Advertisment

ಅಮೆರಿಕದ ಕಡಲ ಕಿನಾರೆಯಲ್ಲಿ ಶಿವಣ್ಣ; ಫ್ಯಾನ್ಸ್ ಖುಷಿ ಪಡುವ 5 ಫೋಟೋ ಹಂಚಿಕೊಂಡ ಗೀತಕ್ಕ

author-image
Ganesh
Updated On
ಅಮೆರಿಕದ ಕಡಲ ಕಿನಾರೆಯಲ್ಲಿ ಶಿವಣ್ಣ; ಫ್ಯಾನ್ಸ್ ಖುಷಿ ಪಡುವ 5 ಫೋಟೋ ಹಂಚಿಕೊಂಡ ಗೀತಕ್ಕ
Advertisment
  • ಶಿವಣ್ಣಗೆ ಸರ್ಜರಿ ಆಗಿದ್ದು, ಆರೋಗ್ಯದಲ್ಲಿ ಚೇತರಿಕೆ
  • ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹ್ಯಾಟ್ರಿಕ್ ಹೀರೋ
  • ಗೀತಕ್ಕ ಜೊತೆ ಶಿವಣ್ಣ ಕ್ಲಿಕ್ಕಿಸಿಕೊಂಡ ಸೆಲ್ಫಿ ಫೋಟೋ ಹೇಗಿದೆ?

ಚಿಕಿತ್ಸೆಗೆಂದು ಅಮೆರಿಕಗೆ ಹೋಗಿರುವ ಶಿವಣ್ಣ ಅವರು ಚೇತರಿಸಿಕೊಳ್ತಿದ್ದಾರೆ. ಶಿವಣ್ಣ ಅಭಿಮಾನಿಗಳು ಖುಷಿಯಾಗುವಂತಹ ಮಾಹಿತಿಯನ್ನು ಗೀತಾ ಶಿವರಾಜ್​ಕುಮಾರ್ ಹಂಚಿಕೊಂಡಿದ್ದಾರೆ.

Advertisment

publive-image

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಶಿವಣ್ಣ ಅವರು ತಾವು ಉಳಿದುಕೊಂಡಿರುವ ನಿವಾಸದ ಹತ್ತಿರ ಇರುವ ಬೀಚ್​​​ಗೆ ಭೇಟಿ ನೀಡಿದ್ದಾರೆ. ಅಲ್ಲಿ ವಾಯುವಿಹಾರ ನಡೆಸಿ ಕುಟುಂಬದ ಜೊತೆ ಕಾಲ ಕಳೆದಿದ್ದಾರೆ. ಆ ಕ್ಷಣವನ್ನು ಗೀತಕ್ಕ ತಮ್ಮ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲವು ಫೋಟೋಗಳನ್ನು ಅಭಿಮಾನಿಗಳ ಜೊತೆ ಗೀತಕ್ಕ ಹಂಚಿಕೊಂಡಿದ್ದಾರೆ. ಶಿವಣ್ಣ ಕೂಡ ಗೀತಕ್ಕ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ.. ಅಮೆರಿಕಾದಲ್ಲಿ ಈಗ ಬಿಂದಾಸ್ ವಾಕ್; ಫೋಟೋ ಬಿಡುಗಡೆ!

publive-image

ಕ್ಯಾನ್ಸರ್ ಮುಕ್ತ ಶಿವಣ್ಣ

ಶಿವಣ್ಣ ಅವರಿಗೆ ಕ್ಯಾನ್ಸರ್​​ ಕಾಡಿತ್ತು. ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕ್ಯಾನ್ಸರ್​ಗೆ ಸರ್ಜರಿ ಮಾಡಿಸಿಕೊಂಡಿರುವ ಅವರು ಆರೋಗ್ಯದಲ್ಲಿ ಚೇತರಿಕೆ ಕಾಣ್ತಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ಆರೋಗ್ಯದ ಬಗ್ಗೆ ವಿಡಿಯೋ ಮಾಡಿದ್ದ ಶಿವಣ್ಣ, ನಾನು ಆರೋಗ್ಯವಾಗಿದ್ದೇನೆ. ವೈದ್ಯರು ಮೊದಲು ಒಂದು ತಿಂಗಳು ನಿಧಾನವಾಗಿ ಇರಬೇಕು ಎಂದು ಹೇಳಿದ್ದಾರೆ.

Advertisment

publive-image

ಆ ಮೇಲೆ ಬೇಕಾದರೆ ನೀವು ಮೊದಲಿನಂತೆ ಏನು ಬೇಕಾದರೂ ಮಾಡಿ ಎಂದಿದ್ದಾರೆ. ಐ ವಿಲ್​ ಬಿ ಬ್ಯಾಕ್. ಶಿವಣ್ಣ ಆವಾಗ ಹೇಗಿದ್ದನೋ ಈಗ ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತೆ. ಡ್ಯಾನ್ಸ್​, ಫೈಟ್, ಲುಕ್​ ಎಲ್ಲದರಲ್ಲೂ ಇರುತ್ತೆ. ಮತ್ತೆ ನೀವು ನೋಡುತ್ತೀರಾ. ನಿಮ್ಮ ಪ್ರೀತಿ ವಿಶ್ವಾಸ ಯಾವಾತ್ತೂ ಮರೆಯಲ್ಲ, ನಿಮ್ಮ ಆಶೀರ್ವಾದ ಇರುವವರೆಗೂ ನಾನು ಖುಷಿಯಾಗಿ ಇರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಸಾಲು ಸಾಲು ವೈಫಲ್ಯ, ಗುರುವಿನ ಮೊರೆ ಹೋದ ಕೊಹ್ಲಿ! ವಿರಾಟ್ ಬಗ್ಗೆ ಅವರು ಹೇಳಿದ್ದೇನು?

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment