/newsfirstlive-kannada/media/post_attachments/wp-content/uploads/2025/05/Shivanand-patil-1.jpg)
ಬೆಂಗಳೂರು: ಬಸವನಬಾಗೇವಾಡಿ ಕಾಂಗ್ರೆಸ್​ ಶಾಸಕ ಶಿವಾನಂದ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಸ್ಪೀಕರ್ ಯುಟಿ ಖಾದರ್​ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ, ಪ್ರಿಯಕರನ ಸಾಯಿಸಿ ಠಾಣೆಗೆ ಬಂದ ಪತಿ..
ಶಿವಾನಂದ್ ಪಾಟೀಲ್ ಅವರಪ್ಪನಿಗೆ ಹುಟ್ಟಿದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸವಾಲು ಹಾಕಿದ್ದರು ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಸ್ಪೀಕರ್​ಗೆ ರಾಜೀನಾಮೆ ನೀಡಿ ಮಾಧ್ಯಮದ ಎದುರು ಮಾತನಾಡಿರುವ ಪಾಟೀಲ್, ಯತ್ನಾಳ್ ಅವರು ಮೊಹ್ಮದ್ ಪೈಗಂಬರ್ ಕುರಿತು ನೀಡಿದ ಹೇಳಿಕೆಯನ್ನು ಖಂಡಿಸಿ ವಿಜಯಪುರದಲ್ಲಿ ಮುಸ್ಲಿಮ್ ಸಮುದಾಯದವರು ಕಳೆದ 30 ರಂದು ಕಾರ್ಯಕ್ರಮ ಇಟ್ಕೊಂಡಿದ್ದರು. ಅದಕ್ಕೆ ನನ್ನನ್ನೂ ಕರೆದಿದ್ದರು. ಈ ವೇಳೆ ಎಲ್ಲರೂ ಅವರ ಹೇಳಿಕೆಯನ್ನು ಖಂಡಿಸಿದಂತೆ ನಾನೂ ಖಂಡಿಸಿದ್ದೆ. ಅದರಲ್ಲಿ ಬೇರೆ ಯಾವುದೇ ವಿಚಾರ ಮಾತನ್ನಾಡಿರಲಿಲ್ಲ.
ಅದೇ ಸಂದರ್ಭದಲ್ಲಿ ನಮ್ಮ ವಿಜಯಪುರ ಕಾಂಗ್ರೆಸ್ ಅಭ್ಯರ್ಥಿಗೆ ಹೇಳಿದ್ದೆ. ಚುನಾವಣೆಯಲ್ಲಿ ಗೆದ್ದು ತೋರಿಸಿ, ನಿಮ್ಮ ಹತ್ತಿರ ಆಗದಿದ್ದರೆ ನಾನು ಇಲ್ಲಿಗೆ ಬಂದು ನಿಲ್ಲುತ್ತೇನೆ ಎಂದಿದ್ದೆ. ಅದು ಬಿಟ್ಟರೆ ಏನೂ ಹೇಳಿಲ್ಲ. ಆದರೆ, ಯತ್ನಾಳ್ ಅವರು ನನ್ನನ್ನು ನಿಂದಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಗಮನಿಸಿದೆ. ನನಗೆ ತುಂಬಾ ನೋವು ಆಯಿತು. ನನ್ನ ಕುಟುಂಬದ ಬಗ್ಗೆ, ನನ್ನ ಬಗ್ಗೆ ಮಾತನ್ನಾಡಿದ್ದರೆ ಏನೂ ಆಗುತ್ತಿರಲಿಲ್ಲ.'
ಇದನ್ನೂ ಓದಿ: SSLC ಪರೀಕ್ಷೆ-1 ಫಲಿತಾಂಶ: ಸರ್ಕಾರಿ ಶಾಲೆ ಶಿಕ್ಷಕರ ಮಕ್ಕಳು 625 ಕ್ಕೆ 625 ಅಂಕ!
ನನ್ನ ಕುರಿತ ಹಳೆಯ ಘಟನೆಯೊಂದನ್ನು ಯತ್ನಾಳ್ ಮೆಲುಕು ಹಾಕಿ ಮಾತನ್ನಾಡಿದ್ದಾರೆ. ನಮ್ಮ ಪೂರ್ವಜನರು ಅಡ್ಡ ಹೆಸರು ಯಾಕೆ ಇಟ್ಟುಕೊಂಡಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ತಂದೆಯವರು ಪಾಟೀಲರಾಗಿದ್ದರು. ನಾನು ಹುಟ್ಟುವಾಗಲೇ ಅವರು ಪಾಟೀಲರಾಗಿದ್ದರು. ಅವರು ಹೇಗೆ ಪಾಟೀಲರು ಆದರು ಅನ್ನೋದ್ರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಯತ್ನಾಳ್ ಹಚಡ ಅನ್ನೋ ವಿಚಾರವನ್ನು ಎಳೆದು ತಂದಿದ್ದಾರೆ. ಇದರಿಂದ ನನಗೆ ನೋವು ಆಯಿತು.
ನನ್ನನ್ನು ಈ ರೀತಿಯಾಗಿ ಯತ್ನಾಳ್ ನಿಂದಿಸಿದ್ದಾರೆ. ಹಾಗೆ ನೋಡೋದಾದರೆ ನಮ್ಮ ತಂದೆಯವರು, ಯತ್ನಾಳ್ ತಂದೆಯವರು ತುಂಬಾನೇ ಆತ್ಮೀಯರು. ಬ್ಯುಸಿನೆಸ್ ಪಾರ್ಟ್ನರ್ ಕೂಡ ಹೌದು. ಆದರೆ ಅವರು ನನಗೆ ಮಾಡಿರುವ ವೈಯಕ್ತಿಕ ತೇಜೋವಧೆಯನ್ನು ಖಂಡಿಸುತ್ತೇನೆ. ಅಲ್ಲದೇ ಅವರು ನನಗೆ ರಾಜಕೀಯವಾಗಿ ಸವಾಲು ಹಾಕಿದ್ದಾರೆ. ನೀವು ಗಂಡಸರೇ ಆಗಿದ್ದರೆ ಸ್ಪೀಕರ್​​ಗೆ ರಾಜೀನಾಮೆ ನೀಡಿ, ನನ್ನ ವಿರುದ್ಧ ಚುನಾವಣೆಗೆ ನಿಲ್ಲಿ ಎಂದಿದ್ದಾರೆ. ಅವರ ಸಾವಲನ್ನು ನಾನು ಸ್ವೀಕಾರ ಮಾಡಿದ್ದೇನೆ.
ಯತ್ನಾಳ್​ಗೆ ನಾನು ಈಗ ಕೇಳಿಕೊಳ್ತೇನೆ. ನಿಮ್ಮ ಮಾತಿನಂತೆ ಸ್ಪೀಕರ್​ಗೆ ರಾಜೀನಾಮೆ ನೀಡಿ. ನಂತರ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅನ್ನೋದನ್ನು ತಿಳಿಸಿ. ಬಸವನಬಾಗೇವಾಡಿಗೆ ಬಂದು ನಿಲ್ಲುತ್ತೀರೋ? ಅಥವಾ ವಿಜಯಪುರದಲ್ಲಿ ನಿಲ್ಲುತ್ತೀರೋ ಎಂದು ನಿರ್ಧರಿಸಿ. ನಿಮ್ಮ ಸವಾಲನ್ನು ನಾನು ಸ್ವೀಕರಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಕಮ್ಮಿ ಬೆಲೆಗೆ Oppo ಹೊಸ ಸ್ಮಾರ್ಟ್​​ಫೋನ್.. ಫೀಚರ್ಸ್ ಮಾತ್ರ ಅದ್ಭುತ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ