/newsfirstlive-kannada/media/post_attachments/wp-content/uploads/2025/05/shivani1.jpg)
ವೀಕ್ಷಕರ ನೆಚ್ಚಿನ ಶೋ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಇಷ್ಟು ದಿನ ತಮ್ಮ ಹಾಡುಗ ಮೂಲಕವೇ ವೀಕ್ಷಕರ ಮನಸ್ಸಿಗೆ ಮುದ ನೀಡುತ್ತಿದ್ದ ಗಾಯಕರಿಗೆ ಅಗ್ನಿ ಪರೀಕ್ಷೆ ಶುರುವಾಗಿದೆ. ಹೌದು, ಸರಿಗಮಪ ವೇದಿಕೆಯಲ್ಲಿ ಪ್ರತಿಭೆಗಳ ಮಹಾ ಅನ್ವೇಷಣೆ ನಡೀತಿದೆ. ನಾಡಿನ ನಾನಾ ಭಾಗದ ಗಾನ ಕೋಗಿಲೆಗಳು ವೇದಿಕೆಗಾಗಿ ಹಂಬಲಿಸುತ್ತಾ ಅವಕಾಶ ಅರಸಿ ಬಂದವರು ಫಿನಾಲೆ ಹಂತಕ್ಕೆ ತಲುಪಿದ್ದಾರೆ.
ಇದನ್ನೂ ಓದಿ: ಅಪ್ಪನಾಗೋ ಖುಷಿಯಲ್ಲಿರೋ ವಾಸುಕಿ ವೈಭವ್ಗೆ ಕ್ಯೂಟ್ ಸರ್ಪ್ರೈಸ್ ಕೊಟ್ಟ ಅರುಣ್ ಸಾಗರ್ ದಂಪತಿ
ಸರಿಗಮಪ ರಿಯಾಲಿಟಿ ಶೋ ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗುತ್ತಿದೆ. ಅದರ ಜೊತೆಗೆ ಸ್ಪರ್ಧಿಗಳ ನಡುವಿನ ಕಠಿಣ ಪೈಪೋಟಿ ನಡೆಯುತ್ತಿದೆ. ಈ ವಾರ ನಡೆಯಲಿರುವ ‘ಟಿಕೆಟ್ ಟು ಫಿನಾಲೆ’ಯಲ್ಲಿ 13 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಬಾಳು ಬೆಳಗುಂದಿ, ದ್ಯಾಮೇಶ, ಭೂಮಿಕಾ, ಲಹರಿ, ಕಾರ್ತಿಕ್, ಮನೋಜ್, ರಶ್ಮಿ ಡಿ, ಅಮೋಘ ವರ್ಷ, ಸುಧೀಕ್ಷಾ, ಆಗಮ ಶಾಸ್ತ್ರೀ, ದೀಪಕ್, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ಶುರುವಾಗಿದೆ.
ಈಗಾಗಲೇ 13 ಸ್ಪರ್ಧಿಗಳಲ್ಲಿ ಒಬ್ಬರಿಗೆ ಲಕ್ಕಿ ಎಂಬಂತೆ ಫಿನಾಲೆಗೆ ಟಿಕೆಟ್ ಸಿಕ್ಕಾಗಿದೆ. ಅಷ್ಟೇ ಅಲ್ಲದೇ, ಈ ವಾರ ನಡೆಯಲಿರುವ ಟಿಕೆಟ್ ಟು ಫಿನಾಲೆ ಸಂಚಿಕೆಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಶರಣ್ ಮತ್ತು ನಟಿ ಅದಿತಿ ಪ್ರಭುದೇವ ಅವರು ಆಗಮಿಸಿದ್ದಾರೆ. ಅದರಲ್ಲಿ ಖ್ಯಾತ ನಟ ಶರಣ್ ಅವರಿಂದ ಆ ಲಕ್ಕಿ ಸ್ಪರ್ಧಿಗೆ ಫಿನಾಲೆ ಟಿಕೆಟ್ ನೀಡಿದ್ದಾರೆ. 'ಟಿಕೆಟ್ ಟು ಫಿನಾಲೆ' ಪಾಸ್ ಪಡೆದ ಲಕ್ಕಿ ಸ್ಪರ್ಧಿ ಬೇರೆ ಯಾರು ಅಲ್ಲ. ಅವರೇ ಬೀದರ್ನ ಶಿವಾನಿ.
ಹೌದು, ಬೀದರ್ ಪ್ರತಿಭೆ ಶಿವಾನಿ ಶಿವದಾಸ್ ಅವರು ಹಾಡಿದ ಶಿವ ಶಿವಾ ಗಾಯನಕ್ಕೆ ಇಡೀ ಜನತೆ ತಲೆದೂಗಿದ್ದರು. ಈ ಹಿಂದೆ ಶಿವಾನಿ ಶಿವದಾಸ್ ಹಿಂದಿ ಐಡಿಯಲ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೂ ಕೂಡ ಫೇಮಸ್ ಆಗಿದ್ದರು. ಇದೀಗ ಸರ್ಪ್ರೈಸ್ ಎಂಬಂತೆ 'ಟಿಕೆಟ್ ಟು ಫಿನಾಲೆ' ಪಾಸ್ ತೆಗೆದುಕೊಂಡು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ