/newsfirstlive-kannada/media/post_attachments/wp-content/uploads/2025/07/Sadhna-Singh-Chouhan.jpg)
ನವದೆಹಲಿ: ಕೆಲಸದ ಒತ್ತಡದಲ್ಲಿ ಪರ್ಸ್,​ ಮೊಬೈಲ್ ಇನ್ನಿತರ ವಸ್ತುಗಳನ್ನು ಜನರು ಮರೆತು ಹೋಗುವುದು ಸರ್ವೇ ಸಾಮಾನ್ಯ. ಆದ್ರೆ, ಪ್ರವಾಸದ ತರಾತುರಿಯಲ್ಲಿ ಕೇಂದ್ರ ಕೃಷಿ ಸಚಿವ ತಮ್ಮ ಹೆಂಡತಿಯನ್ನೇ ಮರೆತ ವಿಚಿತ್ರ ಘಟನೆ ನಡೆದಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರವಾಸದ ಗಡಿಬಿಡಿಯಲ್ಲಿ ತಮ್ಮ ಪತ್ನಿ ಸಾಧನಾ ಸಿಂಗ್ ಅವರನ್ನೇ ಬಿಟ್ಟು ವಿಮಾನ ಹತ್ತಲು ಮುಂದಾಗಿದ್ದರು. ಹೌದು, ಶಿವರಾಜ್ ಸಿಂಗ್ ಚೌಹಾಣ್ ಅವರು ಜುನಾಗಢದಲ್ಲಿರುವ ಕಡಲೆಕಾಯಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆಗ ಪತ್ನಿಯನ್ನು ಅಲ್ಲೇ ಬಿಟ್ಟು ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದರು.
ರಾತ್ರಿ 8 ಗಂಟೆಗೆ ವಿಮಾನವಿದ್ದುದರಿಂದ ಅದೇ ಗಡಿಬಿಡಿಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್​ಕೋಟ್​ ಕಡೆ ಹೋಗಿದ್ದರು. ಅದಾದ ಸ್ಪಲ್ಪ ಸಮಯದ ಬಳಿಕ ಪತ್ನಿ ಬಗ್ಗೆ ನೆನಪಿಸಿಕೊಂಡ ಅವರು, ಆ ಕೂಡಲೇ 22 ವಾಹನಗಳ ಬೆಂಗಾವಲು ಪಡೆಯೊಂದಿಗೆ ಜುನಾಗಢದ ಕಡಲೆಕಾಯಿ ಸಂಶೋಧನಾ ಕೇಂದ್ರಕ್ಕೆ ಹಿಂತಿರುಗಿದ್ದರು. ಆಗ ಅವರ ಪತ್ನಿ ಅಲ್ಲಿ ಸಾಧನಾ ಕಾಯುವ ಕೋಣೆಯಲ್ಲಿ ಕುಳಿತಿದ್ದರಂತೆ. ಇದೇ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us