/newsfirstlive-kannada/media/post_attachments/wp-content/uploads/2024/12/Shivaraj-kumar-Video.jpg)
ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್, ಡಾ. ಶಿವರಾಜ್ಕುಮಾರ್ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದು ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಆಪರೇಷನ್‌ಗೂ ಮುಂಚೆ ಶಿವರಾಜ್ ಕುಮಾರ್ ಅವರು ಅಭಿಮಾನಿಗಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ: ಶಿವಣ್ಣನಿಗೆ ಸತತ 6 ಗಂಟೆಗಳ ಕಾಲ ಸರ್ಜರಿ.. ಅಭಿಮಾನಿಗಳಿಗೆ ಗೀತಕ್ಕ ಹೇಳಿದ್ದೇನು?
ಅಮೆರಿಕಾದಿಂದ ಅಭಿಮಾನಿಗಳ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿರೋ ಶಿವಣ್ಣ, ಆದಷ್ಟು ಬೇಗ ಹುಷಾರಾಗಿ ಬರೋದಾಗಿ ತಿಳಿಸಿದ್ದಾರೆ. ಶಿವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿರೋ ಹುಡುಗರ ಜೊತೆಗೂ ಶಿವಣ್ಣ ವಿಡಿಯೋ ಕಾಲ್‌ನಲ್ಲಿ ಇಂದು ಮಾತನಾಡಿದ್ದಾರೆ.
ಇದನ್ನೂ ಓದಿ: ನಮ್ಮ ಆಯಸ್ಸನ್ನೆಲ್ಲ ಶಿವಣ್ಣಗೆ ದೇವರು ಕೊಡ್ಲಿ -ಧ್ರುವ ಸರ್ಜಾ ಪ್ರಾರ್ಥನೆ
ಕೆಲ ದಿನಗಳ ಹಿಂದೆ ಶಿವಣ್ಣ, ಗೀತಾ ಶಿವರಾಜ್ ಕುಮಾರ್ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದರು. ಇಂದು ಅಮೆರಿಕಾದಲ್ಲಿ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಆಸ್ಪತ್ರೆಯಲ್ಲಿ ಶಿವಣ್ಣಗೆ ಶಸ್ತ್ರಚಿಕಿತ್ಸೆಯ ಬಳಿಕ ಒಂದು ತಿಂಗಳು ಕಾಲ ಅಮೆರಿಕದಲ್ಲಿ ಇರಲಿದ್ದಾರೆ.
ಜನವರಿ 26ಕ್ಕೆ ಭಾರತಕ್ಕೆ ಶಿವಣ್ಣ ವಾಪಸ್ ಆಗಲಿದ್ದಾರೆ. ಶಿವಣ್ಣ ಜೊತೆ ಗೀತಾ ಶಿವರಾಜ್ಕುಮಾರ್ ಜೊತೆಯಲ್ಲಿ ಇರಲಿದ್ದಾರೆ. ನೆಚ್ಚಿನ ನಟ ಬೇಗ ಗುಣಮುಖರಾಗಿ ಬರಲಿ ಎಂದು ರಾಜ್ಯದ ನಾನಾ ಭಾಗಗಳಲ್ಲಿ ಅಭಿಮಾನಿಗಳು ದೇವಸ್ಥಾನಗಳಲ್ಲಿ ಹೋಮ- ಹವನಗಳನ್ನು ನಡೆಸಿದ್ದಾರೆ. ಸರ್ಜರಿ ಯಶಸ್ವಿಯಾಗಿ, ಆರೋಗ್ಯವಾಗಿ ಶಿವಣ್ಣ ತವರಿಗೆ ಮರಳಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ