ಸರಿಗಮಪ ವೇದಿಕೆಗೆ ಶಿವಣ್ಣ ಸಡನ್ ಎಂಟ್ರಿ ಕೊಡಲು ಒಂದು ಬಹುಮುಖ್ಯ ಕಾರಣವಿತ್ತು; ಏನದು?

author-image
admin
Updated On
ಸರಿಗಮಪ ವೇದಿಕೆಗೆ ಶಿವಣ್ಣ ಸಡನ್ ಎಂಟ್ರಿ ಕೊಡಲು ಒಂದು ಬಹುಮುಖ್ಯ ಕಾರಣವಿತ್ತು; ಏನದು?
Advertisment
  • ಅಭಿಮಾನಿಗಳ ಕೈಗೆ ಸುಲಭವಾಗಿ ಸಿಗೋ ಸ್ಟಾರ್​ ಅಂದ್ರೆ ಶಿವಣ್ಣ
  • ಅನಾರೋಗ್ಯದ ನಡುವೆಯೂ ಸರಿಗಮಪ ವೇದಿಕೆಗೆ ಶಿವಣ್ಣ ಆಗಮನ
  • ಅದಕ್ಕೆ ಹೇಳೋದು ಶಿವಣ್ಣನ ಎನರ್ಜಿಗೆ ಶಿವಣ್ಣನೇ ಸರಿಸಾಟಿ ಅಂತ!

ಶಿವರಾಜ್ ಕುಮಾರ್ ಅವರನ್ನ ಸರಳತೆಯ ಕಿಂಗ್​ ಅಂದ್ರು ತಪ್ಪಲ್ಲ. ಎನರ್ಜಿ ಬೂಸ್ಟರ್​, ಮುಗ್ಧ ಮನಸ್ಸಿನ ಒಡೆಯ ಶಿವಣ್ಣ. ಅಭಿಮಾನಿಗಳ ಕೈಗೆ ಸುಲಭವಾಗಿ ಸಿಗೋ ಸ್ಟಾರ್​ ಅಂದ್ರೆ ಶಿವಣ್ಣ. ಇವ್ರ ಬಗ್ಗೆ ಎಷ್ಟು ಮಾತ್ನಾಡಿದ್ರು ಕಮ್ಮಿನೇ. ಅನಾರೋಗ್ಯದ ನಡುವೆಯೂ ಸರಿಗಮಪ ವೇದಿಕೆಗೆ ಶಿವಣ್ಣ ದಂಪತಿ ಸಮೇತ ಬಂದಿದ್ದಾರೆ. ಇದರ ಹಿಂದೆ ಒಂದು ಉದ್ದೇಶ ಕೂಡ ಇತ್ತು.

publive-image

ಪ್ರೀತಿ ಅಭಿಮಾನಕ್ಕೆ ತಲೆಬಾಗೋ ವ್ಯಕ್ತಿತ್ವ ಶಿವಣ್ಣನದು. ಇದಕ್ಕೆ ತಾಜಾ ಉದಾಹರಣೆ ಅನಾರೋಗ್ಯದ ನಡುವೆಯೂ ಸರಿಗಮಪ ವೇದಿಕೆಗೆ ಬಂದಿದ್ದು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಶಿವಣ್ಣ ಇತ್ತೀಚಿಗಷ್ಟೇ ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಅವರ ಆರೋಗ್ಯಕ್ಕೆ ಸಹಸ್ರಾರು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಎಲ್ಲರ ಹಾರೈಕೆಯಿಂದ ಶಿವಣ್ಣ ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ತಕ್ಷಣ ಸ್ನೇಹಿತರು, ಬಂಧು ಬಾಂಧವರನ್ನ ಭೇಟಿಯಾಗಿದ್ದಾರೆ. ರಾಜ್ಯದ ವಿವಿಧೆಡೆ ಪ್ರವಾಸ ಕೂಡ ಮಾಡುತ್ತಿದ್ದಾರೆ. ಅದಕ್ಕೆ ಹೇಳೋದು ಇವರ ಎನರ್ಜಿಗೆ ಇವರೇ ಸರಿಸಾಟಿ ಅಂತ.

publive-image

ಇದರ ಮಧ್ಯೆ ಶಿವಣ್ಣ ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಗೆ ಸರ್​ಪ್ರೈಸ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದ್ಯಾವುದೂ ಮೊದಲೇ ಪ್ಲ್ಯಾನ್​ ಮಾಡಿದಲ್ಲ. ಜನವರಿ 25ನೇ ತಾರೀಖು ನಿರೂಪಕಿ ಅನುಶ್ರೀ ಅವರ ಬರ್ತ್​ ಡೇ ಇತ್ತು.

ಇದನ್ನೂ ಓದಿ: ಶಿವಣ್ಣನಿಗೆ ಒಂದೇ ಸಲ 6 ಆಪರೇಷನ್, 190 ಹೊಲಿಗೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಮಧು ಬಂಗಾರಪ್ಪ! 

ಪ್ರತಿ ವರ್ಷದ ವಾಡಿಕೆಯಂತೆ ಕಾರ್ಯಕ್ರಮದಲ್ಲಿ ಅನುಶ್ರೀ ಅವರಿಗೆ ಸ್ಪೆಷಲ್​ ಗಿಫ್ಟ್​, ಸರ್​​ಪ್ರೈಸ್​ಗಳನ್ನ ಚಾನೆಲ್ ನೀಡುತ್ತಾ ಬಂದಿದೆ. ಈ ವರ್ಷ ಕೂಡ ಶಿವಣ್ಣ ಅವರಿಗೆ ಬರ್ತ್​​ ಡೇ ವಿಶ್​ಗಾಗಿ ವಿಡಿಯೋ ಕಾಲ್​ ಮಾಡಲು ಚಾನೆಲ್​ ಕೇಳಿತ್ತಂತೆ. ಇದಕ್ಕೆ ಶಿವಣ್ಣ ವಿಡಿಯೋ ಕಾಲ್​ ಯಾಕೆ? ನಾನೇ ಬರ್ತಿನಿ ಅಂತ. ಕಾರ್ಯಕ್ರಮದ ಮಧ್ಯದಲ್ಲೇ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿರೋ ಯಾರಿಗೂ ಶಿವಣ್ಣ ಬರೋದು ಗೊತ್ತಿರಲಿಲ್ಲ.

ಎಂತಹ ಅದ್ಭುತ ಸುಮಧುರ ಘಳಿಗೆ ಇದು. ಒಬ್ಬ ಸ್ಟಾರ್​ ನಟನ ಸರಳತೆ ಅಂದ್ರೆ ಅದಕ್ಕೆ ಅಭಿಮಾನಿಗಳು ಶಿವಣ್ಣನಿಗೆ ಸರಳತೆಯ ಸಾಮ್ರಾಟ ಅನ್ನೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment