/newsfirstlive-kannada/media/post_attachments/wp-content/uploads/2024/09/raja-rani1.jpg)
ಸೋಷಿಯಲ್​ ಮೀಡಿಯಾ ಅನ್ನೋದು ಹಾಗೇ ಯಾರು, ಯಾವಾಗ ಫೇಮಸ್​ ಆಗ್ತಾರೆ ಅಂತ ಹೇಳೋದಕ್ಕೆ ಆಗೋದಿಲ್ಲ. ಈಗಂತೂ ರೀಲ್​​ದ್ದೇ ದರ್ಬಾರ್​. ಹೀಗೆ ದಂಪತಿಗಳು ಚೆಂದವಾಗಿ ರೀಲ್ಸ್​ ಮಾಡುತ್ತಾ ಫೇಮಸ್​ ಆಗಿದ್ದ ಈ ಜೋಡಿ ಮನೆ ಮಾತಾಗಿದ್ದಾರೆ ಗೋವಿಂದರಾಜ್-ವೈಲಾ.
/newsfirstlive-kannada/media/post_attachments/wp-content/uploads/2024/09/raja-rani.jpg)
ಇತ್ತೀಚೆಗೆ ಈ ಕರ್ನಾಟಕ ಜೋಡಿ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದೆ. 'ಯಾಮಿನಿ ಯಾಮಿನಿ' ಹಾಡಿಗೆ ರೀಲ್ಸ್​ ಮಾಡಿ ಫೇಮಸ್ ಆಗಿದ್ದಾರೆ. ​ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ವಿಡಿಯೋಗಳ ಮೂಲಕ ಗೋವಿಂದರಾಜ್ ಹಾಗೂ ವೈಲಾ ದಂಪತಿ ಕರ್ನಾಟಕ ಜೋಡಿ ಅಂತಲೇ ನೆಟ್ಟಿಗರಿಗೆ ಪರಿಚಿತರಾಗಿಬಿಟ್ಟಿದ್ದಾರೆ. ಸದ್ಯ ಇದೇ ಜೋಡಿ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿದ್ದಾರೆ.
View this post on Instagram
ಈ ಮೂಲಕ ಕರ್ನಾಟಕ ಜೋಡಿ ಗೋವಿಂದರಾಜ್ ದಂಪತಿಗೆ ಫ್ಯಾನ್​ ಬೇಸ್​ ಹೆಚ್ಚಾಗುತ್ತಿದೆ. ಗಣೇಶ ಹಬ್ಬದ ನಿಮಿತ್ತ ಗಿಚ್ಚಿ ಗಿಲಿಗಿಲಿ ಹಾಗೂ ರಾಜಾ ರಾಣಿ ಶೋಗಳ ಮಹಾ ಸಂಗಮ ನಡೆದಿದೆ. ಇದೇ ವೇಳೆ ಗಿಚ್ಚಿ ಗಿಲಿಗಿಲಿ ಶಿವು ಹಾಗೂ ದೀಕ್ಷಾ ಎಸ್.ಎಮ್ ಬ್ರಹ್ಮಾವರ ಅವರು ಗೋವಿಂದರಾಜ್ ಹಾಗೂ ವೈಲಾ ದಂಪತಿಯನ್ನು ರಿ ಕ್ರಿಯೇಟ್ ಮಾಡಿದ್ದಾರೆ. ಗೋವಿಂದರಾಜ್ ಹಾಗೂ ವೈಲಾ ಅವರ ಹಾಗೇ ಶಿವು ಹಾಗೂ ದೀಕ್ಷಾ ರೆಡಿಯಾಗಿ ವೇದಿಕೆಗೆ ಬಂದಿದ್ದಾರೆ. ಶಿವು ಹಾಗೂ ದೀಕ್ಷಾ ವೇದಿಕೆ ಮೇಲೆ ಕರ್ನಾಟಕ ಜೋಡಿ ಗೆಟಪ್​ನಲ್ಲಿ ನೋಡಿದ ಜಡ್ಜಸ್​ ಬಿದ್ದು ಬಿದ್ದು ನಕ್ಕಿದ್ದಾರೆ. ಅಷ್ಟರ ಮಟ್ಟಿಗೆ ಕರ್ನಾಟಕ ಜೋಡಿಯ ಹಾಗೇ ಪರ್ಫಾರ್ಮೆನ್ಸ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us