newsfirstkannada.com

ರೋಹಿತ್​, ವಿರಾಟ್​ರಂತ ವಿಶ್ವ ಶ್ರೇಷ್ಠ ದಿಗ್ಗಜರ​ ಮುಂದೆ ಇಂಗ್ಲೆಂಡ್ ಹೊಸ ದಾಳ.. ಪಾಕ್​ ಮೂಲದ ಯಂಗ್ ಪ್ಲೇಯರ್​ಗೆ ಚಾನ್ಸ್​

Share :

Published January 21, 2024 at 2:50pm

    ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನ ಆಡದ ಅನುಭವವಿಲ್ಲ

    ಮೊಯಿನ್​, ಆದಿಲ್​ ರಶೀದ್​​ರ ಸ್ಥಾನ ತುಂಬುವರೇ ಯಂಗ್ ಸ್ಟಾರ್.!

    ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಅನುಭವವೇ ಇಲ್ಲದ ಯುವಕ

ಇಂಡೋ -ಇಂಗ್ಲೆಂಡ್​ ಟೆಸ್ಟ್​​ ಸರಣಿ ಆರಂಭಕ್ಕೂ ಮುನ್ನ ಎಲ್ಲರಲ್ಲೂ ಅಚ್ಚರಿ, ಆಶ್ಚರ್ಯ, ಕುತೂಹಲದ ಪ್ರಶ್ನೆಯೇ ತುಂಬಿವೆ. ಕ್ರಿಕೆಟ್​ ಎಕ್ಸ್​ಪರ್ಟ್​ಗಳು, ಮಾಜಿ ಕ್ರಿಕೆಟರ್ಸ್​​, ಅಭಿಮಾನಿಗಳು ಎಲ್ಲರೂ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಕೂಡ ಸ್ಪಲ್ಪ ಟೆನ್ಶನ್​ಗೊಳಗಾಗಿದೆ. ಇದಕ್ಕೆಲ್ಲ ಕಾರಣ 20 ವರ್ಷದ ಯುವ ಸ್ಪಿನ್ನರ್​. ಯಾರು ಆ ಸ್ಪಿನ್ನರ್​, ಏನಿದು ಕಥೆ?.

ಕಳೆದ ವರ್ಷ ಸೌತ್​ ಆಫ್ರಿಕಾದ ಕೇಪ್​ಟೌನ್​ನಲ್ಲಿ ಟೆಸ್ಟ್​ ಗೆದ್ದು ಇತಿಹಾಸ ರಚಿಸಿದ ಟೀಮ್​ ಇಂಡಿಯಾ, ಹೊಸ ವರ್ಷದ ಮೊದಲ ಟೆಸ್ಟ್​​ಗೆ ಸಜ್ಜಾಗ್ತಿದೆ. ತವರಿನಂಗಳದಲ್ಲಿ ನಡೆಯೋ ಟೆಸ್ಟ್​ ಸರಣಿಯಲ್ಲಿ ಆಂಗ್ಲರ ಎದುರು ದಿಗ್ವಿಜಯ ಸಾಧಿಸೋ ಛಲ ತಂಡದಲ್ಲಿದೆ. ಆಟಗಾರರು ಕೂಡ ಹೊಸ ಹುರುಪಿನಲ್ಲಿ ತಯಾರಾಗಿದ್ದಾರೆ. ಆದ್ರೆ, ಟೀಮ್​ ಮ್ಯಾನೇಜ್​ಮೆಂಟ್ ಎದುರಾಳಿ ತಂಡವನ್ನ ನೋಡಿ ಸ್ವಲ್ಪ ಗೊಂದಲಕ್ಕೆ ಒಳಗಾಗಿದೆ.

ಭಾರತದ ನೆಲದಲ್ಲಿ ಟೆಸ್ಟ್​​ ಸರಣಿ ಗೆದ್ದು ಬೀಗಲು ಇಂಗ್ಲೆಂಡ್​ ತಂಡ ಈ ಬಾರಿ ಮಾಸ್ಟರ್​ ಪ್ಲಾನ್​ ರೂಪಿಸಿದೆ. ತಂಡದ ಆಯ್ಕೆಯಲ್ಲೇ ಆಂಗ್ಲ ಪಡೆ ಹೊಸ ತಂತ್ರ ಹೆಣೆದಿದೆ. ಹೇಳಿ ಕೇಳಿ ಭಾರತದ ಪಿಚ್​ಗಳು ಸ್ಪಿನ್​ಗೆ ಹೆಚ್ಚು ಸಹಕಾರಿ. ಹೀಗಾಗಿ ಸ್ಪಿನ್​ ಪಿಚ್ ಲಾಭವನ್ನ ಪಡೆಯಲು ಇಂಗ್ಲೆಂಡ್​ ಹೊಸ ದಾಳ ಉರುಳಿಸಿದೆ.

ತಂಡದಲ್ಲಿ 20 ವರ್ಷದ ಸ್ಪಿನ್ನರ್, ಎಲ್ಲರಿಗೂ ಅಚ್ಚರಿ.!

ಬೆನ್​ ಸ್ಟೋಕ್ಸ್​ ನೇತೃತ್ವದ 16 ಆಟಗಾರರ ತಂಡವನ್ನ ಭಾರತದ ವಿರುದ್ಧದ ಟೆಸ್ಟ್​ ಸರಣಿಗೆ ಆಯ್ಕೆ ಮಾಡಲಾಗಿದೆ. ಈ 16 ಮಂದಿಯ ಪೈಕಿ ಒಬ್ಬನ ಆಯ್ಕೆ ಎಲ್ಲರು ಬಾಯಿ ಮೇಲೆ ಬೆರಳಿಟ್ಟುಕೊಂಡು ಯೋಚಿಸುವಂತೆ ಮಾಡಿದೆ. ಯಾಕಂದ್ರೆ, ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಯಂತಹ ವಿಶ್ವ ಶ್ರೇಷ್ಠ ಆಟಗಾರರನ್ನ ಹೊಂದಿರೋ ಟೀಮ್​ ಇಂಡಿಯಾವನ್ನ ಎದುರಿಸಲು ಕೇವಲ 20ರ ಅನಾನುಭವಿಗೆ ಆಂಗ್ಲ ಪಡೆ ಮಣೆ ಹಾಕಿದೆ.

ಇಂಗ್ಲೆಂಡ್​ ತಂಡದ ಮಣೆ ಹಾಕಿರುವ ಯುವ ಸ್ಪಿನ್ನರ್​​ ಹೆಸರು ಶೋಯೆಬ್​ ಬಶೀರ್​ ಅಂತ. ಇಂಟರೆಸ್ಟಿಂಗ್​ ವಿಚಾರ ಏನಪ್ಪಾ ಅಂದ್ರೆ, ಈ ಯಂಗ್​ ಟ್ಯಾಲೆಂಟ್​​ಗೆ ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯವನ್ನ ಆಡಿದ ಅನುಭವವೇ ಇಲ್ಲ. ಆದ್ರೂ, ಇಂಗ್ಲೆಂಡ್​ ತಂಡದಲ್ಲಿ ಚಾನ್ಸ್​ ಸಿಕ್ಕಿರೋದ್ರ ಹಿಂದಿನ ಸೀಕ್ರೆಟ್​​, ಸ್ಪಿನ್​ ಫ್ರೆಂಡ್ಲಿ ಕಂಡೀಷನ್ಸ್​​. ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗೋ ಪಿಚ್​ನಲ್ಲಿ ಈ ಫಿಂಗರ್ ಸ್ಪಿನ್ನರ್​ ತಂಡದ ಬಲ ಹೆಚ್ಚಿಸ್ತಾರೆ ಅನ್ನೋದು ಆಯ್ಕೆ ಹಿಂದಿನ ಲೆಕ್ಕಾಚಾರ.

ಶಾಕಿಂಗ್ ಎಂಟ್ರಿ ಕೊಟ್ಟ ಈ​ ಶೋಯೆಬ್​ ಬಶೀರ್​ ಯಾರು.?

ಇಂಗ್ಲೆಂಡ್​ ತಂಡಕ್ಕೆ ಆಯ್ಕೆಯಾದ ಮೇಲೆ ನಿಮಗೂ ಈ ಪ್ರಶ್ನೆ​ ಕಾಡಿರುತ್ತೆ. ಈ ಶೋಯೇಬ್​ ಬಶೀರ್ ಕುಟುಂಬದ ಮೂಲ ಪಾಕಿಸ್ತಾನ. ಆದ್ರೆ, ಈ ಯಂಗ್​ ಟ್ಯಾಲೆಂಟ್​​ ಹುಟ್ಟಿದ್ದು ಬೆಳೆದಿದ್ದು ಇಂಗ್ಲೆಂಡ್​ನಲ್ಲಿ. ಸರ್ರೆಯಲ್ಲಿ ಹುಟ್ಟಿದ ಈತನಿಗೆ ಅಲ್ಲಿನ ಕೌಂಟಿ ತಂಡದಲ್ಲಿ ಚಾನ್ಸ್​ ಸಿಗಲಿಲ್ಲ. ಅಂತಿಮವಾಗಿ ಸಾಮರ್​​ಸೆಟ್​​​​ ತಂಡದಲ್ಲಿ ಅವಕಾಶದ ಬಾಗಿಲು ತೆರೆಯಿತು. ಅಲ್ಲಿ ನೀಡಿದ ಪರ್ಫಾಮೆನ್ಸ್​ ಇಂಗ್ಲೆಂಡ್​ ಪರ ಚಾನ್ಸ್​ ಸಿಗುವಂತೆ ಮಾಡಿದೆ.

ಯಾರು ಈ ಶೋಯೆಬ್​ ಬಶೀರ್.?

  • ಸರ್ರೆ ಪರ ಏಜ್​ ಗ್ರೂಪ್​ ಕ್ರಿಕೆಟ್​ನಲ್ಲಿ ಆಡಿದ್ದ ಬಶೀರ್​
  • ಸರ್ರೆ ಪರ ಸಿಗದ ಅವಕಾಶ, ಸಾಮರ್​​ಸೆಟ್​ ತಂಡಕ್ಕೆ ವಲಸೆ
  • 2023ರ ಸೀಸನ್​ ಆರಂಭಕ್ಕೂ ಮುನ್ನ 1 ವರ್ಷಕ್ಕೆ ಒಪ್ಪಂದ
  • ಸಾಮರ್​​ಸೆಟ್​ ಪರ ಫಸ್ಟ್​ಕ್ಲಾಸ್​ ಕ್ರಿಕೆಟ್​ಗೆ ಪದಾರ್ಪಣೆ
  • ಸೀಸನ್​ನಲ್ಲಿ​ ಉತ್ತಮ ಪ್ರದರ್ಶನ, ಒಪ್ಪಂದದ ಅವಧಿ ವಿಸ್ತರಣೆ
  • 6 ಫಸ್ಟ್​ಕ್ಲಾಸ್​ ಪಂದ್ಯದಲ್ಲಿ 10 ವಿಕೆಟ್​​ ಕಬಳಿಸಿರುವ ಸ್ಪಿನ್ನರ್​
  • ನೇಲ್​ ವ್ಯಾಗ್ನರ್​, ಮ್ಯಾಟ್​ ಹೆನ್ರಿ, ಇಶ್​ ಸೋದಿ ಜೊತೆ ಆಟ

ಇದು ಗೇಮ್​​ಪ್ಲಾನಾ..? ಮೈಂಡ್​ ಗೇಮಾ..?

ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಶೋಯೆಬ್​ ಬಶೀರ್​, ಒಬ್ಬ ಸಾಮಾನ್ಯ ಆಫ್​ ಸ್ಪಿನ್ನರ್​. ಟ್ರ್ಯಾಕ್​ ರೆಕಾರ್ಡ್​ ಕೂಡ ಅದ್ಭುತ ಅನ್ನುವಂತೇನು ಇಲ್ಲ. ಹಾಗಿದ್ರೂ, ಇಂಗ್ಲೆಂಡ್​ ತಂಡದಲ್ಲಿ ಪ್ರಮುಖ ಪ್ರವಾಸದ ತಂಡದಲ್ಲಿ ಸ್ಥಾನ ಸಿಕ್ಕಿದೆ. ಇದನ್ನ ಗೇಮ್​ಪ್ಲಾನ್​ ಅನ್ನೋದಕ್ಕಿಂತ ಮೈಂಡ್​ಗೇಮ್ ಎಂದೇ ಹೇಳಬಹುದು. ಅದ್ರ ಜೊತೆಗೆ ದಿಗ್ಗಜ ಸ್ಪಿನ್ನರ್​ಗಳಾದ ಮೊಯಿನ್​ ಅಲಿ, ಆದಿಲ್​ ರಶೀದ್​​ರ ಸ್ಥಾನ ತುಂಬಲು ಈತನನ್ನ ಇಂಗ್ಲೆಂಡ್​ ಸೆಲೆಕ್ಟ್​ ಮಾಡಿದೆ ಅನ್ನೋ ಟಾಕ್​ ಕೂಡ ಇದೆ. ಪಾಕ್​ ಮೂಲದವರಾದ ಇವ್ರು, ಇಂಗ್ಲೆಂಡ್​ನಲ್ಲಿ ಸಕ್ಸಸ್​ ಕಂಡ್ರು. ಅವರಂತೆ ಈ ಯಂಗ್​ಸ್ಪಿನ್ನರ್​​ಗೆ ಯಶಸ್ಸು ದಕ್ಕುತ್ತಾ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್​, ವಿರಾಟ್​ರಂತ ವಿಶ್ವ ಶ್ರೇಷ್ಠ ದಿಗ್ಗಜರ​ ಮುಂದೆ ಇಂಗ್ಲೆಂಡ್ ಹೊಸ ದಾಳ.. ಪಾಕ್​ ಮೂಲದ ಯಂಗ್ ಪ್ಲೇಯರ್​ಗೆ ಚಾನ್ಸ್​

https://newsfirstlive.com/wp-content/uploads/2024/01/VIRAT_KOHLI_ROHIT-1.jpg

Load More