newsfirstkannada.com

ಶೋಭಾ ಕರಂದ್ಲಾಜೆ ಹೇಳಿಕೆಗೆ CM ಸ್ಟಾಲಿನ್ ಸಿಡಿಮಿಡಿ; ತಮಿಳುನಾಡಿಗರ ಕ್ಷಮೆ ಕೇಳಿದ ಕೇಂದ್ರ ಸಚಿವೆ..!

Share :

Published March 20, 2024 at 7:37am

Update March 20, 2024 at 7:43am

    ತಮಿಳುನಾಡಿಗರ ಆಕ್ರೋಶಕ್ಕೆ ಕಾರಣವಾಗಿರೋ ಶೋಭಾ ಹೇಳಿಕೆ ಯಾವುದು?

    ಕೊಳಕು ರಾಜಕಾರಣ ಮಾಡೋದನ್ನ ನಿಲ್ಲಿಸಬೇಕು ಎಂದ ಸ್ಟಾಲಿನ್

    ಹೇಳಿಕೆ ಬೆನ್ನಲ್ಲೇ ‘ತಮಿಳಿಗರಲ್ಲಿ’ ಕ್ಷಮೆಯಾಚಿಸಿದ ಕೇಂದ್ರ ಸಚಿವೆ

ಲೋಕಸಭಾ ಚುನಾವಣೆ ದಿನಾಂಕ ನಿಗದಿಗೊಂಡಿದೆ. ಈ ಸಮಯದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಮೇಶ್ವರ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನಿಂದ ಬಂದವರು ಬಾಂಬ್​ ಇಟ್ಟರು ಎಂಬ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ಇದೇ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಶೋಭಾ ಕರಂದ್ಲಾಜೆ ಮಾತನ್ನು ಖಂಡಿಸಿದ್ದು, ಟ್ವೀಟ್​ ಮಾಡುವ ಮೂಲಕ ಚಕಮಕಿ ನಡೆಸಿದ್ದಾರೆ.

ಏನಿದು ಘಟನೆ?

ಮಾರ್ಚ್​ 1ರಂದು ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರ ಕೆಫೆಯಲ್ಲಿ ದುಷ್ಕರ್ಮಿಯೊಬ್ಬ ಬಾಂಬ್​ ಇಟ್ಟಿದ್ದ. ಈ ಬಾಂಬ್​ ಮಧ್ಯಾಹ್ನದ ವೇಳೆ ಸಿಡಿದಿದೆ. ಇದರಲ್ಲಿ 10 ಮಂದಿ ಗಾಯಗೊಂಡಿದ್ದರು. ಇದೇ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನಿನ್ನೆ ಮಾತನಾಡಿದ್ದು, ತಮಿಳುನಾಡು ಮುಖ್ಯಮಂತ್ರಿ ವಿರುದ್ಧ ಹೇಳಿಕೆಯನ್ನು ನೀಡಿದ್ದರು.

ನಿಮ್ಮ ಸ್ಟಾಲಿನ್​ ಮೂಗಿನ ಕೆಳಗೆ

ಶೋಭಾ ಕರಂದ್ಲಾಜೆ ಮಾತನಾಡುತ್ತಾ, ರಾಮೇಶ್ವರಂ ಸ್ಫೋಟದ ಹಿಂದಿನ ಬಾಂಬರ್​ ತಮಿಳುನಾಡಿನ ಕೃಷ್ಣಗಿರಿ ಅರಣ್ಯದಲ್ಲಿ ‘‘ನಿಮ್ಮ ಸ್ಟಾಲಿನ್​ ಮೂಗಿನ ಕೆಳಗೆ’’ತರಬೇತಿ ಪಡೆದಿದ್ದಾನೆ ಎಂದು ಆರೋಪಿಸಿದ್ದರು. ಮಾತ್ರವಲ್ಲದೆ, ‘‘ತಮಿಳುನಾಡಿನ ಜನರು ಇಲ್ಲಿಗೆ ಬರುತ್ತಾರೆ, ಅಲ್ಲಿ ತರಬೇತಿ ಪಡೆಯುತ್ತಾರೆ ಮತ್ತು ಇಲ್ಲಿ ಬಾಂಬ್​ ಹಾಕುತ್ತಾರೆ. ಅವರು ಕೆಫೆಯಲ್ಲಿ ಬಾಂಬ್​ ಇರಿಸಿದ್ದಾರೆ’’ ಎಂದು ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದರು.

ಸಚಿವೆಯ ಹೇಳಿಕೆಯನ್ನು ಎಕ್ಸ್​ನಲ್ಲಿ ಹಂಚಿಕೊಂಡ ತಮಿಳುನಾಡು ಸಿಎಂ

ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಎಂ.ಕೆ ಸ್ಟಾಲಿನ್​ ಎಕ್ಸ್​ ಖಾತೆಯಲ್ಲಿ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಶೋಭಾರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಶೋಭಾ ಅವರನ್ನು ‘ಅಜಾಗರೂಕತೆ’ ಎಂದು ಹೇಳಿದ ಸ್ಟಾಲಿನ್,​ ‘ಎನ್​ಐಎ ಅಥವಾ ಪ್ರಕರಣ ಕುರಿತು ನಿಕಟ ಸಂಬಂಧ ಹೊಂದಿರುವವರು ಮಾತ್ರ ಇಂತಹ ಟೀಕೆ ಮಾಡುವ ಅಧಿಕಾರ ಹೊಂದಿರಬೇಕು’ ಎಂದು ಹೇಳಿದ್ದಾರೆ.

‘ಇಂತಹ ಸಮರ್ಥನೆಗೆ ಆಕೆಗೆ ಅಧಿಕಾರವಿಲ್ಲ. ತಮಿಳಿಗರು ಮತ್ತು ಕನ್ನಡಿಗರು ಬಿಜೆಪಿ ಈ ವಿಭಜನೆಯ ವಾಕ್ಚಾತುರ್ಯವನ್ನು ತಿರಸ್ಕಾರ ಮಾಡುತ್ತಾರೆ. ಶೋಭಾ ಅವರ ಹೇಳಿಕೆ ಶಾಂತಿ, ಸೌಹಾರ್ದತೆ, ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟು ಮಾಡಿದೆ. ಆಕೆ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ನಾನು ಒತ್ತಾಯಿಸುತ್ತೇನೆ’

‘ಪ್ರಧಾನಿಯಿಂದ ಕೇಡರ್​ವರೆಗೆ ಬಿಜೆಪಿ ಎಲ್ಲರೂ ಕೊಳಕು ರಾಜಕಾರಣ ಮಾಡೋದನ್ನು ನಿಲ್ಲಿಸಬೇಕು. ಐಸಿಐ ದ್ವೇಷದ ಭಾಷಣವನ್ನುಗಮನಿಸಿ ಕಠಿಣ ಕ್ರಮವನ್ನ ಜರುಗಿಸಬೇಕು’ ಎಂದು ತಮಿಳುನಾಡು ಸಿಎಂ ಟ್ವೀಟ್​ ಮಾಡಿದ್ದಾರೆ.

ಕ್ಷಮೆಯಾಚಿಸಿದ ಕೇಂದ್ರ ಸಚಿವೆ

ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ ಬಳಿಕ ಕ್ಷಮೆಯಾಚಿಸಿದ್ದಾರೆ. ‘ಎಲ್ಲಾ ನನ್ನ ತಮಿಳು ಸಹೋದರ ಸಹೋದರಿಯರೇ, ನನ್ನ ಮಾತುಗಳು ಕತ್ತಲನ್ನು ಮೂಡಿಸಲು ಅಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಮಾತುಗಳು ಕೆಲವರಿಗೆ ನೋವು ತಂದಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಟೀಕೆಗಳು ಕೇವಲ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರನ್ನು ಉದ್ದೇಶಿಸಿವೆ’ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ನಂತರ ‘ನನ್ನ ಹೇಳಿಕೆ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದೆ. ತಮಿಳುನಾಡಿದ ಯಾರಾದರೂ ಸರಿ ಅವರಿಗೆ ಹೃದಯದಾಳದಿಂದ ಕ್ಷಮೆ ಕೇಳುತ್ತೇನೆ. ನಾನು ಈ ಹಿಂದೆ ಮಾಡಿದ ಕಾಮೆಂಟ್​ ಹಿಂಪಡೆಯುತ್ತೇನೆ’ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಸ್ಟಾಲಿನ್​ ವಿರುದ್ಧ ಶೋಭಾ ಕರಂದ್ಲಾಜೆ ಟ್ವಿಟ್ಟಾಸ್ತ್ರ

ಎಂ.ಕೆ. ಸ್ಟಾಲಿನ್​ ವಿರುದ್ಧ ಟ್ವೀಟ್​ ಮಾಡಿರುವ ಶೋಭಾ ಕರಂದ್ಲಾಜೆ, ‘ನಿಮ್ಮ ಆಡಳಿತದಲ್ಲಿ ತಮಿಳುನಾಡು ಏನಾಯಿತು? ನಿಮ್ಮ ತುಷ್ಟೀಕರಣದ ರಾಜಕಾರಣ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಹಗಲು ರಾತ್ರಿ ದಾಳಿ ಮಾಡೋದನ್ನ ಉತ್ತೇಜಿಸಿದೆ. ಐಸಿಸಿನಂತದ ಭಯೋತ್ಪಾದನೆ ಸಂಘಟನೆಗಳ ಲಕ್ಷಣವಿರುವ ಬಾಂಬ್​ ಸ್ಪೋಟಗಳು ನೀವು ಕಣ್ಣು ಮುಚ್ಚಿದಾಗ ಸ್ಫೋಟಗೊಳ್ಳುತ್ತವೆ’ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೋಭಾ ಕರಂದ್ಲಾಜೆ ಹೇಳಿಕೆಗೆ CM ಸ್ಟಾಲಿನ್ ಸಿಡಿಮಿಡಿ; ತಮಿಳುನಾಡಿಗರ ಕ್ಷಮೆ ಕೇಳಿದ ಕೇಂದ್ರ ಸಚಿವೆ..!

https://newsfirstlive.com/wp-content/uploads/2024/03/Shobha-kharandlaje.jpg

Load More