ಅಪ್ಪು ಮಗಳ ಸಾಧನೆಗೆ ಶಿವಣ್ಣ ಫುಲ್ ಫಿದಾ.. ಭಾವುಕ ಮಾತು; ಸ್ಪೆಷಲ್ ಫೋಟೋ ಇಲ್ಲಿವೆ!

author-image
admin
Updated On
ಅಪ್ಪು ಮಗಳ ಸಾಧನೆಗೆ ಶಿವಣ್ಣ ಫುಲ್ ಫಿದಾ.. ಭಾವುಕ ಮಾತು; ಸ್ಪೆಷಲ್ ಫೋಟೋ ಇಲ್ಲಿವೆ!
Advertisment
  • ಪುನೀತ್ ರಾಜ್‌ಕುಮಾರ್ ದೊಡ್ಡ ಮಗಳು ಧೃತಿ ರಾಜ್‌ಕುಮಾರ್
  • ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ ಆಗತ್ತದೆ
  • ನಿನ್ನಲ್ಲಿಯೇ ಅಪ್ಪು.. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ ಎಂದು ಶಿವಣ್ಣ

ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಮಗಳು ಧೃತಿ ರಾಜ್‌ಕುಮಾರ್ ಅಮೆರಿಕಾದಲ್ಲಿ ಪದವಿ ಪಡೆದಿದ್ದಾರೆ. ಅಪ್ಪು ಮಗಳ ಈ ಸಾಧನೆಗೆ ಶಿವರಾಜ್‌ ಕುಮಾರ್‌ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ.
ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಧೃತಿ ರಾಜ್‌ಕುಮಾರ್ ಅವರು ಇದೀಗ ಪದವಿ ಪಡೆದಿದ್ದಾರೆ.

publive-image

ಧೃತಿ ಗ್ರಾಜುಯೇಷನ್ ಡೇನಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ವಿನಯ್ ರಾಜ್‍ಕುಮಾರ್, ಸಹೋದರಿ ವಂದಿತಾ ಭಾಗಿಯಾಗಿದ್ದರು.

publive-image

ಧೃತಿ ರಾಜ್‌ಕುಮಾರ್ ಗ್ರಾಜುಯೇಷನ್‌ಗೆ ಬಹಳ ಹೆಮ್ಮೆಯಿಂದ ಶಿವಣ್ಣ ಶುಭಾಶಯ ಕೋರಿದ್ದಾರೆ. ಧೃತಿ ಅವರನ್ನ ದೊಡ್ಮನೆಯಲ್ಲಿ ಟೋಟೊ ಎಂದೇ ಕರೆಯಾಗುತ್ತದೆ.

ಇದನ್ನೂ ಓದಿ: ಮುದ್ದು.. ಮುದ್ದು ರಾಕ್ಷಸಿ ಅಂತ ಪತ್ನಿ ವಿಜಯಲಕ್ಷ್ಮೀ ಜೊತೆಗೆ ದರ್ಶನ್​ ಭರ್ಜರಿ ಡಾನ್ಸ್! 

publive-image

ಹಾಯ್‌ ಟೋಟೊ ಎಂದಿರುವ ಶಿವರಾಜ್‌ ಕುಮಾರ್ ಅವರು ಈ ದಿನ ಬಹಳ ವಿಶೇಷವಾದ ದಿನ. ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ ಎಂದಿದ್ದಾರೆ.

publive-image

ಇಷ್ಟೇ ಅಲ್ಲದೆ ಟೋಟೊ ನೀನು ದೊಡ್ಡಪ್ಪನೇ ಹೆಮ್ಮೆ ಪಡುವಂತೆ ಮಾಡಿಬಿಟ್ಟೆ. ಅಪ್ಪು, ಅಶ್ವನಿ, ನೀನು ಮತ್ತು ನುಕ್ಕಿ ಜೊತೆ ಬಹಳಷ್ಟು ಸುಮಧುರ ನೆನಪುಗಳಿವೆ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ ಆಗತ್ತದೆ.
ನಿನ್ನಲ್ಲಿಯೇ ಅಪ್ಪು. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. ಗ್ರಾಜುಯೇಷನ್ ತೆಗೆದುಕೊಂಡಿದ್ದಕ್ಕೆ ಮತ್ತೊಮ್ಮೆ ಅಭಿನಂದನೆಗಳು ಟೋಟೊ ಎಂದು ಶಿವಣ್ಣ ಪೋಸ್ಟ್ ಮಾಡಿದ್ದಾರೆ.

publive-image

ಪುನೀತ್ ರಾಜ್‌ಕುಮಾರ್ ಮಗಳ ಬಗ್ಗೆ ಶಿವರಾಜ್‌ಕುಮಾರ್ ಬರೆದಿರೋ ಈ ಪ್ರೀತಿಯ ಸಾಲುಗಳು ಹಾಗೂ ಫೋಟೋಗಳು ಸಖತ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment