newsfirstkannada.com

ಸಾನಿಯಾ ಮಿರ್ಜಾಗೆ ಕೈಕೊಟ್ಟ ಶೋಯೆಬ್ ಮಲಿಕ್; 2 ದಿನಗಳ ಹಿಂದಷ್ಟೇ ನಿಗೂಢ ಪೋಸ್ಟ್ ಮಾಡಿದ್ದ ಟೆನಿಸ್ ತಾರೆ

Share :

Published January 20, 2024 at 12:35pm

Update January 20, 2024 at 12:38pm

    ಮಾಜಿ ಸ್ಟಾರ್ ಕ್ರಿಕೆಟರ್ ಶೋಯೆಬ್ ಮಲಿಕ್​​ಗೆ 2ನೇ ಮದುವೆ

    ಪಾಕ್​ನ ಜನಪ್ರಿಯ ನಟಿ ಸನಾ ಜಾವೇದ್ ಜೊತೆ ಮದುವೆ

    ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ ಮಲಿಕ್

ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್ ಶೋಯೆಬ್ ಮಲಿಕ್ ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ಕೈಕೊಟ್ಟಿದ್ದಾರೆ. ಪಾಕ್​ನ ಜನಪ್ರಿಯ ನಟಿ ಸನಾ ಜಾವೇದ್​​ರನ್ನು ಮದುವೆ ಆಗಿದ್ದು, ಇಬ್ಬರಿಗೂ ಇದು ಎರಡನೇ ಮದುವೆ ಆಗಿದೆ. ಮಲಿಕ್ ಮದುವೆ ಬೆನ್ನಲ್ಲೇ ಸಾನಿಯಾ ಮಿರ್ಜಾ ಕತೆ ಮುಂದೆ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಸನಾ ಜಾವೇದ್ ಅವರನ್ನು ಮಲಿಕ್ ಮದೆವೆಯಾಗಿದ್ದು, ವಿವಾಹದ ಬಳಿಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೋಯೆಬ್ ಮಲಿಕ್ ಮತ್ತು ಸನಾ ಜಾವೇದ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಮೊದಲಿನಿಂದಲೂ ಇದ್ದವು.

ಸನಾ ಜಾವೇದ್ ಜೊತೆ ಮಲಿಕ್ ಮದುವೆ ಆಗಿರೋದು ಅಭಿಮಾನಿಗಳಿಗೆ ಬಿಗ್ ಶಾಕ್ ಆಗಿದೆ. ಸಾನಿಯಾ ಮಿರ್ಜಾ ಅಭಿಮಾನಿಗಳು ಕೂಡ ದಿಗ್ಭ್ರಮೆ ಹೊಂದಿದ್ದಾರೆ. ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ 2010ರಲ್ಲಿ ಹೈದರಾಬಾದ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ 2018ರಲ್ಲಿ ಇಜಾನ್ ಎಂಬ ಗಂಡು ಮಗು ಜನಿಸಿದೆ.

ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಡಿವೋರ್ಸ್​ ಬಗ್ಗೆ ವರ್ಷಗಳಿಂದ ವದಂತಿ ಇದ್ದರೂ ಯಾರೊಬ್ಬರೂ ಕೂಡ ಮಾಹಿತಿ ನೀಡಿಲ್ಲ. ಬುಧವಾರ ಸಾನಿಯಾ ಮಿರ್ಜಾ ಸೋಶಿಯಲ್ ಮೀಡಿಯಾದಲ್ಲಿ ನಿಗೂಢ ಪೋಸ್ಟ್ ಒಂದನ್ನು ಹಾಕಿದ್ದರು. ಅದು ವಿಚ್ಛೇದನಕ್ಕೆ ಸಂಬಂಧಿಸಿದ ವದಂತಿಯನ್ನು ಮತ್ತೆ ಹಬ್ಬಿಸಿತ್ತು. ಕಳೆದ ವರ್ಷ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ತಮ್ಮ ಮಗನ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿಕೊಂಡಿದ್ದರು. ಆ ಬಳಿಕ ಇಬ್ಬರ ಮಧ್ಯೆ ಡಿವೋರ್ಸ್​ಗೆ ಸಂಬಂಧಿಸಿದ ಗಾಸಿಪ್ ಕಮ್ಮಿಯಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾನಿಯಾ ಮಿರ್ಜಾಗೆ ಕೈಕೊಟ್ಟ ಶೋಯೆಬ್ ಮಲಿಕ್; 2 ದಿನಗಳ ಹಿಂದಷ್ಟೇ ನಿಗೂಢ ಪೋಸ್ಟ್ ಮಾಡಿದ್ದ ಟೆನಿಸ್ ತಾರೆ

https://newsfirstlive.com/wp-content/uploads/2023/08/sania-mirza-and-Shoaib-malik.jpg

Load More