/newsfirstlive-kannada/media/post_attachments/wp-content/uploads/2025/05/madenuru-manu.jpg)
ಬೆಂಗಳೂರು: ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಪ್ರಕರಣದಲ್ಲಿ ನಟ ಮಡೆನೂರು ಮನು ಬಂಧನದಲ್ಲಿದ್ದಾರೆ. ಗಂಭೀರ ಆರೋಪ, ಪೊಲೀಸ್ ವಿಚಾರಣೆಯ ಮಧ್ಯೆ ಮಡೆನೂರು ಮನು ಅವರನ್ನ ಕನ್ನಡ ಕಿರುತರೆ ಹಾಗೂ ಸ್ಯಾಂಡಲ್‌ವುಡ್‌ನಿಂದಲೇ ಬ್ಯಾನ್ ಮಾಡುವ ಆಗ್ರಹ ಕೇಳಿ ಬಂದಿದೆ.
ಮಡೆನೂರು ಮನು ಬಂಧನದ ಬಳಿಕ ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2023/09/Darshan-Shivanna.jpg)
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಡೆನೂರು ಮನು ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಲಾಗುತ್ತಿದೆ. ಇದೇ ಬುಧವಾರ ಫಿಲಂ ಚೇಂಬರ್‌ಗೆ ದೂರು ನೀಡಿ ಮಡೆನೂರು ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡ್ಬೇಕು ಅಂತ ಪ್ರತಿಭಟನೆ ನಡೆಸಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/05/manu.jpg)
ಮಡೆನೂರು ಮನು ಬ್ಯಾನ್ ಆಗ್ತಾರಾ?
ಮಡೆನೂರು ಮನು ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಒತ್ತಾಯ ಮಾಡಿದೆ. ಡಾ. ರಾಜ್ ಕುಮಾರ್ ಅಭಿಮಾನಿ ಸಂಘದ ಗೌರವ ಅಧ್ಯಕ್ಷ ಎನ್.ಆರ್ ರಮೇಶ್ ಅವರು ಮಡೆನೂರು ಮನು ಫಿಲಂ ಚೇಂಬರ್‌ಗೆ ದೂರು ನೀಡಿ, ಬ್ಯಾನ್ ಮಾಡಲು ಆಗ್ರಹಿಸಿ ಪ್ರತಿಭಟನೆಗೂ ಕರೆ ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ‘ಮಚ್ಚಾ ನೀನು ಬೆಳಿಬೇಕು ಅಂತ್ಹೇಳಿ ಹೀಗ್ಯಾಕೆ ಮಾಡಿದ್ರು’.. ಮಡೆನೂರು ಮನು ಪತ್ನಿ ಕಿಡಿ; ಹೇಳಿದ್ದೇನು?
ಡಾ.ರಾಜ್ ಕುಮಾರ್ ಅಭಿಮಾನಿ ಸಂಘದ ಗೌರವ ಅಧ್ಯಕ್ಷ ಎನ್.ಆರ್ ರಮೇಶ್ ಅವರು ಮಡೆನೂರು ಮನು ಅವರನ್ನು ಬ್ಯಾನ್ ಮಾಡಲು ನಿರ್ಮಾಪಕ ಸಂಘ, ಕಿರುತೆರೆಯಿಂದಲೂ ಬ್ಯಾನ್ ಮಾಡುವಂತೆ ಕಲರ್ಸ್ ಕನ್ನಡ, ಜೀ ಕನ್ನಡ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us