/newsfirstlive-kannada/media/post_attachments/wp-content/uploads/2025/06/shivani11.jpg)
ಕನ್ನಡ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 19ರಲ್ಲಿ ರನ್ನರ್ ಅಪ್ ಆಗಿದ್ದ ಶಿವಾನಿ ಅವರು ಈಗ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಜೀ ತಮಿಳಿನ ಸರಿಗಮಪ ಸೀಸನ್ 5ರಲ್ಲಿ ಅವಕಾಶ ಪಡೆದಿದ್ದಾರೆ. ಆಡಿಷನ್ನಲ್ಲೇ ತಮ್ಮ ಸುಮಧುರ ಕಂಠದಿಂದ ಎಲ್ಲರ ಮನಸ್ಸು ಗೆದ್ದುಕೊಂಡಿದ್ದಾರೆ ಶಿವಾನಿ.
ಇದನ್ನೂ ಓದಿ: ಇಂದಿನಿಂದ 4 ದಿನ ರಾಜ್ಯದಲ್ಲಿ ಭಾರೀ ಮಳೆ.. ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್!
ಇದೀಗ ವೇದಿಕೆ ಮೇಲೆ ಭರ್ಜರಿಯಾಗಿ ಹಾಡಿದ ಶಿವಾನಿಗೆ ಸರ್ಪ್ರೈಸ್ ನೀಡಲಾಗಿದೆ. ಹೌದು, ಈ ಹಿಂದೆ ಆಡಿಷನ್ನಲ್ಲಿ ಸೋಜುಗದ ಸೂಜು ಮಲ್ಲಿಗೆ ಹಾಡನ್ನು ಶಿವಾನಿ ಹಾಡಿದ್ದರು. ಇದೇ ಹಾಡು ಕೇಳುತ್ತಿದ್ದಂತೆ ಇಡೀ ವೇದಿಕೆ ಎದ್ದು ನಿಂತು ಜೋರಾಗಿ ಚಪ್ಪಾಳೆ ತಟ್ಟಿದ್ದರು. ಅಷ್ಟೇ ಅಲ್ಲದೇ ಈ ಕಾರ್ಯಕ್ರಮ ವೀಕ್ಷಿಸಿದವರು ಕೂಡ ಶಿವಾನಿ ಹಾಡು ಕೇಳಿ ವಾವ್ ವಾವ್ ಅಂತ ಹೊಗಳಿದ್ದರು.
ಇದೀಗ ಶಿವಾನಿ ಕಂಠಕ್ಕೆ ದಕ್ಷಿಣ ಭಾರತದ ಖ್ಯಾತ ನಟಿ ಸ್ನೇಹಾ ಪ್ರಸನ್ನ ಅವರು ಫಿದಾ ಆಗಿದ್ದಾರೆ. ತಮಿಳು, ತೆಲಗು, ಮಲಯಾಳಂ ಮತ್ತು ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರೋ ನಟಿ ಸ್ನೇಹಾ ಪ್ರಸನ್ನ ಅವರು ಶಿವಾನಿ ಹಾಡಿದ ಸೋಜುಗದ ಸೂಜು ಮಲ್ಲಿಗೆ ಹಾಡನ್ನು ಕೇಳಿ ಫಿದಾ ಆಗಿದ್ದಾರೆ.
View this post on Instagram
ಈ ಬಗ್ಗೆ ಖುದ್ದು ನಟಿ ಸ್ನೇಹಾ ಪ್ರಸನ್ನ ಅವರೇ ಶಿವಾನಿ ಕಂಠದ ಬಗ್ಗೆ ಮಾತಾಡಿದ್ದಾರೆ. ವೇದಿಕೆ ಮೇಲೆ ನಟಿ ಸ್ನೇಹಾ ಪ್ರಸನ್ನ ಅವರ ವಿಟಿ ಹಾಕಲಾಗಿತ್ತು. ಅದರಲ್ಲಿ, ಹಾಯ್ ಶಿವಾನಿ, ನಿನ್ನ ವಾಯ್ಸ್ ಎಷ್ಟು ಅದ್ಭುತವಾಗಿದೆ. ಗಾಡ್ ಬೈಸ್ ಯು ಡಾರ್ಲಿಂಗ್. ಮೊನ್ನೆ ನೀನು ಹಾಡಿದ ಸೋಜುಗದ ಸೂಜು ಮಲ್ಲಿಗೆ ನನ್ನ ಫೇವರೆಟ್ ಸಾಂಗ್. ಆದ್ರೆ ನೀನು ಹಾಡಿದ ಸಾಂಗ್ ನನ್ನ ಮನಸ್ಸಿಗೆ ತುಂಬಾ ಟಚ್ ಮಾಡಿದೆ. ಈ ಶೋನಲ್ಲಿ ನೀನು ಫೈನಲ್ವರೆಗೂ ಹೋದರೆ ನಾನು ಖಂಡಿತವಾಗಿ ಬರ್ತಿನಿ. ನನಗೆ ಒಂದು ಆಸೆ ಇದೆ. ಈ ಸಾಂಗ್ ನನಗಾಗಿ ಫುಲ್ ಹಾಡಬೇಕು. ನಿನಗಾಗಿ ಒಂದು ಗಿಫ್ಟ್ ಕಾದಿದೆ. ಅದು ನಿನಗೆ ಇಷ್ಟ ಆಗುತ್ತೆ ಅಂತ ಅಂದುಕೊಳ್ಳುತ್ತೇನೆ ಅಲ್ ದಿ ಬೆಸ್ಟ್ ಅಂತ ವಿಶ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ