ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ.. ಅಮೆರಿಕಾದಲ್ಲಿ ಈಗ ಬಿಂದಾಸ್ ವಾಕ್; ಫೋಟೋ ಬಿಡುಗಡೆ!

author-image
admin
Updated On
ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ.. ಅಮೆರಿಕಾದಲ್ಲಿ ಈಗ ಬಿಂದಾಸ್ ವಾಕ್; ಫೋಟೋ ಬಿಡುಗಡೆ!
Advertisment
  • ಅಮೆರಿಕಾದಲ್ಲಿರುವ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ
  • ಕ್ಯಾನ್ಸರ್ ಫ್ರೀ ಆದ ಬಳಿಕ ಮನೆಯಿಂದ ಹೊರಗೆ ಬಂದ ಶಿವಣ್ಣ ಕುಟುಂಬ
  • ಕರುನಾಡಿಗೆ ವಾಪಸ್ ಆಗಲು ತಯಾರಿ ನಡೆಸಿರುವ ಹ್ಯಾಟ್ರಿಕ್ ಹೀರೋ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಕ್ಯಾನ್ಸರ್ ಫ್ರೀ ಆಗಿರುವ ಶಿವಣ್ಣ ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು. ಇದೀಗ ಕರುನಾಡ ಚಕ್ರವರ್ತಿ ಮನೆಯಿಂದ ಹೊರಗೆ ಬಂದು ರಿಲ್ಯಾಕ್ಸ್ ಆಗುತ್ತಿದ್ದಾರೆ.

ಅಮೆರಿಕಾದಲ್ಲಿ ಟ್ರೀಟ್‌ಮೆಂಟ್ ಪಡೆದಿರುವ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿದೆ. ಕ್ಯಾನ್ಸರ್ ಫ್ರೀ ಆದ ಬಳಿಕ ಶಿವಣ್ಣ ಇದೇ ಮೊದಲ ಬಾರಿಗೆ ಮನೆಯಿಂದ ಹೊರಗೆ ಬಂದು ಕುಟುಂಬದವರ ಜೊತೆ ಓಡಾಡುತ್ತಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ಗೆದ್ದ ಶಿವಣ್ಣ.. ಅಮೆರಿಕದಿಂದಲೇ I will back ಎಂದ ಸೆಂಚುರಿ ಸ್ಟಾರ್​ 

ಶಸ್ತ್ರ ಚಿಕಿತ್ಸೆ ಬಳಿಕ ಶಿವಣ್ಣ ಕುಟುಂಬ ಮನೆಯಿಂದ ಹೊರಗೆ ಬಂದಿರುವ ಫೋಟೋ ಲಭ್ಯವಾಗಿದೆ. ಅಮೆರಿಕಾದಲ್ಲಿ ಶಾಪಿಂಗ್‌ ಮಾಡಲು ಹೊರಗೆ ಬಂದಿರುವ ಶಿವಣ್ಣ ಆರಾಮಾಗಿ ವಾಕ್ ಮಾಡುತ್ತಿದ್ದಾರೆ. ಇದೇ ಜನವರಿ 26ರಂದು ಶಿವಣ್ಣ ಕುಟುಂಬ ಬೆಂಗಳೂರಿಗೆ ವಾಪಸ್ ಆಗಲಿದೆ.

publive-image

ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕ್ಯಾನ್ಸರ್​ಗೆ ಸರ್ಜರಿ ಮಾಡಿಸಿಕೊಂಡಿರುವ ಶಿವರಾಜ್​ ಕುಮಾರ್ ಅವರು ಫುಲ್ ಹ್ಯಾಪಿಯಾಗಿದ್ದಾರೆ. ಆಪರೇಷನ್ ಬಳಿಕ ವಿಡಿಯೋ ಮಾಡಿದ್ದ ಶಿವಣ್ಣ, ಸದ್ಯ ಈಗ ಆರೋಗ್ಯವಾಗಿದ್ದೇನೆ. ವೈದ್ಯರು ಮೊದಲು ಒಂದು ತಿಂಗಳು ನಿಧಾನವಾಗಿ ಇರಬೇಕು ಎಂದು ಹೇಳಿದ್ದಾರೆ. ಆ ಮೇಲೆ ಬೇಕಾದರೆ ನೀವು ಮೊದಲಿನಂತೆ ಏನು ಬೇಕಾದರೂ ಮಾಡಿ ಎಂದಿದ್ದಾರೆ. ಐ ವಿಲ್​ ಬಿ ಬ್ಯಾಕ್. ಶಿವಣ್ಣ ಆವಾಗ ಹೇಗಿದ್ದನೋ ಈಗ ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತೆ. ಡ್ಯಾನ್ಸ್​, ಫೈಟ್, ಲುಕ್​ ಎಲ್ಲದರಲ್ಲೂ ಇರುತ್ತೆ. ಮತ್ತೆ ನೀವು ನೋಡುತ್ತೀರಾ. ನಿಮ್ಮ ಪ್ರೀತಿ ವಿಶ್ವಾಸ ಯಾವಾತ್ತೂ ಮರೆಯಲ್ಲ, ನಿಮ್ಮ ಆಶೀರ್ವಾದ ಇರುವವರೆಗೂ ನಾನು ಖಂಡಿತಾ ಇದ್ದೆ ಇರುತ್ತೇನೆ ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment