newsfirstkannada.com

ಸಾನಿಯಾ ಮಿರ್ಜಾ ಪತಿಗೆ ಇನ್ನೊಂದು ಮದುವೆ.. ಇಂಟರ್​​ನೆಟ್​ನಲ್ಲಿ ಜನರ ರಿಯಾಕ್ಟ್ ಹೇಗಿದೆ..!

Share :

Published January 20, 2024 at 1:48pm

Update January 20, 2024 at 2:02pm

    ನಟಿ ಸನಾ ಜಾವೇದ್​​ರನ್ನು ವರಿಸಿದ ಶೋಯೆಬ್ ಮಲಿಕ್

    ಶೋಯೆಬ್ ಮಲಿಕ್​​ರಿಂದ ದೂರ ಇರುವ ಸಾನಿಯಾ ಮಿರ್ಜಾ

    ಸನಾ ಜಾವೇದ್ ಪಾಕಿಸ್ತಾನದ ಟ್ರೆಂಡಿಂಗ್ ನಟಿ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಡಿವೋರ್ಸ್ ವದಂತಿಗಳ ಮಧ್ಯೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್​ ಇನ್ನೊಂದು ಮದುವೆ ಆಗಿರುವ ಫೋಟೋ ಪಾಕಿಸ್ತಾನದಲ್ಲಿ ಹಲ್​ಚೆಲ್ ಎಬ್ಬಿಸಿದೆ. ಪಾಕ್​​ನ ಖ್ಯಾತ ನಟಿ ಸನಾ ಜಾವೇದ್​​ರನ್ನು ಮದುವೆ ಆಗಿದ್ದಾರೆ. ಈ ಬಗ್ಗೆ ಖುದ್ದು ಮಲಿಕ್ ಅವರೇ ಸೋಶಿಯಲ್ ಮೀಡಿಯಾ ಮೂಲದ ಮಾಹಿತಿ ನೀಡಿದ್ದಾರೆ.

ಯಾವಾಗ ಮಲಿಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮದುವೆ ಆಗಿರುವ ಎರಡು ಫೋಟೋಗಳನ್ನು ಹಂಚಿಕೊಂಡು ಅಧಿಕೃತ ಮಾಹಿತಿ ನೀಡಿದರೋ, ಆಗಲೇ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ. ಪೋಸ್ಟ್ ನೋಡುತ್ತಿದ್ದಂತೆಯೇ ತಮ್ಮದೇ ರೀತಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ.

ಸನಾ ಜಾವೇದ್ 1993 ಜೂನ್ 6 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಪಾಕಿಸ್ತಾನ ದಂಪತಿಗೆ ಜನಿಸಿದರು. ಜೆಡ್ಡಾದಲ್ಲೇ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಶಾಲಾ, ಕಾಲೇಜ್ ಪೂರ್ಣಗೊಳಿಸಿದರು. ಇದರ ಬಳಿಕ ದಂಪತಿ ಮಗಳ ವಿದ್ಯಾಭ್ಯಾಸಕ್ಕಾಗಿ ಪಾಕ್​ನ ಕರಾಚಿಗೆ ಬಂದು ನೆಲಸಿದರು. ಕರಾಚಿ ವಿಶ್ವವಿದ್ಯಾಲಯದಿಂದ ಸನಾ ಜಾವೇದ್ ಪದವಿ ಪಡೆದರು ಎಂದು ಹೇಳಲಾಗಿದೆ.

ಮಾಡೆಲಿಂಗ್ ಮಾಡ್ತಿದ್ದ ಸನಾ ದೂರದರ್ಶನದ ಜಾಹೀರಾತುಗಳಲ್ಲಿ ಮೊದಲು ಕಾಣಿಸಿಕೊಂಡರು. ಇದಾದ ಬಳಿಕ 2012ರಲ್ಲಿ ಮೇರಾ ಪೆಹ್ಲಾ ಪ್ಯಾರ್‌ನಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದರು. ಇದರಲ್ಲಿ ಸಕ್ಸಸ್​ ಆದ ತಕ್ಷಣ ಅದೇ ವರ್ಷದಲ್ಲಿ ಶೆಹರ್-ಎ-ಝಾತ್‌ನಲ್ಲಿ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದರು. 2016ರಲ್ಲಿ ಜರಾ ಯಾದ್ ಕರ್‌ ಟಿವಿ ಶೋನಲ್ಲಿ ನಟಿಸಿ ಜಾಹಿದ್ ಅಹ್ಮದ್ ಮತ್ತು ಯುಮ್ನಾ ಜೈದಿ ಎದುರು ಪ್ರತಿಸ್ಪರ್ಧಿ ಪಾತ್ರದಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾನಿಯಾ ಮಿರ್ಜಾ ಪತಿಗೆ ಇನ್ನೊಂದು ಮದುವೆ.. ಇಂಟರ್​​ನೆಟ್​ನಲ್ಲಿ ಜನರ ರಿಯಾಕ್ಟ್ ಹೇಗಿದೆ..!

https://newsfirstlive.com/wp-content/uploads/2024/01/SANIA-2.jpg

Load More