Advertisment

ಶಿವಣ್ಣ ಬರ್ತ್​ಡೇಗೆ ಗುಡ್​ನ್ಯೂಸ್​.. ಶಿವರಾಜ್​ ಕುಮಾರ್​ಗೆ ಮತ್ತೆ ದುನಿಯಾ ಸೂರಿ ಡೈರೆಕ್ಷನ್​

author-image
Bheemappa
Updated On
ಶಿವಣ್ಣ ಬರ್ತ್​ಡೇಗೆ ಗುಡ್​ನ್ಯೂಸ್​.. ಶಿವರಾಜ್​ ಕುಮಾರ್​ಗೆ ಮತ್ತೆ ದುನಿಯಾ ಸೂರಿ ಡೈರೆಕ್ಷನ್​
Advertisment
  • ಶಿವಣ್ಣ ಹುಟ್ಟುಹಬ್ಬದ ಸಂಭ್ರಮದಂದು ಚಿತ್ರತಂಡದಿಂದ ಬಿಗ್ ಪ್ಲಾನ್
  • ಹ್ಯಾಟ್ರಿಕ್ ಹೀರೋ ಹಾಗೂ ಸುಕ್ಕಾ ಸೂರಿ ಕಾಂಬೋದಲ್ಲಿ ಮೂವಿ
  • ಬಹುದೊಡ್ಡ ಯಶಸ್ಸು ಕಂಡಿದ್ದ ಶಿವಣ್ಣ ಅಭಿನಯದ ಟಗರು ಸಿನಿಮಾ

ಸ್ಯಾಂಡಲ್​ವುಡ್​ನಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್ ಅವರ ಕ್ರೇಜ್​ ಇನ್ನಷ್ಟು ಎತ್ತರಕ್ಕೆ ತಗೊಂಡು ಹೋದ ಸಿನಿಮಾ ಎಂದರೆ ಅದು ಟಗರು. ಶಿವರಾಜ್​​ ಕುಮಾರ್​ ಸಿನಿಕರಿಯರ್‌ನಲ್ಲಿ ದೊಡ್ಡ ಹಿಟ್ ಸಿನಿಮಾ ಟಗರು. ದುನಿಯಾ ಸೂರಿ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಅಭಿಮಾನಿಗಳಿಗೆ ರಂಜಿಸಿತ್ತು. ಸಿನಿಮಾದಲ್ಲಿ ಶಿವಣ್ಣ ಮಾತ್ರವಲ್ಲ, ಡಾಲಿ, ಚಿಟ್ಟೆ ಆಗಿ ನಟಿಸಿದ್ದ ಧನಂಜಯ ಹಾಗೂ ವಸಿಷ್ಠ ಸಿಂಹಗೂ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಸದ್ಯ ಇದೇ ಸಿನಿಮಾದ 2ನೇ ಭಾಗ ಬರುವುದು ಕನ್​ಫರ್ಮ್​ ಆಗಿದೆ.

Advertisment

ನಾಳೆ ಅಂದರೆ ಜುಲೈ 12 ರಂದು ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು 63ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇದರಿಂದ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು ಇದರ ಜೊತೆ ಜೊತೆಗೆ ಟಗರು ಸಿನಿಮಾದ ಭಾಗ-2 ಅನ್ನು ಘೋಷಣೆ ಮಾಡಲಾಗುತ್ತದೆ. ಈ ಬಗ್ಗೆ ಟಗರು ಚಿತ್ರತಂಡ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು ಜುಲೈ 12 ರಂದು ಶಿವಣ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿ ಟಗರು-2 ಸಿನಿಮಾ ಕೂಡ ಅನೌನ್ಸ್​ ಮಾಡಲಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಅಮೆರಿಕಾ ಪ್ರವಾಸ ದುಬಾರಿ.. ಭಾರತದ ವಿದ್ಯಾರ್ಥಿಗಳು, ಟೆಕ್ಕಿ, ಟೂರಿಸ್ಟ್​ಗಳಿಗೆ​ ಟ್ರಂಪ್ ಬಿಗ್ ಶಾಕ್!

publive-image

ಟಗರು ಸಿನಿಮಾ ಪೊಲೀಸ್ ಹಾಗೂ ರೌಡಿಗಳ ನಡುವಿನ ಡ್ರಾಮಾದಿಂದ ಕೂಡಿದ್ದು ವಿಭಿನ್ನವಾದ ಕಥೆ ಇದ್ದಿದ್ದರಿಂದ ದೊಡ್ಡ ಯಶಸ್ಸು ಕಂಡಿತ್ತು. ದುನಿಯಾ ಸೂರಿ ಅವರ ಡೈರೆಕ್ಷನ್​ ಯಾವಾಗಲೂ ಫಸ್ಟ್​ ಕ್ಲಾಸ್ ಆಗಿರುತ್ತೆ. ಜೊತೆಗೆ ಶಿವಣ್ಣ ಅವರ ಆ್ಯಕ್ಟಿಂಗ್​ ಹಾಗೂ ಲಾಂಗ್, ಮಚ್ಚು ಹಾಡುಗಳು ಎಲ್ಲ ಸಿನಿಮಾ ನೋಡುಗರ ರೋಮಾಂಚನಗೊಳಿಸುತ್ತವೆ. ಸೆಂಚುರಿ ಸ್ಟಾರ್ ಸಿನಿಮಾ ಎಂದರೆ ಫ್ಯಾನ್ಸ್​ ಕಾತುರದಿಂದ ಇರುತ್ತಾರೆ.

Advertisment

ಟಗರು ಮೂವಿಯನ್ನು ದುನಿಯಾ ಸೂರಿ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಶಿವಣ್ಣ ಅವರ ನಟನೆ ಅದ್ಭುತವೇ ಆಗಿತ್ತು. ಕೆ.ಪಿ ಶ್ರೀಕಾಂತ್ ಅವರು ನಿರ್ಮಿಸಿದ ಈ ಮೂವಿಯಲ್ಲಿ ಮಾನ್ವಿತ ಮತ್ತು ಭಾವನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಧನಂಜಯ್ ಮತ್ತು ವಸಿಷ್ಠ ಸಿಂಹ ಅವರ ನಟನೆ ನೋಡುಗರನ್ನ ಬೆರಗುಗೊಳಿಸುವಂತೆ ಇದೆ. ಹಿರಿಯ ನಟ ದೇವರಾಜ್ ಅವರು ಪೋಷಕ ಪಾತ್ರದಲ್ಲಿ ಕಾಣಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment