/newsfirstlive-kannada/media/post_attachments/wp-content/uploads/2024/12/Shivaraj-kumar-Operation.jpg)
ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಜೀವನದ ದೊಡ್ಡ ಸವಾಲನ್ನು ಎದುರಿಸಿ ಗೆದ್ದಿದ್ದಾರೆ. ಅನಾರೋಗ್ಯದ ಜೊತೆ ಹೋರಾಡಿ ಶಿವರಾಜ್ ಕುಮಾರ್ ಮರುಹುಟ್ಟು ಪಡೆದಿದ್ದಾರೆ. ಆದಷ್ಟು ಬೇಗ ಶಿವಣ್ಣ ಚೇತರಿಸಿಕೊಳ್ಳಲಿ ಅಂತ ಕೋಟ್ಯಂತರ ಅಭಿಮಾನಿಗಳು ಮಾಡಿದ ಪ್ರಾರ್ಥನೆಗೆ ಫಲ ಸಿಕ್ಕಿದೆ.
‘ಕರುನಾಡ ಚಕ್ರವರ್ತಿ’ಗೆ ಆಪರೇಷನ್ ಸಕ್ಸಸ್
ಹ್ಯಾಟ್ರಿಕ್ ಹೀರೋ ಶಿವಣ್ಣ ಗೆಟ್‌ವೆಲ್ ಸೂನ್
ಕಳೆದ ಕೆಲವು ದಿನಗಳಿಂದ ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯದ ಸಮಸ್ಯೆಗೆ ಒಳಗಾಗಿದ್ರು. ಇದು ಅವರ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿತ್ತು. ಬಳಿಕ ಶಿವರಾಜ್ ಕುಮಾರ್ ಕಳೆದ ವಾರ ಆಪರೇಷನ್‌ಗೆ ಅಮೆರಿಕಕ್ಕೆ ಪಯಣ ಬೆಳೆಸಿದ್ರು. ಇದೀಗ ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಶಿವರಾಜ್‌ಕುಮಾರ್‌ಗೆ ನಡೆದ ಆಪರೇಷನ್ ಸಕ್ಸಸ್ ಆಗಿದೆ. ಸದ್ಯ ಶಿವಣ್ಣ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಅಂತ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕಾದಲ್ಲಿ ಶಿವಣ್ಣನ ಆಪರೇಷನ್ ಸಕ್ಸಸ್.. ಮಗಳು ನಿವೇದಿತಾ ಭಾವುಕ ಪೋಸ್ಟ್; ಅಭಿಮಾನಿಗಳಿಗೆ ಹೇಳಿದ್ದೇನು?
ಇಂದು ಶಿವಣ್ಣ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕ್ಯಾನ್ಸರ್ ತಗುಲಿದ್ದ ಅವರ ಕಿಡ್ನಿಯನ್ನ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ರೋಗವನ್ನ ಸಂಪೂರ್ಣವಾಗಿ ನಿವಾರಿಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಅವರದ್ದೇ ಕರುಳನ್ನ ಬಳಸಿ ಕೃತಕ ಮೂತ್ರಪಿಂಡವನ್ನ ಮತ್ತೆ ಅಳವಡಿಸಲಾಗಿದೆ. ಶಿವಣ್ಣ ಅವರು ಮಾನಸಿಕವಾಗಿ ದೈಹಿಕವಾಗಿ ಅತ್ಯಂತ ಧೈರ್ಯವಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹಾಗೂ ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡು ಬಂದಿಲ್ಲ.
- ಡಾ. ಮುರುಗೇಶ ಮನೋಹರನ್, ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್
ಶಿವಣ್ಣನ ಆರೋಗ್ಯದ ಬಗ್ಗೆ ಪತ್ನಿ ಗೀತಾ ಶಿವರಾಜ್‌ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಅಭಿಮಾನಿ ದೇವರುಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಆದಷ್ಟು ಬೇಗನೆ ಸಂಪೂರ್ಣ ಚೇತರಿಸಿಕೊಂಡು ಶಿವಣ್ಣ ದೇಶಕ್ಕೆ ವಾಪಸ್ ಬರುವ ನಿರೀಕ್ಷೆ ಇದೆ. ಶಿವಣ್ಣ ಅಂದ್ರೆ ಮರ್‌ಕ್ಯುರಿ ಇದ್ದಂಗೆ. ಈ ವಯಸ್ಸಲ್ಲೂ ಅವರ ಡ್ಯಾನ್ಸ್.. ಖದರ್ ಯುವಕರನ್ನೂ ನಾಚಿಸುವಂತದ್ದು. ಆದ್ರೆ, ಅನಾರೋಗ್ಯವೆಂಬ ಭೂತ ಬೆನ್ನು ಬಿದ್ದಿತ್ತು. ಇದೀಗ ಭೂತದ ಜೊತೆ ಹೋರಾಡಿ ಗೆದ್ದು ಶಿವರಾಜ್ ಕುಮಾರ್ ವಾಪಸ್ ಬರ್ತಿದ್ದಾರೆ. ಮತ್ತೆ ಕನ್ನಡಿಗರನ್ನ ರಂಜಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ