newsfirstkannada.com

ರಾಜ್ಯದ 28 ಕ್ಷೇತ್ರವನ್ನೂ ಗೆಲ್ತೀವಿ ಎನ್ನುತ್ತಲೇ ಸಿಟಿ ರವಿಗೆ ಟಾಂಗ್ ಕೊಟ್ಟ ಶೋಭಾ ಕರಂದ್ಲಾಜೆ

Share :

Published March 13, 2024 at 11:36am

    ಟಿಕೆಟ್​ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

    ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದ ಕರಂದ್ಲಾಜೆ

    ವಿಜಯಪುರದಲ್ಲಿ ಸಿಟಿ ರವಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ

ವಿಜಯಪುರ: ಈ ಬಾರಿ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಮತದಾರರು ಮೋದಿಯವರನ್ನ ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತೇವೆ. ನಮ್ಮ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಆಧಾರದ ಮೇಲೆ ಓಟು ಕೇಳ್ತೇವೆ. ಯಾರಿಗೆ ಟಿಕೇಟ್ ಕೊಟ್ಟರು ಕೆಲಸ ಮಾಡ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಟಿಕೇಟ್ ವಿಚಾರದಲ್ಲಿ ಗೊಂದಲ‌ ಇರೋದು ನಿಜ. ನಮ್ಮದು ಸಂಘ ಪರಿವಾರ ಗಟ್ಟಿ ಇರುವ ಜಿಲ್ಲೆ‌. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೇಟ್ ಕೊಟ್ಟರು ಗೆಲ್ಲಬಹುದು. ಹೀಗಾಗಿ ಬೇರೆಯವರು ಟಿಕೇಟ್ ಕೇಳ್ತಿದ್ದಾರೆ. ನನಗೆ ಎರಡು ಬಾರಿ ಟಿಕೇಟ್ ಕೊಟ್ಟಿದ್ದಾರೆ. ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಇನ್ನೊಬ್ಬರಿಗೆ ಅವಮಾನ ಮಾಡಿ ಟಿಕೇಟ್ ಕೇಳಬಾರದು. ಅದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಕೇಂದ್ರ ಸಚಿವೆ ಆರೋಪಿಸಿದ್ದಾರೆ.

ವಿರೋಧಿಗಳ ವಿರುದ್ಧ ಕಿಡಿಕಾರಿದ ಶೋಭಾ

ಬೇಸರ ಹೊರಹಾಕಿದ ಶೋಭಾ ಕರಂದ್ಲಾಜೆ. ಟಿಕೇಟ್ ತೆಗೆದುಕೊಳ್ಳಲು ನನ್ನ ವಿರುದ್ಧ ಷಡ್ಯಂತ್ರ ಮಾಡ್ತಿದ್ದಾರೆ. ನನ್ನ ವಿರುದ್ಧ ಕಾರ್ಯಕರ್ತರು ಅಲ್ಲ ವ್ಯವಸ್ಥಿತವಾಗಿ ಒಂದು ಗುಂಪು ವಿರೋಧ ಮಾಡ್ತಿದೆ. ಇದರಿಂದ ನಾನು ವಿಚಲಿತಳಾಗಿಲ್ಲ ಎಂದು ಹೇಳಿದ್ದಾರೆ.

ತಮ್ಮ ಸೋಲನ್ನ ಇನ್ನೊಬ್ಬರ ಮೇಲೆ ಹೊರಿಸಬಾರದು

ಸಿಟಿ ರವಿ ದೆಹಲಿಗೆ ತೆರಳಿರುವ ವಿಚಾರವಾಗಿ ಮಾತನಾಡಿರುವ ಶೋಭಾ ಕರಂದ್ಲಾಜೆ, ಸಿ ಟಿ ರವಿ ಅಪೇಕ್ಷೆ ಪಟ್ಟರು ತಪ್ಪಲ್ಲ. ಸಿ ಟಿ ರವಿ ಟಿಕೇಟ್ ಕೇಳಿರೋದು ನಿಜ. ಕಾರ್ಯಕರ್ತರು ನನ್ನ ವಿರೋಧ ಮಾಡ್ತಿಲ್ಲ, ಒಂದು ಗುಂಪು ವಿರೋಧ ಮಾಡ್ತಿದೆ. ಹೆತ್ತ ತಾಯಿಗೆ ದ್ರೋಹ ಮಾಡಲ್ಲ, ನಾನು ಹಿಂದೆ ಯಾರಿಗೂ ವಿರೋಧ ಮಾಡಿಲ್ಲ. ತಮ್ಮ ಸೋಲನ್ನ ಇನ್ನೊಬ್ಬರ ಮೇಲೆ ಹೊರಿಸಬಾರದು ಎಂದು ಸಿಟಿ ರವಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಶೋಭಾ ಆಕ್ರೋಶ

ರಾಜ್ಯ ಸರ್ಕಾರ ಕೃಷಿಕರನ್ನ ಮರೆತಿದೆ. ಬ್ಯಾಡಗಿ ಮೆಣಸಿನಕಾಯಿ, ಈರುಳ್ಳಿ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಗ್ಯಾರಂಟಿ ಕೊಟ್ಟು ಸರ್ಕಾರ ರೈತರಿಗೆ ಅನ್ಯಾಯ ಮಾಡ್ತಿದೆ. ರಾಜ್ಯ ಪ್ರಪೋಸಲ್ ಕಳಿಸಬೇಕು ಕಳಿಸ್ತಿಲ್ಲ. ಕೇಂದ್ರ ರೈತರ ಬೆನ್ನೆಲುಬಾಗಿ ನಿಲ್ಲಲು ರೆಡಿ ಇದೆ. ನಮ್ಮ ಬಳಿ ದುಡ್ಡು ಇದೆ. ನಾವು ಕೋಲ್ಡ್ ಸ್ಟೋರೆಜ್ ಮಾಡಿಕೊಳ್ಳಲು ಒಂದು ಲಕ್ಷ ಕೋಟಿ ಇಟ್ಟಿದ್ದೇವೆ. ಇದಕ್ಕಾಗಿ ಯಾರು ಪ್ರಪೋಸಲ್ ಸಲ್ಲಿಕೆ ಮಾಡಿದ್ದಾರೆ? ರಾಜ್ಯದಿಂದ ಪ್ರಪೋಸಲ್ ಬರ್ತಿಲ್ಲ. ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ ಇಲ್ಲ. ಗ್ಯಾರಂಟಿ ಬೆನ್ನು ಬಿದ್ದಿದ್ದಾರೆ. ಸಿಎಂಗೆ ಆಸಕ್ತಿ ಇದೆಯಾ? ಡಿಸಿಎಂ ಗೆ ಆಸಕ್ತಿ ಇದೆಯಾ?. ರಾಜ್ಯ ಸರ್ಕಾರದ ವೈಫಲ್ಯ ಇದೆ ಎಂದು ಹೇಳಿದ್ದಾರೆ.

ತಮಿಳುನಾಡಿಗೆ ನೀರು ಬಿಡ್ತಿದ್ದಾರೆ

ಬೆಂಗಳೂರಲ್ಲಿ ಕುಡಿಯೋಕೆ ನೀರಿಲ್ಲ. ತಮಿಳುನಾಡಿಗೆ ನೀರು ಬಿಡ್ತಿದ್ದಾರೆ. ಸಿಎಂ ಜೊತೆಗೆ ಮೀಟಿಂಗ್ ಗೆ ನಾವು ಹೋಗಿದ್ವಿ. ಅಲ್ಲಿ ಮೀಟಿಂಗಲ್ಲಿ ಪಾಲ್ಗೊಳ್ತಾರೆ, ಇಲ್ಲಿ ಬಂದು ನೀರು ಬಿಡ್ತಾರೆ. ನಮ್ಮ ಜಲಾಶಯದಲ್ಲಿ ನೀರಿಲ್ಲ ತಮಿಳುನಾಡಿಗೆ ಬಿಟ್ರು. ಮೀಟಿಂಗ್ ನಡೆಯುತ್ತಿರುವಾಗಲೇ ಹಿಂದಿನಿಂದ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಗೆಲ್ಲಿಸೋದು ನಮ್ಮ ಗುರಿ

ಈಶ್ವರಪ್ಪ ಪುತ್ರ, ಪ್ರತಾಪ್ ಸಿಂಹ ಟಿಕೇಟ್ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವೆ, ಹಿರಿಯರು ತೀರ್ಮಾನ ಮಾಡ್ತಾರೆ. ನಮಗೆ ಮೋದಿ ಕ್ಯಾಂಡಿಡೇಟ್. ಅಸಮಧಾನ ಶಮನ ಮಾಡ್ತಾರೆ. ಟಿಕೇಟ್ ನೀಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಸರ್ವೆ ಮಾಡಿ ಟಿಕೇಟ್ ಕೊಡ್ತಾರೆ. ಟಿಕೆಟ್ ಸಿಗಲಿ ಬಿಡಲಿ, ಮೋದಿ ಗೆಲ್ಲಿಸೋದು ನಮ್ಮ ಗುರಿ ಎಂದ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಘೋಷಿತ ಅಭ್ಯರ್ಥಿ ಪರವಾಗಿ ಕೆಲ್ಸ ಮಾಡ್ತೀನಿ

ಘೋಷಿತ ಅಭ್ಯರ್ಥಿ ಪರವಾಗಿ ಕೆಲ್ಸ ಮಾಡ್ತೀನಿ. ಯುಪಿಎ ಸರ್ಕಾರ ಗೊಟಾಲಾ ಸರ್ಕಾರ ಎನ್ನುವ ಪರಿಸ್ಥಿತಿ. ವಿದೇಶಗಳಲ್ಲಿ ಪ್ರಧಾನಿಗಳಿಗೆ ಎದ್ದುನಿಂತು ಮರ್ಯಾದೆ ಕೊಡ್ತಿರಲಿಲ್ಲ, ನಮಗೆ ದುಃಖ ಎನಿಸುತ್ತಿತ್ತು. ದೇಶದ ಗಡಿ, ಆಂತರಿಕ ಭದ್ರತೆ, ಸ್ವಾವಲಂಬಿ ಸೈನ್ಯವಾಗಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೆ ತಂದಿದ್ದಾರೆ. ರಾಗಿ, ಜೋಳಕ್ಕೆ ಅಂತರಾಷ್ಟ್ರೀಯ ಮಾನ್ಯತೆ ಕೊಡಿಸಿದ್ದು ಮೋದಿ. ಪ್ರಪಂಚದ ಯಾವುದೇ ಮೂಲೆಗೆ ಹೋದರು ಮರ್ಯಾದೆ ಸಿಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ 28 ಕ್ಷೇತ್ರವನ್ನೂ ಗೆಲ್ತೀವಿ ಎನ್ನುತ್ತಲೇ ಸಿಟಿ ರವಿಗೆ ಟಾಂಗ್ ಕೊಟ್ಟ ಶೋಭಾ ಕರಂದ್ಲಾಜೆ

https://newsfirstlive.com/wp-content/uploads/2024/03/Shobha-Karandlaje.jpg

Load More