newsfirstkannada.com

ತುಂಡಾಗಿದ್ದ ಕೈಯನ್ನು ಜೋಡಿಸುವಲ್ಲಿ ಯಶಸ್ವಿಯಾದ ಶಿವಮೊಗ್ಗ ವೈದ್ಯರು; ಆಪರೇಷನ್‌ ನಡೆದಿದ್ದೇ ರೋಚಕ!

Share :

Published August 23, 2024 at 1:18pm

    ಮರ ಕತ್ತರಿಸುವ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ ಕಾರ್ಮಿಕನ ಕೈ

    ಕತ್ತರಿಸಿದ ಮುಂಗೈಯನ್ನು ಐಸ್ ಬಾಕ್ಸ್‌ನಲ್ಲಿ ಇಟ್ಟುಕೊಂಡು ಬಂದಿದ್ದ

    ತುಂಡಾಗಿದ್ದ ಕೈಯನ್ನ ಜೋಡಿಸುವ ಸಾಹಸಕ್ಕೆ ಮುಂದಾದ ವೈದ್ಯರ ತಂಡ

ಶಿವಮೊಗ್ಗ: ಮರ ಕತ್ತರಿಸುವ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ ಕಾರ್ಮಿಕನ ಕೈಯನ್ನು ಜೋಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸತತ 7 ಗಂಟೆಗಳ ಕಾಲ ಈ ಶಸ್ತ್ರ ಚಿಕಿತ್ಸೆ ನಡೆಿದಿದ್ದು, ಆಪರೇಷನ್ ಸಕ್ಸಸ್ ಆಗಿದೆ.

ಶಿಕಾರಿಪುರ ತಾಲೂಕಿನ ಸಾಮಿಲ್ ಒಂದರಲ್ಲಿ ಕೆಲಸ ಮಾಡುವಾಗ ಈ ಘಟನೆ ನಡೆದಿದೆ. ಸಂಪೂರ್ಣವಾಗಿ ಕತ್ತರಿಸಿದ ಮುಂಗೈಯನ್ನು ಕಾರ್ಮಿಕ ಐಸ್ ಬಾಕ್ಸ್‌ನಲ್ಲಿ ಇಟ್ಟುಕೊಂಡು ಆಸ್ಪತ್ರೆಗೆ ಬಂದಿದ್ದ.

ಇದನ್ನೂ ಓದಿ: ಹೆಂಗಿದ್ದರು.. ಹೆಂಗಾದರು ನೋಡಿ.. ಶಮಿ ತಲೆ ಕೂದಲಿನ ರಹಸ್ಯ ಇಲ್ಲಿದೆ..!

ತಕ್ಷಣವೇ ಕಾರ್ಯ ಪ್ರವೃತ್ತರಾಗಿದ್ದ ಆಸ್ಪತ್ರೆಯ ತಜ್ಞ ವೈದ್ಯರ ತಂಡ, ತುಂಡಾಗಿದ್ದ ಕೈಯನ್ನ ಜೋಡಿಸುವ ಸಾಹಸಕ್ಕೆ ಮುಂದಾಗಿದೆ. ಮುಂಗೈನ ಮಾಂಸ ಖಂಡ, ಮೂಳೆ ಹಾಗೂ ನರಗಳನ್ನು ಯಶಸ್ವಿಯಾಗಿ ಜೋಡಿಸುವಲ್ಲಿ ವ್ಯಾಸ್ಕ್ಯುಲರ್ ಸರ್ಜನ್ ಡಾ. ಚೇತನ್ ಹಾಗೂ ಮೂಳೆ ರೋಗ ತಜ್ಞ ಡಾ. ಮಂಜುನಾಥ್ ನೇತೃತ್ವದ ತಜ್ಞರ ತಂಡ ಯಶಸ್ವಿಯಾಗಿದೆ.

ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸತತ 7 ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಕಾರ್ಮಿಕನಿಗೆ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಕತ್ತರಿಸಿದ ಕೈ ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಕಾರ್ಮಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಂಡಾಗಿದ್ದ ಕೈಯನ್ನು ಜೋಡಿಸುವಲ್ಲಿ ಯಶಸ್ವಿಯಾದ ಶಿವಮೊಗ್ಗ ವೈದ್ಯರು; ಆಪರೇಷನ್‌ ನಡೆದಿದ್ದೇ ರೋಚಕ!

https://newsfirstlive.com/wp-content/uploads/2024/08/Shivamogga-Hand-Operation.jpg

Load More