ಶಿವರಾಜ್‌ಕುಮಾರ್ ಜೀವನ ಚರಿತ್ರೆ ರಿಲೀಸ್​.. ಸಮಾರಂಭದಲ್ಲಿ ಚಿರ ಯುವಕನಂತೆ ಹಾಡಿಕುಣಿದ ಕರುನಾಡ ಚಕ್ರವರ್ತಿ

author-image
Bheemappa
Updated On
ಶಿವರಾಜ್‌ಕುಮಾರ್ ಜೀವನ ಚರಿತ್ರೆ ರಿಲೀಸ್​.. ಸಮಾರಂಭದಲ್ಲಿ ಚಿರ ಯುವಕನಂತೆ ಹಾಡಿಕುಣಿದ ಕರುನಾಡ ಚಕ್ರವರ್ತಿ
Advertisment
  • ಶಿವಣ್ಣ ಅವರ ಜೀವನ ಚರಿತ್ರೆ ಬಿಡುಗಡೆ ಆಗಿರೋದು ಎಲ್ಲಿ?
  • ಬಯೋಗ್ರಫಿಯಲ್ಲಿ ಸಿನಿ ಪಯಣ, ಜೀವನದ ಅಮೂಲ್ಯ ಕ್ಷಣಗಳು
  • ಶಿವರಾಜ್‌ಕುಮಾರ್ ಅವರ ಜೀವನ ಚರಿತ್ರೆಯ ಹೆಸರು ಏನು?

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಜೀವನ ಚರಿತ್ರೆ ಶ್ರೀಮುತ್ತು ಪುಸ್ತಕವನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸುಂದರ ಕಾರ್ಯಕ್ರಮದಲ್ಲಿ ಡಾ. ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರು ಭಾಗಿಯಾಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಜೀವನ ಚರಿತ್ರೆ ಶ್ರೀಮುತ್ತು ಬಿಡುಗಡೆ ಕಾರ್ಯಕ್ರಮವನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕುರಿತು ಶಿವಣ್ಣ ಈ ಮೊದಲೇ ಮಾಹಿತಿ ನೀಡಿದ್ದರು. ಅದರಂತೆ ಇಂದು ಅವರ ಜೀವನ ಚರಿತ್ರೆ ಶ್ರೀಮುತ್ತು ಪುಸ್ತಕ ಬಿಡುಗಡೆಗೊಂಡಿದೆ. ನಿವೇದನ ಆರ್ಟ್ಸ್ ಹಾಗೂ ಆನಂದ್ ನೇತೃತ್ವದಲ್ಲಿ ಈ ಅದ್ಭುತವಾದ ಬಯೋಗ್ರಫಿ ಬಂದಿದೆ.

ಇದನ್ನೂ ಓದಿ:ಅಖಿಲ್ ಅಕ್ಕಿನೇನಿ ರಿಸೆಪ್ಷನ್​; ಹೊಸ ಲುಕ್​ನಲ್ಲಿ ಯಶ್​, ಸುದೀಪ್​ ಸಖತ್ ಸ್ಟೈಲಿಶ್​.. ಫೋಟೋಸ್​!

publive-image

ಶಿವಣ್ಣ ಅವರ 40 ವರ್ಷಗಳ ಕನ್ನಡ ಸಿನಿ ಕ್ಷೇತ್ರದ ಪಯಣ ಸೇರಿದಂತೆ ಅವರ ಜೀವನದ ಅಮೂಲ್ಯ ಕ್ಷಣಗಳು ಈ ಶ್ರೀಮುತ್ತು ಪುಸ್ತಕದಲ್ಲಿ ಸುಂದರವಾಗಿ ವಿವರಿಸಲಾಗಿದೆ. ಸಿನಿಮಾ ರಂಗದಲ್ಲಿ ಅವರ ಏಳುಬೀಳಗಳನ್ನ ಕೂಡ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕದಲ್ಲಿರುವ ಕನ್ನಡಿಗರು ಭಾಗಿಯಾಗಿದ್ದರು. ವಿಶೇಷ ಎಂದರೆ ಚಿರ ಯುವಕನಂತೆ ಶಿವಣ್ಣ ವೇದಿಕೆ ಮೇಲೆ ಹಾಡು ಹಾಡಿರುವುದು ಎಲ್ಲರನ್ನೂ ಸೆಳೆಯಿತು.

ಈ ಮೊದಲು ತಮ್ಮ ಜೀವನ ಚರಿತ್ರೆ ಅಮೆರಿಕದಲ್ಲಿ ಬಿಡುಗಡೆ ಆಗಲಿದೆ ಎಂದು ಶಿವಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ನನ್ನ ಕುಟುಂಬಸ್ಥರು, ಗೆಳೆಯರು, ಸ್ನೇಹಿತರು ಹಾಗೂ ಸಿನಿಮಾ ಕ್ಷೇತ್ರದವರು ಹಲವಾರು ಮಾಹಿತಿಗಳನ್ನು ನೀಡಿದ್ದಾರೆ. ಇದರ ಆಧಾರದ ಮೇಲೆ ಸುಂದರವಾದ ಪುಸ್ತಕ ಬರುತ್ತದೆ ಎಂದು ಹೇಳಿಕೊಂಡಿದ್ದರು. ಅದರಂತೆ ಶ್ರೀಮುತ್ತು ಪುಸ್ತಕ ಇಂದು ಅಮೆರಿಕದಲ್ಲಿ ಬಿಡುಗಡೆ ಆಗಿದೆ.


">June 9, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment