/newsfirstlive-kannada/media/post_attachments/wp-content/uploads/2024/07/arman-1.jpg)
ಬಹುನಿರೀಕ್ಷಿತ ರಿಯಾಲಿಟಿ ಶೋ ಹಿಂದಿಯ ಬಿಗ್​​ಬಾಸ್ ಒಟಿಟಿ ಸೀಸನ್​​ 3 ಆರಂಭವಾಗಿದೆ. ಈ ಶೋ ಶುರುವಾಗುವ ಮುನ್ನವೇ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು.​ ಆದರೆ ಈ ಬಾರಿಯ ಹಿಂದಿ ಬಿಗ್​ಬಾಸ್ ಒಟಿಟಿ ಸೀಸನ್​ 3 ಸ್ಪರ್ಧಿಗಳು ಸಖತ್​ ಸದ್ದು ಮಾಡುತ್ತಿದ್ದಾರೆ.
ಅದರಲ್ಲೂ ಯೂಟ್ಯೂಬರ್ ಅರ್ಮಾನ್ ಮಲಿಕ್ ದಂಪತಿ ಬಗ್ಗೆ ವೀಕ್ಷಕರ ಜೊತೆಗೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಮನೀಶಾ ಕಯಾಂಡೆ ಆಕ್ರೋಶ ಹೊರ ಹಾಕಿದ್ದಾರೆ. ಹೌದು, ಯೂಟ್ಯೂಬರ್ ಅರ್ಮಾನ್ ಮಲಿಕ್ ತಮ್ಮ ಇಬ್ಬರು ಹೆಂಡತಿಯರಾದ ಪಾಯಲ್ ಮತ್ತು ಕೃತಿಕಾ ಜೊತೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್​ಬಾಸ್​ಗೆ ಹೋದ ಮೊದಲ ವಾರಕ್ಕೆ ಅರ್ಮಾನ್ ಮಲಿಕ್ ಮೊದಲ ಹೆಂಡತಿ ಪಾಯಲ್ ಮಲಿಕ್​ ಶೋನಿಂದ ಎಲಿಮಿನೇಟ್ ಆಗಿದ್ದರು. ಬಿಗ್​ಬಾಸ್​ಗೂ ಬರುವ ಮುನ್ನ ಸಖತ್​ ಹೈಪ್​ ಕ್ರಿಯೇಟ್​ ಮಾಡಿದ್ದ ಅರ್ಮಾನ್ ಮಲಿಕ್ ದಂಪತಿ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ.
Maine to kuch nahi dekha 🫣🫣🫣🤭🤭#LuvKataria#ElvishYadav#BiggBossOTT3#KritikaMalik#VishalPandey#SanaMakbul#ShivaniKumari#NaezyTheBaa#SanaSultan#ArmaanMalikpic.twitter.com/2sspyXjKXm
— Priya Vatsh (@Priyankavatsh) July 13, 2024
ಆದರೆ ಕಳೆದ ವಾರದಿಂದ ಬಿಗ್​ಬಾಸ್​ ಕ್ಯಾಮೆರಾದಲ್ಲಿ ಅರ್ಮಾನ್ ಮಲಿಕ್ ಹಾಗೂ ಕೃತಿಕಾ ಮಲಿಕ್​ ಇಬ್ಬರು ಬೆಡ್​ ಮೇಲೆ ಸೆಕ್ಸ್​ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೇ ವಿಡಿಯೋ ನೋಡಿದ ಅದೆಷ್ಟೋ ನೆಟ್ಟಿಗರು ಕಾಮೆಂಟ್ಸ್​ ಮಾಡುವ ಮೂಲಕ ಬಿಗ್​ಬಾಸ್​ ಶೋ ಕುರಿತು ಬೇಸರ ಹೊರ ಹಾಕಿದ್ದರು.
ಆದರೆ ಇದೀಗ ಇದೇ ವಿಡಿಯೋ ನೋಡಿದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಮನೀಶಾ ಕಯಾಂಡೆ ಮುಂಬೈ ಪೊಲೀಸ್ ಮುಖ್ಯಸ್ಥ ವಿವೇಕ್ ಫನ್ಸಾಲ್ಕರ್ ಅವರನ್ನು ಭೇಟಿ ಮಾಡಿ ಬಿಗ್ ಬಾಸ್ OTT ಸೀಸನ್ 3 ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಬಿಗ್​ಬಾಸ್ ಸ್ಪರ್ಧಿಗಳಾದ ಅರ್ಮಾನ್ ಮಲಿಕ್ ಅವರ ಪತ್ನಿ ಕೃತಿಕಾ ಮಲಿಕ್ ಜೊತೆಗೆ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಕೂಲಂಕಷವಾಗಿ ಕವರ್ ತೋರಿಸಲಾಗಿದೆ. ಅರ್ಮಾನ್ ಮಲಿಕ್ ಮತ್ತು ಕೃತಿಕಾ ಮಲಿಕ್ ಎಲ್ಲಾ ಮಿತಿಗಳನ್ನು ದಾಟಿದ್ದಾರೆ ಹೀಗಾಗಿ ಬಾಸ್ OTT ಸೀಸನ್ 3 ನಿರ್ಮಾಪಕರ ವಿರುದ್ಧ ಕೇಸ್​ ದಾಖಲಿಸಿ ಅಂತ ಒತ್ತಾಯಿಸಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ