ರಾಮನಿಗಾಗಿ ಸೀತಾ, ಶಿವುಗಾಗಿ ಗೀತಾ.. ನೆನಪುಗಳನ್ನು ಮೆಲುಕು ಹಾಕಿದ ಶಿವಣ್ಣ; ಏನಿದರ ವಿಶೇಷ?

author-image
Bheemappa
Updated On
ರಾಮನಿಗಾಗಿ ಸೀತಾ, ಶಿವುಗಾಗಿ ಗೀತಾ.. ನೆನಪುಗಳನ್ನು ಮೆಲುಕು ಹಾಕಿದ ಶಿವಣ್ಣ; ಏನಿದರ ವಿಶೇಷ?
Advertisment
  • ಅಂದು ನಡೆದ ಶಿವಣ್ಣನ ಅದ್ಧೂರಿ ಮದುವೆಗೆ ಯಾರು ಯಾರು ಬಂದಿದ್ರು?
  • ಶಿವರಾಜ್​ಕುಮಾರ್- ಗೀತಾ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮ
  • ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಗೀತಾರನ್ನು ವರಿಸಿದ್ದ ಶಿವಣ್ಣ

ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್​ ಅವರಿಗೆ 62 ವರ್ಷಗಳು ತುಂಬಿದರು ಈಗಲೂ ಯಂಗ್ ಆ್ಯಂಡ್ ಎನರ್ಜಿಯಾಗಿದ್ದಾರೆ. ಸಿನಿಮಾಗಳಲ್ಲಿ ನವಯುವಕನಂತೆ ಅಭಿನಯ ಮಾಡುವ ಶಿವಣ್ಣಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಗಣ್ಯರು ಸೇರಿದಂತೆ ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

publive-image

ಶಿವರಾಜ್​ ಕುಮಾರ್ ಹಾಗೂ ಗೀತಾ ಅವರು 1986ರ ಮೇ 19ರಂದು ನವ ದಾಂಪತ್ಯಕ್ಕೆ ಕಾಲಿಟ್ಟಿದ್ದು ಇಂದು 39ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಅಂದು ಬೆಂಗಳೂರಿನ ಅರಮನೆಯಲ್ಲಿ ಬೆಳಗ್ಗೆ 12-10 ರಿಂದ 1-05 ಗಂಟೆ ನಡುವಿನ ಶುಭ ಮುಹೂರ್ತದಲ್ಲಿ ಗೀತಾ ಅವರ ಕೊರಳಿಗೆ ಶಿವರಾಜ್‌ಕುಮಾರ್ ಮಾಂಗಲ್ಯಧಾರಣೆ ಮಾಡಿದ್ದರು.

publive-image

ಬೆಂಗಳೂರಿನ ಅರಮನೆಯಲ್ಲಿ ಅಂದು ಸಂಜೆ 6:30 ರಿಂದ ರಿಸೆಪ್ಷನ್​ ಸಡಗರ ಜೋರಾಗಿ ನಡೆದಿತ್ತು. ಶಿವರಾಜ್​ ಕುಮಾರ್ ಹಾಗೂ ಗೀತಾ ಅವರಿಗೆ ತಮಿಳು ಸಿನನಿಮಾದ ಸ್ಟಾರ್ ಕಮಲ್ ಹಾಸನ್, ಎಂಜಿಆರ್ ಸೇರಿದಂತೆ ಗಣ್ಯರು, ನಟ, ನಟಿಯರು, ರಾಜಕೀಯ ಗಣ್ಯರು, ಅಭಿಮಾನಿಗಳು ಆಗಮಿಸಿ ಹಾರೈಸಿದ್ದರು.

ಇದನ್ನೂ ಓದಿ:ಕೇವಲ 6 ವಾರ, 10 ಕೆಜಿ ತೂಕ ಇಳಿಸಿದ ಟೀಮ್ ಇಂಡಿಯಾದ ಯಂಗ್ ಪ್ಲೇಯರ್​.. ಎಲ್ಲರೂ ಶಾಕ್!

publive-image

39 ವರ್ಷದ ಹಿಂದೆ ಗೀತಾ ಶಿವರಾಜ್ ಕುಮಾರ್ ಅವರನ್ನ ವರನಟ ರಾಜ್ ಕುಮಾರ್ ಹಾಗೂ ಪಾರ್ವತಮ್ಮನವರು ಮೆಚ್ಚಿ ತಮ್ಮ ಮನೆಗೆ ಸೊಸೆಯಾಗಿ ಬಂದರೆ ಚೆನ್ನಾಗಿರುತ್ತದೆ ಎಂದು ಅಂದುಕೊಂಡಿದ್ದರು. ಅದರಂತೆ ತಂದೆ, ತಾಯಿ ನೋಡಿದ ಹುಡುಗಿಯನ್ನೇ ಶಿವರಾಜ್ ಕುಮಾರ್ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಂದು ಕೈ ಹಿಡಿದಿದ್ದರು.

ಇನ್ನು ಇನ್​ಸ್ಟಾದಲ್ಲಿ ಶಿವಣ್ಣ-ಗೀತಕ್ಕ ಅವರ ಪೋಟೋಗಳನ್ನು ಶೇರ್ ಮಾಡಿದ್ದು ರಾಮನಿಗಾಗಿ ಸೀತಾ, ಶಿವುಗಾಗಿ ಗೀತಾ ನಮ್ಮೆಲ್ಲರ ಪ್ರೀತಿಯ ಕನ್ನಡ ಚಿತ್ರರಂಗದ ಜನುಮದ ಜೋಡಿ, ಕನ್ನಡ ನಾಡಿನ ಆದರ್ಶ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಪ್ರೀತಿಯ ಶುಭಾಶಯಗಳು ಎಂದು ಕೋರಲಾಗುತ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment