/newsfirstlive-kannada/media/post_attachments/wp-content/uploads/2025/03/shivanna7.jpg)
ಬೆಂಗಳೂರು: ಇಂದು ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬ. ಇದೇ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಮಕ್ಕಳೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದಾರೆ. ಪುನೀತ್ ಸ್ಮಾರಕಕ್ಕೆ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಬೇವಿನ ಮರಕ್ಕೆ ಕಾರು ಭೀಕರ ಡಿಕ್ಕಿ; ವಿಜಯಪುರದಲ್ಲಿ ಮೂವರು ಸಾವು, ಓರ್ವ ಗಂಭೀರ
ಇದಾದ ಬಳಿಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪತ್ನಿ ಗೀತಕ್ಕ ಹಾಗೂ ಮಗಳು ನಿವೇದಿತಾ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟು ಅಪ್ಪು ಸ್ಮಾರಕಕ್ಕೆ ನಮನ ಸಲ್ಲಿಸಿದ್ದಾರೆ. ಇದಾದ ಬಳಿಕ ಸುದ್ದಿಗಾರೊಂದಿಗೆ ಮಾತಾಡಿದ ನಟ ಶಿವ ರಾಜ್‌ಕುಮಾರ್ ಅವರು, ತುಂಬಾ ನೋವಾಗ್ತಿದೆ. 50ನೇ ವರ್ಷದ ಬರ್ತ್ ಡೇ ಅಂದಾಗ ಅಪ್ಪು ಇರಬೇಕಿತ್ತು. ಅವನಿಲ್ಲದೇ ಹುಟ್ಟುಹಬ್ಬ ಆಚರಿಸೋಕೆ ದುಃಖ ಆಗ್ತಿದೆ. ಆದ್ರೆ, ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಉಳಿದಿದ್ದಾನೆ. ಆದ್ರೆ ಅವನ ಕೆಲಸಗಳಿಂದ, ವ್ಯಕ್ತಿತ್ವದಿಂದ ಇನ್ನೂ ಅಜರಾಮರ ಆಗಿದ್ದಾನೆ. ಇಲ್ಲೇ ನಮ್ಮ ಜೊತೆ ಎಲ್ಲೋ ಇದಾನೆ ಅನ್ನಿಸ್ತಿದೆ ಎಂದಿದ್ದಾರೆ.
ಇನ್ನೂ, ಮಾತನ್ನು ಮುಂದುವರೆಸಿದ ಅವರು, ಅಪ್ಪು ರೀ ರಿಲೀಸ್ ವೇಳೆ ಯಾಕೆ ಅಪ್ಪು ನೋಡಿಲ್ಲ ಅಂತಾ ಕೇಳ್ತಿದ್ರು. ನನಗೆ ನೋಡೋಕೆ ಆಗ್ತಿರಲಿಲ್ಲ. ಯಾಕೆಂದರೆ ಹಳೆಯ ನೆನಪುಗಳೆಲ್ಲ ಕಾಡುತ್ತೆ. ಆ ಸಿನಿಮಾಗೆ ಟೈಟಲ್ ಕೊಟ್ಟಿದ್ದು ನಾನೇ. ಪೂರಿ ಜಗನ್ನಾಥ್ ಜೊತೆ ಸೇರಿ ಮಾಡಿದ ಸಿನಿಮಾ ಅದು. ಈಗಲೂ ಅಪ್ಪು ಸಿನಿಮಾನ ಜನ ಕೊಂಡಾಡ್ತಿದ್ದಾರೆ. ಅಪ್ಪು ಬರ್ತ್ ಡೇ ನೆನಪು ಅಂದ್ರೆ ಸಾಕಷ್ಟಿದೆ. ಚಿಕ್ಕ ವಯಸ್ಸಿನಿಂದ ಸಾಕಷ್ಟು ಸೆಲೆಬ್ರೇಷನ್ ಮಾಡಿದ್ದೀವಿ. ಅವನು ಹುಟ್ಟಿದ ಆರು ತಿಂಗಳಿಂದಲೇ ಸಿನಿಮಾದಲ್ಲಿ ಕಾಣಿಸಿಕೊಂಡ. ಬಾಲ ನಟನಾಗಿ, ಹೀರೋ ಆಗಿ ದೊಡ್ಡ ಯಶಸ್ಸು ಗಳಿಸಿದ ಎಂದು ಹೇಳಿದ್ದಾರೆ.
ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ❤️ pic.twitter.com/ByjRsV2M9I
— DrShivaRajkumar (@NimmaShivanna)
ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ❤️ pic.twitter.com/ByjRsV2M9I
— DrShivaRajkumar (@NimmaShivanna) March 17, 2025
">March 17, 2025
ನಟ ಶಿವರಾಜ್ ಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೆ ವರುಷಗಳು ಬದಲಾದರು ವ್ಯಕ್ತಿ ಹಾಗೆ ಉಳಿಯುವುದು ತುಂಬಾ ಅಪರೂಪ ಅಂತ ಅಪೂರಪದಲ್ಲಿ ನೀನು ಒಬ್ಬ, ನೀನೇ ಒಬ್ಬ. ಮಗುವಲ್ಲಿ ನಿನ್ನ ಎತ್ತಿ ಮುದ್ದಾಡುವಾಗ ಇದ್ದ ನಿನ್ನ ನಗು ಇಂದಿಗೂ ಮಾಸದೆ ನನ್ನಲಿ ಹಾಗೆ ಉಳಿದಿದೆ. ಇಡೀ ಪ್ರಪಂಚಕ್ಕೆ ಇಂದು ನಿನ್ನ ಐವತ್ತನೇ ಹುಟ್ಟು ಹಬ್ಬ ನನಗೆ ಈಗಲೂ ಮೊನ್ನೆ ಅಷ್ಟೇ ಮೊದಲ ಹುಟ್ಟುಹಬ್ಬ ಆಚರಿಸಿದಷ್ಟೇ ಸಂಭ್ರಮ ಇನ್ನು ನೂರು ವರ್ಷವಾದರೂ ಅದು ಬದಲಾಗದು. ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ನಿನ್ನ ಶಿವಣ್ಣ ಎಂದು ಬರೆದಿರೋ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ