/newsfirstlive-kannada/media/post_attachments/wp-content/uploads/2025/07/SMG-GANESH.jpg)
ಶಿವಮೊಗ್ಗ ನಗರದ ಹೊರವಲಯದ ರಾಗಿಗುಡ್ಡದಲ್ಲಿ ಅನ್ಯಕೋಮಿನ ವ್ಯಕ್ತಿಗಳು ಗಣಪತಿ ಮತ್ತು ನಾಗರ ಮೂರ್ತಿಗೆ ಕಾಲಿಂದ ಒದ್ದು ವಿಕೃತಿ ಮೆರೆದಿದ್ದಾರೆ. ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಕುಟುಂಬವೊಂದು ಪೂಜಿಸುತ್ತಿದ್ದ ಗಣಪತಿ ನಾಗರ ಮೂರ್ತಿಗೆ ಕಾಲಿನಿಂದ ಒದ್ದ ಕಿಡಿಗೇಗಳು ಮೂರ್ತಿಯನ್ನ ಚರಂಡಿಗೆ ಎಸೆದು ಹೋಗಿದ್ದಾರೆ.
ಸ್ಥಳಕ್ಕೆ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಭೇಟಿ ನೀಡಿದ್ರು. ಘಟನೆಯನ್ನು ತೀವ್ರವಾಗಿ ಖಂಡಿಸಿದ ಶಾಸಕ ಚನ್ನಬಸಪ್ಪ, ತಪ್ಪಿತಸ್ಥರನ್ನ ಬಂಧಿಸುವಂತೆ ಆಗ್ರಹಿಸಿದ್ರು. ಗ್ರಾಮಸ್ಥರು ಸಹ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ ಅಂತ ಪೊಲೀಸರ ಮುಂದೆ ಪಟ್ಟು ಹಿಡಿದ್ರು.
ಇದನ್ನೂ ಓದಿ: ಸೀರಿಯಲ್ನಲ್ಲಿ ಪೆದ್ದ ಹುಡುಗ.. ರಿಯಲ್ ಲೈಫ್ನಲ್ಲಿ ಸ್ಟೈಲಿಶ್ ಹೀರೋ; ಯಾರು ಈ ತೇಜಸ್ ಗೌಡ?
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಕೊಂಚ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.. ಈ ಬಗ್ಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜಗುಗಿಸಲಾಗುವುದು ಅಂತ ತಿಳಿಸಿದ್ರು. ಯಾರೂ ಊಹಪೋಹಗಳನ್ನ ಹಬ್ಬಿಸೋದು ಬೇಡ ಅಂತ ತಿಳಿಸಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ತ್ರಿಮೂರ್ತಿಗಳ ಅಮೋಘ ಆಟ.. ನಾಯಕ ಗಿಲ್ ಮತ್ತೊಮ್ಮೆ ಸೊಗಸಾದ ಸೆಂಚುರಿ..!
ಇಬ್ಬರು ವಶಕ್ಕೆ..
ದೇವರ ವಿಗ್ರಹಕ್ಕೆ ಒದ್ದು ವಿಕೃತಿ ಮೆರೆದ ಇಬ್ಬರು ಅನ್ಯಕೋಮಿನವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರ ಬಳಿ ಇದ್ದ ವಿಡಿಯೋವನ್ನ ಆಧರಿಸಿ ಇಬ್ಬರು ದುರುಳರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇಬ್ಬರನ್ನ ವಶಕ್ಕೆ ಪಡೆದಿರುವ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ