ಬಂದ ಪೋಕ್​ಲೈನ್: ಏನಿದರ ಸಾಮರ್ಥ್ಯ? ಇಲ್ಲಿದೆ ಮಾಹಿತಿ
Advertisment
  • ಇಂದು ಅರ್ಜುನ್​ಗಾಗಿ ಮುಳುಗು ತಜ್ಞರಿಂದ ಹುಡುಕಾಟ
  • ಜುಲೈ 16ರಂದು ಸಂಭವಿಸಿದ ಘಟನೆ.. ಇನ್ನೂ ಪತ್ತೆಯಾಗದ ಅರ್ಜುನ್
  • ನಿರಂತರ ಶೋಧ.. 20 ಅಡಿ ಅಳದ ನದಿಯಲ್ಲಿ ಅರ್ಜುನ್​ ಲಾರಿ ಪತ್ತೆ

ಶಿರೂರು ಗುಡ್ಡ ಕುಸಿತ ಪ್ರಕರಣ ಸಂಭವಿಸಿ ಇಂದಿಗೆ 12 ದಿನವಾಗಿದೆ. ನಾಪತ್ತೆಯಾದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನದಿಯ ದಡದಲ್ಲಿ ಈಗಾಗಲೇ ಹುಡುಕಾಟ ಮುಗಿದಿದ್ದು, ಲಾರಿ ಮತ್ತು ಚಾಲಕ ಅರ್ಜುನ್​ ನದಿಯೊಳಗೆ ಇದ್ದಾರೆ ಎಂದು ಹೇಳಲಾಗುತ್ತಿದೆ. ಅತ್ತ ಗೋಕಾಕ್ ನಿಂದ ಬಂದ ಪೋಕ್ಲೈನ್ ತನ್ನ ಕೆಲಸ ಮುಗಿಸಿದ್ದು, ವಾಪಾಸ್ ಆಗುತ್ತಿದೆ.

Advertisment

ಇಂದು ಅರ್ಜುನ್​ಗಾಗಿ ಮುಳುಗು ತಜ್ಞರಿಂದ ಹುಡುಕಾಟ ನಡೆಯಲಿದೆ. ಈಶ್ವರ್ ಮಲ್ಪೆ ತಂಡ ಇಂದು ಶಿರೂರಿಗೆ ಬರಲಿದ್ದು, ಅರ್ಜುನ್​​ಗಾಗಿ ಹುಡುಕಾಡಲಿದ್ದಾರೆ. ಜಿಲ್ಲಾಡಳಿತದ ಮನವಿ ಮೇರೆಗೆ ಮುಳುಗು ತಜ್ಞರ ತಂಡ ಶಿರೂರಿಗೆ ಆಗಮಿಸಲಿದ್ದಾರೆ.

publive-image

ಇದನ್ನೂ ಓದಿ: ಕಾರು ಖರೀದಿಸೋ ಪ್ಲಾನ್​ ಇದೆಯಾ? ವಿಜಯ ಮಲ್ಯ ಕಾರು ಸೇಲ್​​ಗಿದೆ

ಗಂಗಾವಳಿ ನದಿಯಲ್ಲಿ ನೀರಿನ ವೇಗ ಹೆಚ್ಚಿರುವ ಹಿನ್ನಲೆಯಲ್ಲಿ, ನೀರಿನೊಳಗೆ ಹೋಗಲು ನೌಕಾದಳದ ಮುಳುಗು ತಜ್ಞರು ಹಿಂದೇಟು ಹಾಕಿದ್ದಾರೆ. ಈ ವೇಳೆ ಶಾಸಕ ಸತೀಶ್ ಸೈಲ್ ಸ್ಥಳೀಯ ಮೀನುಗಾರ ಹಾಗೂ ಈಶ್ವರ್ ಮಲ್ಪೆ ಸಹಾಯ ಕೇಳಿದ್ದಾರೆ.

[caption id="attachment_77069" align="alignnone" width="800"]publive-image ಈಶ್ವರ್​ ಮಲ್ಪೆ ಮತ್ತು ತಂಡ[/caption]

Advertisment

ಇದನ್ನೂ ಓದಿ: VIDEO: ಡಿವೋರ್ಸ್​​ ಪಾರ್ಟಿ ಆಯೋಜಿಸಿ ಹುಚ್ಚೆದ್ದು ಕುಣಿದ ಮಹಿಳೆ! ಈಕೆ ಯಾರು ಗೊತ್ತಾ?

ಇಂದು ಅರ್ಜುನ್​ ಮತ್ತು ಲಾರಿ ಪತ್ತೆಯಾದರೆ ನದಿಯ ಕೆಳಗೆ ಸುಮಾರು 20 ಅಡಿ ಆಳದಲ್ಲಿರುವ ಲಾರಿ ಮೇಲಕ್ಕೆ ಎತ್ತಲು ಪ್ರಯತ್ನ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment