ಬೈಕ್​ಗೆ ಭೀಕರವಾಗಿ ಡಿಕ್ಕಿಯಾದ ಖಾಸಗಿ ಬಸ್.. ಜೀವ ಬಿಟ್ಟ ತಾಯಿ, 3 ವರ್ಷದ ಮಗು

author-image
Bheemappa
Updated On
ಬೈಕ್​ಗೆ ಭೀಕರವಾಗಿ ಡಿಕ್ಕಿಯಾದ ಖಾಸಗಿ ಬಸ್.. ಜೀವ ಬಿಟ್ಟ ತಾಯಿ, 3 ವರ್ಷದ ಮಗು
Advertisment
  • ಮಳೆಯಿಂದ ಆಶ್ರಯ ಪಡೆಯಲು ಹೋಗುವಾಗ ನಡೆದ ಘಟನೆ
  • ಖಾಸಗಿ ಬಸ್ ಹಾಗೂ ಸ್ಕೂಟರ್ ನಡುವೆ ಭಯಾನಕ ಅಪಘಾತ
  • ಪ್ರಾಣಾಪಾಯದಿಂದ ಪಾರಾದ ಮಹಿಳೆ ಗಂಡ, ಇನ್ನೊಂದು ಮಗು

ಶಿವಮೊಗ್ಗ: ಖಾಸಗಿ ಬಸ್ ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂರು ವರ್ಷದ ಮಗು ಹಾಗೂ ಮಗುವಿನ ತಾಯಿ ಜೀವ ಬಿಟ್ಟಿರುವ ಘಟನೆ ಜಿಲ್ಲೆಯ ಕೋಣೆ ಹೊಸೂರು- ತುಪ್ಪೂರು ಬಳಿ ನಡೆದಿದೆ.

ಅಪಘಾತದಲ್ಲಿ ಅಸ್ಮಾಭಾನು (30) ಹಾಗೂ 3 ವರ್ಷದ ಮಗು ಮೊಹ್ಮದ್ ಖಬೀರ್ ಸಾವು. ಘಟನೆಯಲ್ಲಿ ಮಹಿಳೆಯ ಗಂಡ ಖಲಂದರ್ ಪಾಶ ಹಾಗೂ ಇನ್ನೊಂದು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತರೀಕೆರೆಯ ಬುಕ್ಕಾಂಬುದಿಯಿಂದ ಸಾಗರಕ್ಕೆ ಇವರು ದ್ವಿಚಕ್ರ ವಾಹನದಲ್ಲಿ ತೆರಳುವಾಗ ಹಿಂಬದಿಯಿಂದ ಬಂದ ಖಾಸಗಿ ಬಸ್​ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಇದನ್ನೂ ಓದಿ: ಗುಜರಾತ್​ಗೆ ಸೋಲು, RCBಗೆ ಸುವರ್ಣಾವಕಾಶ; ಟಾಪ್​ ಸ್ಥಾನ ಬೇಕಂದ್ರೆ ಈ ಪಂದ್ಯಗಳು ಇಂಪಾರ್ಟೆಂಟ್​!

ಮಳೆ ಬರುತ್ತಿದ್ದರಿಂದ ಬೈಕ್ ಓಡಿಸುತ್ತಿದ್ದ ಖಲಂದರ್ ಪಾಶ ಬಲ ಭಾಗಕ್ಕೆ ಇದ್ದ ಬಸ್ ನಿಲ್ದಾಣದಲ್ಲಿ ನಿಲ್ಲಲು ತೆರಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಹಿಂಬದಿಯಲ್ಲಿದ್ದ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲೇ ಮೂರು ವರ್ಷದ ಮಗು ಮೊಹ್ಮದ್ ಖಬೀರ್ ಸಾವನ್ನಪ್ಪಿದೆ. ಈ ವೇಳೆ ಮಗುವಿನ ತಾಯಿ, ತಂದೆ ಹಾಗೂ ಇನ್ನೊಂದು 6 ವರ್ಷದ ಮಗುವಿಗೆ ಗಂಭೀರವಾದ ಗಾಯಗಳು ಆಗಿದ್ದವು.

ತಕ್ಷಣ ಗಾಯಾಳುಗಳನ್ನು ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಆದರೆ ಮಾರ್ಗಮಧ್ಯೆಯೇ ತಾಯಿ ಅಸ್ಮಭಾನು ನಿಧನರಾದರು. ಮಗು ಮತ್ತು ತಂದೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ. ಇನ್ನು ದ್ವಿಚಕ್ರ ವಾಹನದಲ್ಲಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment