/newsfirstlive-kannada/media/post_attachments/wp-content/uploads/2025/04/rishabh_pant-3.jpg)
ದಿನೇ ದಿನೇ ಐಪಿಎಲ್ ರಂಗೇರುತ್ತಿದೆ. ಟ್ವಿಸ್ಟ್ ಆ್ಯಂಡ್ ಟರ್ನ್ಸ್ ಜೊತೆಗೆ ರೋಚಕ ಪಂದ್ಯಗಳ ಹಬ್ಬದೂಟವೇ ಫ್ಯಾನ್ಸ್ಗೆ ಸಿಗುತ್ತಿದೆ. ಈ ನಡುವೆ ಈ ಎರಡು ತಂಡಗಳ ನಾಯಕರ ಬದಲಾವಣೆಯ ಸುದ್ದಿ ಸಖತ್ ಸೌಂಡ್ ಮಾಡ್ತಿದೆ.
ಐಪಿಎಲ್ ಶುರುವಾಗಿ ಎರಡು ವಾರಗಳಷ್ಟೇ ಕಳೆದಿವೆ. ಒಂದಕ್ಕಿಂತ ಒಂದು ಮೆಗಾ ಬ್ಯಾಟಲ್ ಐಪಿಎಲ್ನಲ್ಲಿ ನಡೀತಿದೆ. ಬಲಿಷ್ಠ ಹಾಗೂ ಚಾಂಪಿಯನ್ ಟೀಮ್ಸ್ಗಳು ಮಕಾಡೆ ಮಲಗ್ತಿದ್ರೆ ಟೂರ್ನಿಯಲ್ಲಿ ಟ್ರೋಫಿಯನ್ನೇ ಗೆಲ್ಲದ ಟೀಮ್ಸ್, ಸಾಲಿಡ್ ಆಟವನ್ನಾಡ್ತಿವೆ. ಆದ್ರೆ, ರೋಚಕ ಪಂದ್ಯಗಳ ಆಟದ ನಡುವೆಯೇ ಕೆಲ ತಂಡಗಳಲ್ಲಿ ನಾಯಕತ್ವದ ಬದಲಾವಣೆಯ ಕೂಗು ಕೇಳಿ ಬರುತ್ತಿದೆ. ಈ ಪೈಕಿ ಒಂದು ಲಕ್ನೋ ಸೂಪರ್ ಜೈಂಟ್ಸ್.
ಇದನ್ನೂ ಓದಿ: ಮ್ಯಾಚ್ ಸೋಲು, ರಿಷಭ್ ಪಂತ್ ಹಿಂದೆ ಬಿದ್ದ ಓನರ್ ಸಂಜೀವ್ ಗೋಯೆಂಕಾ.. ಮೈದಾನದಲ್ಲೇ ಫುಲ್ ಕ್ಲಾಸ್?
ಲಕ್ನೋ ನಾಯಕತ್ವದಿಂದ ರಿಷಭ್ ಪಂತ್ಗೆ ಕೊಕ್..?
ಕಳಪೆ ಆಟ.. ಬದಲಾವಣೆ ಬಗ್ಗೆ ನಡೀತಿದೆ ಚರ್ಚೆ..!
ರಿಷಭ್ ಪಂತ್.. ಐಪಿಎಲ್ನ 27 ಕೋಟಿ ಒಡೆಯ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ. ಈ ಸೀಸನ್ನಲ್ಲಿ ಪಂತ್, ನಾಯಕನಾಗಿ ತಂಡವನ್ನು ಮುನ್ನಡೆಸಿದ್ದು ಜಸ್ಟ್ ನಾಲ್ಕೇ ನಾಲ್ಕು ಪಂದ್ಯ. ಆದ್ರೆ, ನಾಲ್ಕು ಪಂದ್ಯಗಳ ಬೆನ್ನಲ್ಲೇ ಪಂತ್ ಪಟ್ಟಾಭಿಷೇಕದಿಂದ ಕೆಳಗಿಳಿಸುವ ಚಿಂತನ, ಮಂಥನಗಳು ನಡೀತಿವೆ. ಇದಕ್ಕೆ ಕಾರಣ ಪಂತ್ ಕ್ಯಾಪ್ಟನ್ಸಿಯ ಜೊತೆ ಕಳಪೆ ಆಟ.
ನಾಯಕನಾಗಿ ರಿಷಭ್ ಪಂತ್, 4 ಪಂದ್ಯಗಳ ಪೈಕಿ ಎರಡನ್ನ ಗೆದ್ದಿದ್ದಾರೆ. ಆದ್ರೆ, ಕ್ಯಾಪ್ಟನ್ಸಿಯಲ್ಲಿ ಇಂಪ್ರೆಸ್ಸಿಂಗ್ ಮಾಡಿದ್ದು ಅಷ್ಟಕ್ಕಷ್ಟೇ. ಇದಿಷ್ಟೇ ಅಲ್ಲ. ಕಳೆದ 4 ಪಂದ್ಯಗಳಿಂದ ಪಂತ್, ಆಟವೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಹೆಜ್ಜೆ ಹಾಕ್ತಿರುವ ಪಂತ್, ಕಳೆದ 4 ಪಂದ್ಯಗಳಿಂದ ಗಳಸಿದ ರನ್ ಜಸ್ಟ್ 19. ಆದ್ರೀಗ ಇದೇ ಲಕ್ನೋ ಸೂಪರ್ ಜೈಂಟ್ಸ್ ಮ್ಯಾನೇಜ್ಮೆಂಟ್ಗೆ ಹೊಸ ತಲೆನೋವಾಗಿದೆ. ಹೀಗಾಗಿ ಪಂತ್ಗೆ ಕೊಕ್ ನೀಡಿ ಹೊಸ ನಾಯಕನ ನೇಮಿಸುವ ಬಗ್ಗೆ ಗುಸುಗುಸು ನಡೀತಿದೆ.
ನಿಕೋಲಸ್ ಪೂರನ್ಗೆ ಪಟ್ಟ ಕಟ್ಟಲು ಚಿಂತನೆ..!?
ರಿಷಭ್ ಪಂತ್ ಬ್ಯಾಟಿಂಗ್ ಬಗ್ಗೆ ತೀವ್ರ ತಲೆಕೆಡಿಸಿಕೊಂಡಿರುವ ಲಕ್ನೋ, ಕರಿಬಿಯನ್ ದೈತ್ಯ ನಿಕೋಲಸ್ ಪೂರನ್ಗೆ ಪಟ್ಟ ಕಟ್ಟಲು ಉತ್ಸುಕವಾಗಿದೆ. ಯಾಕಂದ್ರೆ, ಇತರೆ ಲೀಗ್ಗಳಲ್ಲಿ ನಾಯಕತ್ವದ ಜೊತೆಗೆ ಬ್ಯಾಟಿಂಗ್ನಲ್ಲಿ ಕಮಾಲ್ ಮಾಡಿರುವ ನಿಕೋಲಸ್ ಪೂರನ್, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಿದೆ. ಹೀಗಾಗಿ ಪಂತ್ ಬದಲಿಗೆ ನಿಕೋಲಸ್ ಪೂರನ್ಗೆ ಪಟ್ಟ ಕಟ್ಟುವುದು ಒಳಿತು ಅನ್ನೋದು ಮ್ಯಾನೇಜ್ಮೆಂಟ್ ಲೆಕ್ಕಾಚಾರ. ಆದ್ರೆ, ಈ ಸೀಸನ್ನಲ್ಲೇ ಕಟ್ತಾರಾ ಅನ್ನೋದೇ ಪ್ರಶ್ನೆ.
ಆರೆಂಜ್ ಆರ್ಮಿಯಲ್ಲಿ ನಡೀತಿದೆ ಭವಿಷ್ಯದ ಪ್ಲಾನ್..!
ಪ್ಯಾಟ್ ಕಮಿನ್ಸ್ ಬದಲಿಗೆ ನಿತಿಶ್ ರೆಡ್ಡಿಗೆ ಪಟ್ಟ..?
ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲೂ ನಾಯಕತ್ವದ ಬದಲಾವಣೆ ಚರ್ಚೆ ಜೋರಾಗಿದೆ. ಚಾಂಪಿಯನ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಬದಲಿ ನಾಯಕ ಹುಡುಕಾಟಕ್ಕೆ ಮ್ಯಾನೇಜ್ಮೆಂಟ್, ಈಗಾಗಲೇ ಕೈ ಹಾಕಿದೆ. ಆದ್ರೆ, ಪ್ರಸಕ್ತ ಸೀಸನ್ನಲ್ಲಿ ಪ್ಯಾಟ್ ಕಮಿನ್ಸ್ರನ್ನೇ ಮುಂದುವರಿಸುವ ಪ್ಲ್ಯಾನ್ನಲ್ಲಿರುವ ಸನ್ ರೈಸರ್ಸ್, ಭವಿಷ್ಯದ ದೃಷ್ಟಿಯಿಂದ ಯಂಗ್ ಸ್ಟರ್ ನಿತಿಶ್ ಕುಮಾರ್ ರೆಡ್ಡಿಗೆ ಪಟ್ಟ ಕಟ್ಟುವ ಇರಾದೆಯಲ್ಲಿದೆ. ಮುಂದಿನ ಸೀಸನ್ಗೂ ಮುನ್ನ ಈ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗ್ತಿದೆ. ಆದ್ರೆ, ಇದಕ್ಕೆಲ್ಲಾ ಕಾಲವೇ ಉತ್ತರಿಸಬೇಕು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ