BBK11 Season: ಬಿಗ್​ಬಾಸ್​​ನಿಂದ ಹೊರಬಂದ ಬೆನ್ನಲ್ಲೇ ಸುದೀಪ್​ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ

author-image
Ganesh Nachikethu
Updated On
BBK11: ಕೊನೆಗೂ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಸ್ಪರ್ಧಿ; ಈ ವಾರ ಶಾಕಿಂಗ್ ಎಲಿಮಿನೇಷನ್!
Advertisment
  • ಈ ವಾರ ಬಿಗ್​ ಬಾಸ್​ ಮನೆಯಲ್ಲಿ ಶಾಕಿಂಗ್​​ ಎಲಿಮಿನೇಷನ್​​
  • ಅನಿರೀಕ್ಷಿತ ತಿರುವಿನಲ್ಲಿ ಬಿಗ್​ ಬಾಸ್​​ನಿಂದ​ ಶೋಭಾ ಶೆಟ್ಟಿ ಔಟ್​
  • ಹೊರ ಬಂದ ಬೆನ್ನಲ್ಲೇ ಸುದೀಪ್​ಗೆ ನಟಿ ಶೋಭಾ ಶೆಟ್ಟಿ ಪತ್ರ..!

ಇತ್ತೀಚೆಗಷ್ಟೇ ಅನಿರೀಕ್ಷಿತ ತಿರುವಿನಲ್ಲಿ ನಟಿ ಶೋಭಾ ಶೆಟ್ಟಿ ಅವರು ಬಿಗ್ ​ಬಾಸ್​​ ಕನ್ನಡ 11ನೇ ಸೀಸನ್​​ನಿಂದ ಎಲಿಮಿನೇಟ್​ ಆಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಇವರು ಕೇವಲ ಎರಡು ವಾರಕ್ಕೆ ಬಿಗ್ ​ಬಾಸ್ ಮನೆಯಿಂದ ಹೊರಬಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅನಾರೋಗ್ಯ ಕಾರಣದಿಂದ ಬಿಗ್​ ಬಾಸ್​ ಆಡಲು ಆಗುತ್ತಿಲ್ಲ ಎಂದು ಹೊರಬಂದಿರೋ ಇವರು ಈಗ ಸುದೀರ್ಘ ಪೋಸ್ಟ್​​ ಒಂದು ಹಾಕಿದ್ದಾರೆ.

ಶೋಭಾ ಶೆಟ್ಟಿ ಪೋಸ್ಟ್​ನಲ್ಲೇನಿದೆ?

ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ. ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ. ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನಾನು ಈ ನಿರ್ಧಾರ ಮಾಡಿರುವೆ ಎಂದಿದ್ದಾರೆ ಶೋಭಾ ಶೆಟ್ಟಿ.

ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ ಹಾಗು ನಿನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು ಎಂದಿದ್ದಾರೆ.

ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ’ ಎಂದು ಶೋಭಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: BBK11: ಕೊನೆಗೂ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಸ್ಪರ್ಧಿ; ಈ ವಾರ ಶಾಕಿಂಗ್ ಎಲಿಮಿನೇಷನ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment