/newsfirstlive-kannada/media/post_attachments/wp-content/uploads/2024/12/geetakka.jpg)
ಇಂದು ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಅವರು ಚಿಕಿತ್ಸೆಗೆಂದು ಅಮೆರಿಕಾಗೆ ಹೊರಟ್ಟಿದ್ದಾರೆ. ಚಿಕಿತ್ಸೆಗೆ ತೆರಳುವ ಮುನ್ನ ಶಿವಣ್ಣ ಮನೆಯಲ್ಲಿ ಪೂಜೆ ಮಾಡಿಲಾಗಿದೆ. ಸುದೀಪ್, ಬಿಸಿ ಪಾಟೀಲ್, ಸೇರಿದಂತೆ ಚಿತ್ರರಂಗದ ನಟ ನಟಿಯರು ಶಿವಣ್ಣ ಮನೆಗೆ ಭೇಟಿ ನೀಡಿದ್ದಾರೆ. ಅದಷ್ಟು ಬೇಗ ಗುಣ ಮುಖರಾಗುವಂತೆ ಹಾರೈಸಿದ್ದಾರೆ.
ಇದನ್ನೂ ಓದಿ:ಅಮೆರಿಕಾಗೆ ಹೊರಟ ಶಿವಣ್ಣ.. ಹರಕೆ ಹೊತ್ತು ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು; ಹೇಳಿದ್ದೇನು?​
/newsfirstlive-kannada/media/post_attachments/wp-content/uploads/2024/12/shivanna7.jpg)
ಅಮೆರಿಕಾಗೆ ಹೊರಡುವ ಮುನ್ನ ನಟ ಶಿವಣ್ಣ ಸುದ್ದಿಗಾರೊಂದಿಗೆ ಭಾವುಕರಾಗಿ ಮಾತಾಡಿದ್ದಾರೆ. ನಾವು ಎಷ್ಟೇ ದೊಡ್ಡ ಸ್ಟಾರ್​ಗಳು ಆದ್ರು ಒಂದಷ್ಟು ಆತಂಕ ಅನ್ನೋದು ಇದ್ದೇ ಇರುತ್ತೆ. ಹೀಗಾಗಿ ಫ್ಯಾಮಿಲಿಯವರು, ಫ್ರೆಂಡ್ಸ್ ಬಂದು ಧೈರ್ಯ ಹೇಳ್ತಿದ್ದಾರೆ. 24ನೇ ತಾರೀಖು ಸರ್ಜರಿ ಆಗುತ್ತೆ. ಇಷ್ಟು ದಿನಗಳ ತನಕ ದೂರ ಇರೋದ್ರಿಂದ ಒಂದಷ್ಟು ಆತಂಕ ಇದೆ. ಡಾಕ್ಟರ್ ಮುರುಗೇಶ್ ಎಂಬುವವರು ನನಗೆ ಚಿಕಿತ್ಸೆ ನೀಡ್ತಾರೆ.
/newsfirstlive-kannada/media/post_attachments/wp-content/uploads/2024/12/shivanna5.jpg)
25ಗೆ ಫ್ಲೈಟ್ ಹತ್ತಿ 26ಗೆ ನಾನು ಇಲ್ಲಿಗೆ ಬರ್ತಿನಿ. ಜನವರಿ 1ರಂದು ಮಿಸ್ ಮಾಡ್ಕೋತಿನಿ. ಎಲ್ಲರಿಗೂ ಹೊಸ ವರ್ಷ 2025 ಒಳ್ಳೆಯದನ್ನು ಮಾಡಲಿ. ಸುದೀಪ್ ಮ್ಯಾಕ್ಸ್ ಸಿನಿಮಾಗೆ ಒಳ್ಳೆಯದಾಗಲಿ. ಇಯರ್ ಎಂಡ್ ಅಲ್ಲಿ ರಿಲೀಸ್ ಆಗುತ್ತಿರೋ ಎಲ್ಲಾ ಸಿನಿಮಾಗಳಿಗೂ ಒಳ್ಳೆಯದಾಗಲಿ. ಯಾರೂ ಆತಂಕ ಪಡಬೇಕಿಲ್ಲ. ಎಲ್ಲಾ ವೈದ್ಯರೂ ಧೈರ್ಯ ತುಂಬಿದಾರೆ. ನ್ಯೂರಾಲಜಿಸ್ಟ್ ಕೂಡ ಒಂದಷ್ಟು ಸಲಹೆ ನೀಡಿದಾರೆ. ಬ್ಲಡ್ ರಿಪೋರ್ಟ್ ಸೇರಿ ಎಲ್ಲಾ ರಿಪೋರ್ಟ್​ಗಳು ಪಾಸಿಟಿವ್ ಆಗಿಯೇ ಬಂದಿವೆ. ಅಭಿಮಾನಿಗಳು ಕೂಡ ನಮ್ಮ ನಿವಾಸದ ಬಳಿ ಬಂದಿದಾರೆ. ಇಂತಹ ಟೈಮಲ್ಲಿ ನಮಗೆ ಧೈರ್ಯ ಹೇಳ್ತಿದಾರೆ. ಅವರ ಪ್ರೀತಿಗೆ ಸದಾ ಚಿರರುಣಿ ಆಗಿರುತ್ತೇನೆ ಎಂದಿದ್ದಾರೆ.
ಇನ್ನೂ, ಸುದ್ದಿಗಾರರೊಂದಿಗೆ ಮಾತಾಡಿ ಕಾರಿನಲ್ಲಿ ಹೊರಡುತ್ತಿದ್ದ ಶಿವರಾಜ್​ ಕುಮಾರ್​ ಹಾಗೂ ಪತ್ನಿ ಗೀತಕ್ಕ ಕಣ್ಣೀರು ಹಾಕುತ್ತಲೇ ಹೋಗಿದ್ದಾರೆ. ಒಂದೇ ಕಾರಿನಲ್ಲಿ ಕುಳಿತುಕೊಂಡಿದ್ದ ಶಿವಣ್ಣ ಹಾಗೂ ಗೀತಕ್ಕ ಅಭಿಮಾನಿಗಳಿಗೆ, ಕುಟುಂಬಸ್ಥರಿಗೆ ಬಾಯ್​​ ಹೇಳಿ ಅಳುತ್ತಾ ಅಲ್ಲಿಂದ ಹೊರಟು ಹೋಗಿದ್ದಾರೆ. ಇದೇ ವೇಳೆ ಅಭಿಮಾನಿಗಳು ಕೂಡ ಶಿವಣ್ಣ ಅವರಿಗೆ ಜೈಕಾರ ಹಾಕಿದ್ದಾರೆ. ಬೇಗ ಹುಷಾರಾಗಿ ಬನ್ನಿ ಅಣ್ಣ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us