newsfirstkannada.com

ಶಿವಂ ದುಬೆಯ ಅದೃಷ್ಟದ ದೇವತೆ ಇವರು.. ಈಕೆ ಬಂದ್ಮೇಲೆ ಟೀಂ ಇಂಡಿಯಾ ಆಟಗಾರನ ಪಾಲಿಗೆ ಮುಟ್ಟಿದ್ದೆಲ್ಲ ‘ಚಿನ್ನ’..!

Share :

Published January 19, 2024 at 1:42pm

  ಆಟವಷ್ಟೇ ಅಲ್ಲ, ದುಬೆ ಲವ್ ಸ್ಟೋರಿಯೂ ಹೆಡ್​​ಲೈನ್​​​​​

  ದುಬೆ ಲಕ್ ಬದಲಾಯಿಸಿದ ಆ 'ಲಕ್ಕಿ ಲೇಡಿ' ಯಾರು..?

  ಚೆಂದುಳ್ಳ ಚೆಲುವೆಯ ಸೌಂದರ್ಯಕ್ಕೆ ಕ್ಲೀನ್​ಬೋಲ್ಡ್​​​..!

ಶಿವಂ ದುಬೆ ರಗಡ್​ ಆಟದ ಮೂಲಕ ಟೀಮ್ ಇಂಡಿಯಾದಲ್ಲಿ ಕಿಚ್ಚು ಹಚ್ಚಿದ್ದಾರೆ. ಯಾರ ಬಾಯಲ್ಲಿ ಕೇಳಿದ್ರೂ ಬಿಗ್ ಹಿಟ್ಟರ್​ನದ್ದೇ ಗುಣಗಾನ. ದುಬೆ ಬೆಂಕಿ ಆಟ ನೋಡಿದವರು ಟಿ20 ವಿಶ್ವಕಪ್​ಗೆ ಆಯ್ಕೆ ಆಗ್ಬೇಕು ಅಂತಿದ್ದಾರೆ. ದುಬೆ ಈ ಮಟ್ಟಿಗೆ ಸದ್ದು ಮಾಡಲು ಕಾರಣ ಆ ಲಕ್ಕಿ ಲೇಡಿ. ಆ ನಾರಿಯ ಎಂಟ್ರಿ ಬಳಿಕ ದುಬೆ ಮುಟ್ಟಿದ್ದೆಲ್ಲವೂ ಚಿನ್ನವಾಗ್ತಿದೆ.

ಟೀಮ್ ಇಂಡಿಯಾದಲ್ಲಿ ಶಿವಂ ದುಬೆ ‘ಶಿವತಾಂಡವ’..!

ಶಿವಂ ದುಬೆ, ಶಿವಂ ದುಬೆ, ಶಿವಂ ದುಬೆ.. ವಾಟ್ಸಾಪ್​​​, ಫೇಸ್​​ಬುಕ್​ ಹಾಗೂ ಇನ್​ಸ್ಟಾಗ್ರಾಮ್​​​. ಸೋಷಿಯಲ್ ಮೀಡಿಯಾದಲ್ಲಿ 6 ಅಡಿ ಕಟೌಟ್​​​ ಶಿವಂ ದುಬೆ ಗುಣಗಾನ ನಡೀತಿದೆ. ಅಫ್ಘಾನಿಸ್ತಾನ ಎದುರಿನ ಟಿ20 ಸರಣಿಯಲ್ಲಿ ದುಬೆ ಶಿವತಾಂಡವ ರೂಪ ತಾಳಿದ್ದಾರೆ. ಬ್ಯಾಕ್​ ಟು ಬ್ಯಾಕ್​​​ ಅರ್ಧಶತಕ ಗಳಿಸಿ ಕೊನೆ ಘಳಿಗೆಯಲ್ಲಿ ಟಿ20 ವಿಶ್ವಕಪ್​ ರೇಸ್​ಗೆ ಸರ್​ಪ್ರೈಸ್ ರೀತಿಯಲ್ಲಿ ಎಂಟ್ರಿಕೊಟ್ಟಿದ್ದಾರೆ.

ದುಬೆ ಬ್ಯಾಟ್​ನಿಂದ ಸಿಡಿಯುವ ಬಿಗ್​​ ಸಿಕ್ಸರ್​ಗಳಿಗೆ ಕಿಂಗ್ ಕೊಹ್ಲಿ ಹಾಗೂ ಕ್ಯಾಪ್ಟನ್ ರೋಹಿತ್​​​​​​​ ಫಿದಾ ಆಗಿದ್ದಾರೆ. ಟೀಮ್ ಮ್ಯಾನೇಜ್​​​ಮೆಂಟ್​ ಕೂಡ ದುಬೆ ಡಿಸ್ಟ್ರಕ್ಟಿವ್​ ಇನ್ನಿಂಗ್ಸ್​ಗೆ​​ ಫಿದಾ ಆಗಿದೆ. ತಂಡಕ್ಕೆ ಕಮ್​ಬ್ಯಾಕ್ ಮಾಡಿದ ದುಬೆ ಕಂಪ್ಲೀಟ್ ಬದಲಾಗಿದ್ದಾರೆ. ಆ ಚೇಂಜಸ್​​ಗೆ ಕಾರಣ ಆ ಲಕ್ಕಿ ಲೇಡಿ. ಅಂದ ಹಾಗೇ ಆ ಅದೃಷ್ಟ ದೇವತೆ ಮತ್ಯಾರು ಅಲ್ಲ, ಅವರೇ ದುಬೆ ಪತ್ನಿ ಅಂಜುಮ್ ಖಾನ್​​​..

2021 ರಲ್ಲಿ ಅಂಜುಮ್ ಜೊತೆ ಸಪ್ತಪದಿ ತುಳಿದ ದುಬೆ

ಆಲ್​ರೌಂಡರ್ ಶಿವಂ ದುಬೆ 2021 ರಲ್ಲಿ ಗೆಳತಿ ಅಂಜುಮ್ ಖಾನ್​​ ಜೊತೆ ಸಪ್ತಪದಿ ತುಳಿದ್ರು. ವಯಸ್ಸಿನಲ್ಲಿ ದುಬೆಗಿಂತ ನಾಲ್ಕು ವರ್ಷ ದೊಡ್ಡವರಾಗಿರೋ ಅಂಜುಮ್​ ಬೇಸಿಕಲಿ ಮಾಡೆಲ್​ ಕಮ್​ ಆಕ್ಟರ್​​. ಅನೇಕ ಹಿಂದಿ ಸೀರಿಯಲ್​ಗಳಲ್ಲಿ ನಟಿಸಿದ್ದಾರೆ. ದುಬೆ ಈ ಮಿಲ್ಕಿ ಬ್ಯೂಟಿ ಕೈ ಹಿಡಿದಿದ್ದೇ ಬಂತು, ದುಬೆ ಕ್ರಿಕೆಟ್ ಲೈಫ್​​ ಕಂಪ್ಲೀಟ್​ ಚೇಂಜ್ ಆಯ್ತು.

2022, 2023 ರಲ್ಲಿ CSK ಪರ ಆರ್ಭಟ..ಭಾರತಕ್ಕೆ ಎಂಟ್ರಿ..!

ದುಬೆ, ಅಂಜುಮ್ ಖಾನ್​ರನ್ನ ವರಿಸಿದ ಮರುವರ್ಷವೇ ಬಂಪರ್​​ ಜಾಕ್​ಪಾಟ್​ ಹೊಡೀತು. ಸಿಎಸ್​​ಕೆ ತಂಡ ಆಕ್ಷನ್​​​​ನಲ್ಲಿ ಬರೋಬ್ಬರಿ 4 ಕೋಟಿ ರೂಪಾಯಿಗೆ ಆಲ್​ರೌಂಡರ್​ನನ್ನ ತೆಕ್ಕೆಗೆ ಹಾಕಿಕೊಳ್ತು. ಇದಕ್ಕೆ ದುಬೆ ನ್ಯಾಯ ಒದಗಿಸಿದ್ರು. 2022ರ ಐಪಿಎಲ್​​ ಆವೃತ್ತಿಯಲ್ಲಿ 289 ರನ್​​ ಬಾರಿಸಿದ್ರು. ಕಳೆದ ಸೀಸನ್​ನಲ್ಲಿ ಬೊಂಬಾಟ್​​​ ಆಟವಾಡಿದ ದುಬೆ 418 ರನ್​​ ಹೊಡೆದು ಸಿಎಸ್​ಕೆ ಟ್ರೋಫಿ ಗೆಲುವಿಗೆ ಕಾರಣರಾದ್ರು. ಐಪಿಎಲ್​​ನಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಮತ್ತೆ ಟೀಮ್ ಇಂಡಿಯಾ ಬಾಗಿಲು ತೆರೆಯಿತು. ಹಾರ್ದಿಕ್​ ಪಾಂಡ್ಯ ಅಲಭ್ಯತೆಯಲ್ಲಿ ಅಪ್ಘಾನ್ ಟಿ20 ಸರಣಿಗೆ ಆಯ್ಕೆಯಾದ್ರು. ಸಿಕ್ಕ ಚಾನ್ಸ್​ ಬಳಸಿಕೊಂಡ ದುಬೆ ಎರಡು ಬಿರುಸಿನ ಅರ್ಧಶತಕ ಸಿಡಿಸಿ ಸರಣಿ ಗೆಲುವಿನ ರೂವಾರಿಯಾದ್ರು.

ಚೆಂದುಳ್ಳ ಚೆಲುವೆಯ ಸೌಂದರ್ಯಕ್ಕೆ ಕ್ಲೀನ್​ ಬೋಲ್ಡ್​​​..!

ನಿರ್ಭಯವಾಗಿ ಸಿಕ್ಸರ್​​​-ಬೌಂಡ್ರಿ ಸಿಡಿಸೋ ದುಬೆ ಲವ್ ಪಿಚ್​​ನಲ್ಲಿ ಚೆಂದುಳ್ಳ ಚೆಲುವೆ ಅಂಜುಮ್ ಖಾನ್​​​ ರೂಪಕ್ಕೆ ಕ್ಲೀನ್​ ಬೋಲ್ಡ್ ಆಗಿದ್ರು. ಕೆಲವು ವರ್ಷ ಪ್ರೇಮ-ಪಕ್ಷಿಗಳಂತೆ ಹಾರಾಡಿದ್ದ ಯುವ ಜೋಡಿ 3 ವರ್ಷಗಳ ಹಿಂದೆ ಸಂಸಾರ ಜೀವನಕ್ಕೆ ಕಾಲಿರಿಸಿದ್ರು. ಆದರೆ ದುಬೆ ಅಂಜುಮ್​​​​ ರನ್ನ ವರಿಸಿದ್ದೆ ಬಲು ರೋಚಕ. ಯಾಕಂದ್ರೆ ಅಂಜುಮ್ ಖಾನ್​​ ಮುಸ್ಲಿಂ ಧರ್ಮದವರು. ದುಬೆ ಹಿಂದೂ ಧರ್ಮದವರು. ಅನ್ಯ ಧರ್ಮೀಯ ವಿವಾಹಕ್ಕೆ ಆರಂಭದಲ್ಲಿ ಎರಡು ಕುಟುಂಸ್ಥರು ವಿರೋಧರಿಸಿದ್ರು.

ದುಬೆ-ಅಂಜುಮ್​ ಒಂದಾಗಿ ಬಾಳಬೇಕೆಂದು ಹಠ ಹಿಡಿದರು. ಕೊನೆಗೆ ಎರಡು ಮನೆಯವರು ಮನಸ್ಸು ಬದಲಿಸಿ, ವಿವಾಹಕ್ಕೆ ಒಪ್ಪಿದ್ರು. ಧರ್ಮ ಬೇರೆ ಬೇರೆ ಆಗಿದ್ದರಿಂದ ಎರಡು ಬಾರಿ ವಿವಾಹವಾದ್ರು. 2021 ರಲ್ಲಿ ಹಿಂದೂ ಹಾಗೂ 2022 ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ಸಪ್ತಪದಿ ತುಳಿದ್ರು. ಧರ್ಮದ ಗಡಿಯನ್ನ ಮೀರಿ ಬಾಳ ಸಂಗಾತಿಗಳಾದ ಶಿವಂ ದುಬೆ ಹಾಗೂ ಅಂಜುಮ್ ಖಾನ್ ಅನೋನ್ಯತೆಯಿಂದ ಬದುಕುತ್ತಿದ್ದಾರೆ. ಮುಂದೆಯೂ ಹೀಗೆ ನಗುನಗುತ್ತಾ ಕೂಡಿ ಬಾಳಲಿ ಎಂದು ನಾವು ಆಶಿಸ್ತೀವಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಶಿವಂ ದುಬೆಯ ಅದೃಷ್ಟದ ದೇವತೆ ಇವರು.. ಈಕೆ ಬಂದ್ಮೇಲೆ ಟೀಂ ಇಂಡಿಯಾ ಆಟಗಾರನ ಪಾಲಿಗೆ ಮುಟ್ಟಿದ್ದೆಲ್ಲ ‘ಚಿನ್ನ’..!

https://newsfirstlive.com/wp-content/uploads/2024/01/DUBE-4.jpg

Load More