/newsfirstlive-kannada/media/post_attachments/wp-content/uploads/2025/03/mokshi2.jpg)
ಬಿಗ್ಬಾಸ್ ಶೋನಲ್ಲಿ ಶಿಶಿರ್, ಐಶ್ವರ್ಯಾ ಸಿಂಧೋಗಿ ಬಾಂಡಿಂಗ್ ವೀಕ್ಷಕರಿಗೆ ಇಷ್ಟ ಆಗುತ್ತಿತ್ತು. ನಂತರ ಇವರ ಜೊತೆ ಜಾಯಿನ್ ಆಗಿದ್ದು ಮೋಕ್ಷಿತಾ ಪೈ. ಈ ಮೂವರ ನಡುವಿನ ಸ್ನೇಹ ಶೋ ನಂತರವೂ ಮುಂದುವರೆದಿದೆ.
ಇದನ್ನೂ ಓದಿ: ತಾಯಿ- ಮಗನ ಬಗ್ಗೆ ಸುಮಲತಾ ಸ್ಪಷ್ಟನೆ; ದರ್ಶನ್ ಅನ್ಫಾಲೋ ವಿಚಾರಕ್ಕೂ ಉತ್ತರ..!
ಮೊನ್ನೆಯಷ್ಟೇ ಐಶೂಗೆ ಸರ್ಪ್ರೈಸ್ ನೀಡಿದ್ರು ಮೋಕ್ಷಿತಾ. ಈ ಭೇಟಿ ಬೆನ್ನಲ್ಲೇ ಎಲ್ಲಿಗೆ ಹೋದ್ರು ಒಟ್ಟಿಗೆ ಜಾಲಿ ಮಾಡ್ಕೊಂಡು ಫ್ರೆಂಡ್ಶಿಪ್ನ ಸೆಲೆಬ್ರೆಟ್ ಮಾಡ್ತಿದ್ದಾರೆ. ರಂಜಿತ್ ನಿಶ್ಚಿತಾರ್ಥದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದ ಮೂವರು ಸಖತ್ ಎಂಜಾಯ್ ಮಾಡಿದ್ದರು.
ಸದ್ಯ ಕೊಡಗಿಗೆ ಭೇಟಿ ನೀಡಿರೋ ಮೋಕ್ಷಿತಾ, ಶಿಶಿರ್ ಹಾಗೂ ಐಶ್ವರ್ಯಾ ಸಿಂಧೋಗಿ ಸ್ನೇಹದ ಕಡಲಲ್ಲಿ ತೇಲಾಡುತ್ತಿದ್ದಾರೆ. ವಿಶೇಷ ಎಂದರೆ ಐಶ್ವರ್ಯಾ ಸಿಂಧೋಗಿ ಹಾಗೂ ಮೋಕ್ಷಿತಾ ಒಂದೇ ತರಹದ ಕಾಸ್ಟ್ಯೂಮ್ ಧರಿಸಿದ್ದರು.
View this post on Instagram
ಸೇಮ್ ಟು ಸೇಮ್ ರೆಡಿಯಾಗಿದ್ದರು. ಮೂವರ ಬಾಂಡಿಂಗ್ ನೋಡೋದೆ ಆನಂದ, ಈ ಸ್ನೇಹ ಚಿರಕಾಲ ಹೀಗೆ ಇರಲಿ.. ಅಂತ ಅಭಿಮಾನಿಗಳೂ ಹಾರೈಸ್ತಿದ್ದಾರೆ. ನಿಮ್ಮ ಈ ಸ್ನೇಹದ ಮೇಲೆ ಯಾರ ಕಣ್ಣು ಬಿಳದಿರಲಿ, ಸದಾ ಹೀಗೆ ಇರಿ ನಗುತಾ ನಗುತಾ ಎಂದು ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ