Boys VS Girls.. ಮಂಜು ಪಾವಗಡ ಮೇಲೆ ಕೂಗಾಡಿದ ಶೋಭಾ ಶೆಟ್ಟಿ; ವೇದಿಕೆ ಮೇಲೆ ನಡೀತು ಬಿಗ್​​ ವಾರ್.. VIDEO!

author-image
Veena Gangani
Updated On
Boys VS Girls.. ಮಂಜು ಪಾವಗಡ ಮೇಲೆ ಕೂಗಾಡಿದ ಶೋಭಾ ಶೆಟ್ಟಿ; ವೇದಿಕೆ ಮೇಲೆ ನಡೀತು ಬಿಗ್​​ ವಾರ್.. VIDEO!
Advertisment
  • ವೇದಿಕೆ ಮೇಲೆ ಹೀಗೆ ಜೋರು ಧ್ವನಿಯಲ್ಲಿ ಮಾತಾಡಿದ್ದೇಕೆ?
  • ಮಂಜು ಪಾವಗಡ ವಿರುದ್ಧ ಕೆಂಡ ಕಾರಿದ ಶೋಭಾ ಶೆಟ್ಟಿ
  • ಶೋಭಾ ಶೆಟ್ಟಿ ಮಾತಿಗೆ ಮಂಜು ಪಾವಗಡ ಫುಲ್​ ಸೈಲೆಂಟ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11  ಮುಗಿಯುತ್ತಿದ್ದಂತೆ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಶುರುವಾಯ್ತು. ಹೊಚ್ಚ ಹೊಸ ಶೋ ಬಾಯ್ಸ್ ವರ್ಸಸ್ ಗರ್ಲ್ಸ್ ಆರಂಭವಾಗಿ ಒಂದು ತಿಂಗಳು ಆಗಿದೆ.

ಇದನ್ನೂ ಓದಿ: ಐಶ್ವರ್ಯಾ ಸಿಂಧೋಗಿ ಮನೆಗೆ ಮೋಕ್ಷಿತಾ ಪೈ ಸರ್‌ಪ್ರೈಸ್‌ ಎಂಟ್ರಿ; ಅಸಲಿಗೆ ಬಂದಿದ್ದು ಯಾರಿಗೋಸ್ಕರ ಗೊತ್ತಾ?

publive-image

ಈ ಒಂದು ತಿಂಗಳಲ್ಲಿ ಬಾಯ್ಸ್ ಹಾಗೂ ಗರ್ಲ್ಸ್ ಮಧ್ಯೆ ಡ್ಯಾನ್ಸ್ ಯುದ್ಧ, ಸಂಗೀತ ಸಮರ ಸೇರಿದಂತೆ ಸಾಕಷ್ಟು ವಿಚಾರ ನಡೆದಿದೆ. ಆದ್ರೆ ಬಾಯ್ಸ್ ಹಾಗೂ ಗರ್ಲ್ಸ್ ವೇದಿಕೆ ಮೇಲೆ ಮಂಜು ಪಾವಗಡ ಹಾಗೂ ಶೋಭಾ ಶೆಟ್ಟಿ ಮಧ್ಯೆ ವಾಗ್ವಾದ ನಡೆದಿದೆ. ಮಂಜು ಪಾವಗಡ ವಿರುದ್ಧ ಶೋಭಾ ಶೆಟ್ಟಿ ಕೆಂಡ ಕಾರಿದ್ದಾರೆ.

ಕಲರ್ಸ್​ ಕನ್ನಡ ರಿಲೀಸ್ ಮಾಡಿದ ಹೊಸ ಪ್ರೋಮೋದಲ್ಲಿ ಮಂಜು ಅವರ ಮಾತಿಗೆ ಏಕಾಏಕಿ ಶೋಭಾ ಶೆಟ್ಟಿ ಸಿಟ್ಟಾಗಿದ್ದಾರೆ. ಮಂಜು ಅವರು, ನಮ್ಮ ಮನೆ ಮೇಲೆ ಬಟ್ಟೆ ಒಣಗಾಗೋಕೆ ಕಟ್ಟಿದ್ರಲ್ಲ ಹಗ್ಗ ಅದರ ಮೇಲೆ ನಡೆಯುತ್ತಿದ್ದೆ ಎಂದಿದ್ದಾರೆ. ಆ ಕೂಡಲೇ ಸಿಟ್ಟಾದ ಶೋಭಾ ಶೆಟ್ಟಿ, ಏನೋ ಕೌಂಟರ್‌ ಕೊಡಬೇಕು ಅಂತ ಕೌಂಟರ್ ಕೊಡೋದಲ್ಲ. ಆ ನಾನ್‌ ಸೆನ್ಸ್ ಕೌಂಟರ್ ಕೊಡಬೇಡಿ ಎಂದು ಕೋಪದಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment