newsfirstkannada.com

ಶಿವಮೊಗ್ಗದಲ್ಲಿ ಇಬ್ಬರು ರೌಡಿಶೀಟರ್​ಗಳ ಬರ್ಬರ ಹತ್ಯೆ.. ನಡು ಬೀದಿಯಲ್ಲಿ ಹೆಣವಾದ ಸೇಬು, ಗೌಸು

Share :

Published May 9, 2024 at 6:47am

    ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಶುರುವಾದ ಗ್ಯಾಂಗ್ ವಾರ್

    ಮಾರಕಾಸ್ತ್ರ, ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಇಬ್ಬರ ಹತ್ಯೆ

    ನಡು ರಸ್ತೆಯಲ್ಲೇ ಬಡಿದಾಡಿಕೊಂಡ ಎರಡು ಗುಂಪಿನ ಜನರು

ಅದು ಸದಾಕಾಲ ಜನಜಂಗುಳಿಯಿಂದ ಕೂಡಿರೋ ಪ್ರದೇಶ. ಮಾಂಸದ ಮಾರುಕಟ್ಟೆ ಇರೋ ಆ ಜಾಗದಲ್ಲಿ ದಟ್ಟಣೆ ಸಹಜವಾಗಿಯೇ ಹೆಚ್ಚಾಗಿರುತ್ತೆ. ಅಂತಹ ಪ್ರದೇಶದಲ್ಲಿ ನಡು ರಸ್ತೆಯಲ್ಲಿಯೇ ಎರಡು ಗುಂಪಿನವರು ಬಡಿದಾಡಿಕೊಂಡಿದ್ದಾರೆ. ಪರಿಣಾಮ ಇಬ್ಬರು ಕೊಲೆಯಲ್ಲಿ ಅಂತ್ಯಗೊಂಡಿದೆ.

ರಸ್ತೆ ಮಧ್ಯೆ ಎರಡು ಗುಂಪಿನ ಬಡಿದಾಟ, ಕೊಲೆಯಲ್ಲಿ ಅಂತ್ಯ!

ಏರಿಯಾದಲ್ಲಿ ಹವಾ ಇಟ್ಟಿದ್ದ ಶೋಹಿಲ್ ಅಲಿಯಾಸ್ ಸೇಬು ಹಾಗೂ ಗೌಸ್ ಎಂಬ ರೌಡಿಶೀಟರ್​ಗಳು ಬೀದಿ ಹೆಣವಾಗಿದ್ದಾರೆ. ಕಾರಣ ನಿನ್ನೆ ಸಂಜೆ ನಡೆದಿದ್ದ ಗ್ಯಾಂಗ್​ ವಾರ್​.

ಗೌಸ್ ಹಾಗೂ ಶೋಹಿಲ್ ಅಲಿಯಾಸ್ ಸೇಬು

ಮಲೆನಾಡು ನಗರಿ ಶಿವಮೊಗ್ಗದ ಜನನಿಬಿಡ ಪ್ರದೇಶವಾದ ಮೀನು ಮಾರುಕಟ್ಟೆ ಪ್ರದೇಶದ ಲಷ್ಕರ್ ಮೊಹಲ್ಲಾ ಕ್ರಾಸ್ ಬಳಿ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಗ್ಯಾಂಗ್ ವಾರ್ ಶುರುವಾಗಿತ್ತು. ಹಳೇ ದ್ವೇಷದ ಹಿನ್ನೆಲೆ ನಡು ರಸ್ತೆಯಲ್ಲೇ ಇಬ್ಬರು ರೌಡಿಶೀಟರ್​ಗಳ ಬರ್ಬರ್ ಹತ್ಯೆಯಾಗಿದ್ದಾರೆ ಎಂದು ಹೇಳಲಾಗ್ತಿದೆ.

ರೌಡಿಶೀಟರ್ ಯಾಶೀನ್ ಖುರೇಶಿ

ಪ್ರತಿ ದಾಳಿ ಮಾಡಿದ ಖುರೇಶಿ ಟೀಂ

ರೌಡಿಶೀಟರ್ ಯಾಶೀನ್ ಖುರೇಶಿ ತನ್ನ ಮಟನ್ ಸ್ಟಾಲ್​ನಲ್ಲಿ ಇದ್ದಿದ್ದನ್ನ ಖಚಿತ ಪಡಿಸಿಕೊಂಡ ಶೋಹಿಲ್ ಹಾಗೂ ಗೌಸ್ ತಂಡ ಏಕಾಏಕಿ ಬಂದು ಲಾಂಗು, ಮಚ್ಚಿನಿಂದ ಖುರೇಶಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಖುರೇಶಿ ಕಡೆ ಹುಡುಗರು, ಶೋಹಿಲ್ ಮತ್ತು ಗೌಸ್ ಗ್ಯಾಂಗ್ ಮೇಲೆ ಪ್ರತಿ ದಾಳಿ ಮಾಡಿ ಮಾರಕಾಸ್ತ್ರ, ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಇಬ್ಬರನ್ನ ಮುಗಿಸಿದ್ದಾರೆ.

ಇಬ್ಬರ ಕೊಲೆಯಾಗುತ್ತಿದ್ದಂತೆ ಜೊತೆಗೆ ಬಂದಿದ್ದ ಪುಡಿ ರೌಡಿ ಗ್ಯಾಂಗ್ ಅಲ್ಲಿಂದ ಎಸ್ಕೇಪ್ ಆಗಿದೆ. ಇತ್ತ ಹಲ್ಲೆಗೊಳಗಾದ ಖುರೇಶಿಯನ್ನ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರೌಡಿಶೀಟರ್ ಯಾಸಿನ್ ಖುರೇಶಿ ಮತ್ತು ಶೋಹಿಲ್ ಇಬ್ಬರ ನಡುವಿನ ಹಳೆಯ ವೈಷಮ್ಯವೇ ಈ ಹಲ್ಲೆಗೆ ಕಾರಣ ಎನ್ನಲಾಗಿದೆ. ಬಳಿಕ ಸ್ಥಳಕ್ಕೆ ಭೇಟಿ ಕೊಟ್ಟ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್, ಕೂಡಲೇ ಆರೋಪಿಗಳನ್ನ ಬಂಧಿಸುವುದಾಗಿ ತಿಳಿಸಿದ್ರು.

ಸೇಬು ಮತ್ತು ಖುರೇಶಿ

ಇದನ್ನೂ ಓದಿ: ಇಂದು SSLC ಫಲಿತಾಂಶ ಪ್ರಕಟ; ರಿಸಲ್ಟ್​​ ನೋಡೋದು ಹೇಗೆ ಗೊತ್ತಾ?

ಒಟ್ಟಿನಲ್ಲಿ, ಕಳೆದ ಕೆಲವು ತಿಂಗಳಿಂದ ತಣ್ಣಗಿದ್ದ ಶಿವಮೊಗ್ಗದಲ್ಲಿ ಮತ್ತೆ ಗ್ಯಾಂಗ್ ವಾರ್ ಆರಂಭಗೊಂಡಿದ್ದು, ರಕ್ತಪಾತ ನಡೆದಿದೆ. ಇದು ಮತ್ತಷ್ಟು ಅತಿರೇಕಕ್ಕೆ ತಿರುಗೋಕು ಮುನ್ನ ಪೊಲೀಸರು ಪುಡಿರೌಡಿಗಳನ್ನ ಮಟ್ಟಹಾಕಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಮೊಗ್ಗದಲ್ಲಿ ಇಬ್ಬರು ರೌಡಿಶೀಟರ್​ಗಳ ಬರ್ಬರ ಹತ್ಯೆ.. ನಡು ಬೀದಿಯಲ್ಲಿ ಹೆಣವಾದ ಸೇಬು, ಗೌಸು

https://newsfirstlive.com/wp-content/uploads/2024/05/Shivmogga-4.jpg

Load More