/newsfirstlive-kannada/media/post_attachments/wp-content/uploads/2025/06/shivani8.jpg)
ಕನ್ನಡ ಸರಿಗಮಪ ಸೀಸನ್ 21 ಅದ್ಧೂರಿಯಾಗಿ ಅಂತ್ಯ ಕಂಡಿದೆ. ನಾಡಿನ ನಾನಾ ಭಾಗದ ಗಾನ ಕೋಗಿಲೆಗಳು ವೇದಿಕೆಗಾಗಿ ಹಂಬಲಿಸುತ್ತಾ ಅವಕಾಶ ಅರಸಿ ಬಂದವರು. ಅದರಲ್ಲಿ ಈ ಬಾರಿಯ ಸರಿಗಮಪ ಸೀಸನ್ 21ರ ವಿನ್ನರ್ ಪಟ್ಟ ಬೀದರ್ನ ಶಿವಾನಿ ಸ್ವಾಮಿಗೆ ಸಿಕ್ಕಿದೆ.
ಇದನ್ನೂ ಓದಿ:ಸರಿಗಮಪ ಸಿಂಗರ್ ಪೃಥ್ವಿ ಭಟ್ ಅದ್ಧೂರಿ ರಿಸೆಪ್ಷನ್; ಯಾರೆಲ್ಲಾ ಬಂದಿದ್ರು?
ಹೌದು, ಮೊದಲ ದಿನದಿಂದ ಕೊನೆಯವರೆಗೂ ಶಿವಾನಿ ಅವರು ಅದ್ಭುತವಾಗಿ ಹಾಡಿದ್ದರು. ಅಷ್ಟೇ ಅಲ್ಲದೇ ಬೀದರ್ ಪ್ರತಿಭೆ ಶಿವಾನಿ ಶಿವದಾಸ್ ಅವರು ಹಾಡಿದ ಶಿವ ಶಿವಾ ಗಾಯನಕ್ಕೆ ಇಡೀ ಜನತೆ ತಲೆದೂಗಿದ್ದರು. ಈ ಹಿಂದೆ ಶಿವಾನಿ ಶಿವದಾಸ್ ಹಿಂದಿ ಐಡಿಯಲ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಫೇಮಸ್ ಆಗಿದ್ದರು. ಸರ್ಪ್ರೈಸ್ ಎಂಬಂತೆ ‘ಟಿಕೆಟ್ ಟು ಫಿನಾಲೆ’ ಮೊದಲ ಪಾಸ್ ಅನ್ನು ಶಿವಾನಿ ಅವರೇ ತೆಗೆದುಕೊಂಡು ಫಿನಾಲೆಗೆ ಎಂಟ್ರಿ ಕೊಟ್ಟಿದ್ದರು.
ಇದೀಗ ಸೀಸನ್ 21ರ ಸರಿಗಮಪ ಟ್ರೋಫಿಯನ್ನು ದಕ್ಕಿಸಿಕೊಂಡಿದ್ದಾರೆ. ಟಿವಿಗಿಂತ ಮೊದಲು ಜೀ5 ಒಟಿಟಿಯಲ್ಲಿ ಜೂನ್ 5ರಂದು ಎಪಿಸೋಡ್ ಪ್ರಸಾರ ಕಂಡಿದೆ. ಜೀ ಕನ್ನಡದಲ್ಲಿ ಜೂನ್ 7ರಂದು ಎಪಿಸೋಡ್ ಪ್ರಸಾರ ಕಾಣಲಿದೆ. ಇನ್ನು, ಆರಾಧ್ಯಾ ರಾವ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಮೈಸೂರಿನ ರಶ್ಮಿ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಟಾಪ್ ಮೂರರಲ್ಲಿ ಮಹಿಳಾ ಸ್ಪರ್ಧಿಗಳೇ ಆಯ್ಕೆಯಾಗಿದ್ದು ವಿಶೇಷವಾಗಿತ್ತು.
ಈ ಹಿಂದೆ ಫಿನಾಲೆಗೆ ಶಿವಾನಿ, ರಶ್ಮಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಕಾಲಿಟ್ಟಿದ್ದರು. ಈ ಆರು ಮಂದಿಯಲ್ಲಿ ಶಿವಾನಿ ಅವರಿಗೆ ವಿನ್ನರ್ ಪಟ್ಟ ಸಿಕ್ಕಿದೆ. ಹೀಗಾಗಿ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ